ಗಂಡ -ಹೆಂಡತಿ ಜಗಳದಲ್ಲಿ ಹುಲಿಗೆ ಆಹಾರವಾದ ಅತ್ತೆ!
ಗಂಡ-ಹೆಂಡತಿಯ ನಡುವಿನ ಜಗಳದಿಂದ ಯುವತಿಯ ತಾಯಿ ಹುಲಿಯ ಬಾಯಿಗೆ ಆಹಾರವಾದ ದಾರುಣ ಘಟನೆ ಚೀನಾದ ಬೀಜಿಂಗ್‌ನಲ್ಲಿ ನಡೆದಿದೆ.

ಬೀಜಿಂಗ್: ಗಂಡ-ಹೆಂಡತಿಯ ನಡುವಿನ ಜಗಳದಿಂದ ಯುವತಿಯ ತಾಯಿ ಹುಲಿಯ ಬಾಯಿಗೆ ಆಹಾರವಾದ ದಾರುಣ ಘಟನೆ ಚೀನಾದ ಬೀಜಿಂಗ್‌ನಲ್ಲಿ ನಡೆದಿದೆ.
ಹುಲಿ ದಾಳಿಗೆ ಸಿಲುಕಿ ಯುವತಿ ಸಹ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
Watch Video Here
ಕುಟುಂಬವೊಂದು ಬದಾಲಿಂಗ್ ರಾಷ್ಟ್ರೀಯ ಉದ್ಯಾನಕ್ಕೆ ಭಾನುವಾರ ವೀಕೆಂಡ್ ಟ್ರಿಪ್ ಬಂದಿತ್ತು. ಉದ್ಯಾನದಲ್ಲಿ ನಿರ್ಮಿಸಲಾಗಿರುವ ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಗಂಡನ ಜತೆ ಜಗಳ ತೆಗೆದಿದ್ದಾಳೆ. ಕಾರು ನಿಲ್ಲಿಸುವಂತೆ ಹೇಳಿದ್ದಾಳೆ. ಪ್ರಾಣಿಗಳ ದಾಳಿ ಅಪಾಯದಿಂದ ಉದ್ಯಾನದಲ್ಲಿ ವಾಹನ ನಿಲುಗಡೆ ನಿಷೇಧಿಸಿದ್ದರೂ ಲೆಕ್ಕಿಸದೆ ಆಕೆ ಕಾರಿನಿಂದ ಹೊರಗೆ ಇಳಿದಿದ್ದಾಳೆ.
ಕೂಡಲೇ ಡ್ರೈವರ್ ಸೀಟ್‌ನತ್ತ ಬಂದಿದ್ದಾಳೆ. ಕಾರಿನಿಂದ ಹೊರಗಿಳಿಯಲು ಗಂಡನೂ ತನ್ನ ಬದಿಯ ಡೋರ್ ತೆರೆದಿದ್ದಾನೆ. ಈ ವೇಳೆ ಹುಲಿಯೊಂದು ಮಿಂಚಿನಂತೆ ಎರಗಿ, ಕ್ಷಣಾರ್ಧದಲ್ಲಿ ಹೊರಗೆ ನಿಂತಿದ್ದ ಆಕೆಯನ್ನು ಎಳೆದೊಯ್ದಿದೆ. ಕೂಡಲೇ ಕಾರಿನಿಂದ ಇಳಿದ ಯುವತಿಯ ತಾಯಿ ಆಕೆಯನ್ನು ರಕ್ಷಿಸಲು ಹೋಗಿದ್ದಾಳೆ. ಅಷ್ಟರಲ್ಲಿ ಮತ್ತೊಂದು ಹುಲಿ ತಾಯಿಯ ಮೇಲೆ ಎರಗಿ ಅಲ್ಲೇ ಕೊಂದಿದೆ.
Watch Video Here
ಈ ಎಲ್ಲಾ ದೃಶ್ಯಗಳು ಉದ್ಯಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಈ ಬಗ್ಗೆ ಬದಾಲಿಂಗ್ ರಾಷ್ಟ್ರೀಯ ಉದ್ಯಾನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾರಿನಲ್ಲಿದ್ದ ಮಗು ಯಾವುದೇ ಅಪಾಯವಿಲ್ಲದೇ ಪಾರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


