ನೈಸ್ ಉಗ್ರ ದಾಳಿಯಲ್ಲಿ ಮೃತಪಟ್ಟವರಲ್ಲಿ 30 ಜನರು ಮುಸ್ಲಿಮರೇ!
ಫ್ರಾನ್ಸ್ ದೇಶದ ನೈಸ್ ನಗರದಲ್ಲಿ ನಡೆದ ಉಗ್ರರ ದಾಳಿಯಲ್ಲಿ 84 ಜನರು ಸಾವನ್ನಪ್ಪಿದ್ದು ಈ ಪೈಕಿ 30 ಜನರು ಮುಸ್ಲಿಮರೇ ಎಂದು ಫ್ರೆಂಚ್ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

ಪ್ಯಾರಿಸ್: ಫ್ರಾನ್ಸ್ ದೇಶದ ನೈಸ್ ನಗರದಲ್ಲಿ ನಡೆದ ಉಗ್ರರ ದಾಳಿಯಲ್ಲಿ 84 ಜನರು ಸಾವನ್ನಪ್ಪಿದ್ದು ಈ ಪೈಕಿ 30 ಜನರು ಮುಸ್ಲಿಮರೇ ಎಂದು ಫ್ರೆಂಚ್ ಮಾಧ್ಯಮವೊಂದು ವರದಿ ಪ್ರಕಟಿಸಿದೆ.
ದಾಳಿ ನಡೆಸಿದ ಟ್ಯುನೇಷಿಯಾ ಮೂಲದ ಉಗ್ರ ಮೊಹಮ್ಮದ್ ಲಾಹೌಯಾಜ್ ಬೌಲ್ಹೆಲ್ ನ ದಾಳಿಯಲ್ಲಿ ಟ್ಯುನೇಷಿಯಾದ 20 ಜನರು ಮೃತಪಟ್ಟಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ನೈಸ್ ನಗರದ ಇಮಾಮ್ ಮೃತಪಟ್ಟವರ ಪೈಕಿ 30 ಜನರು ಮುಸ್ಲಿಮರು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಸಾವನ್ನಪ್ಪಿದ ಮುಸ್ಲಿಮರ ಪೈಕಿ 12 ವರ್ಷ, 4 ವರ್ಷಗಳ ಮಕ್ಕಳೂ ಸೇರಿದ್ದು, ಧರ್ಮವನ್ನು ಲೆಕ್ಕಿಸದೆ ಇಲ್ಲರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂದು ನೈಸ್ ನಗರದ ಇಮಾಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


