ವಿದೇಶ

ಉಗ್ರರನ್ನು ಸ್ತುತಿಸುವ ಪಾಕಿಸ್ತಾನ, ಅನ್ಯರ ಪ್ರಾಂತ್ಯವನ್ನು ಕಬಳಿಸಲು ಯತ್ನಿಸುತ್ತಿದೆ: ವಿಶ್ವಸಂಸ್ಥೆಯಲ್ಲಿ ಭಾರತ

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣ ತಿರುಗೇಟು ನೀಡಿದ್ದು, ಉಗ್ರರ ಗುಣಗಳನ್ನು ಸ್ತುತಿಸುವ ಪಾಕಿಸ್ತಾನ ಅನ್ಯ ದೇಶದ ಪ್ರಾಂತ್ಯವನ್ನು ಪಡೆಯುವ ಬಯಕೆ ಹೊಂದಿದೆ ಎಂದು ಹೇಳಿದೆ.

ಉಗ್ರರನ್ನು ಸ್ತುತಿಸುವ ಪಾಕಿಸ್ತಾನ, ಅನ್ಯರ ಪ್ರಾಂತ್ಯವನ್ನು ಕಬಳಿಸಲು ಯತ್ನಿಸುತ್ತಿದೆ: ವಿಶ್ವಸಂಸ್ಥೆಯಲ್ಲಿ ಭಾರತ
ಸಯೀದ್ ಅಕ್ಬರುದ್ದೀನ್
Published On :

ವಿಶ್ವಸಂಸ್ಥೆ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಬುರ್ಹಾನ್ ಮುಜಾಫರ್ ವಾನಿ ಹತ್ಯೆಯನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಿರುವ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣ ತಿರುಗೇಟು ನೀಡಿದ್ದು, ಉಗ್ರರ ಗುಣಗಳನ್ನು ಸ್ತುತಿಸುವ ಪಾಕಿಸ್ತಾನ ಅನ್ಯ ದೇಶದ ಪ್ರಾಂತ್ಯವನ್ನು ಪಡೆಯುವ ಬಯಕೆ ಹೊಂದಿದೆ ಎಂದು ಹೇಳಿದೆ.

ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಮುಜಾಫರ್ ವಾನಿಯ ಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿದ ವೇಳೆ ವಿಶ್ವಸಂಸ್ಥೆಯ ಭಾರತದ ರಾಯಭಾರಿಯಾಗಿರುವ ಸಯೀದ್ ಅಕ್ಬರುದ್ದೀನ್, ಅನ್ಯ ದೇಶದ ಪ್ರಾಂತ್ಯವನ್ನು ಕಬಳಿಸಲು ಪಾಕಿಸ್ತಾನ ಭಯೋತ್ಪಾದನೆಯನ್ನು ಅಧಿಕೃತವಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಕಾಶ್ಮೀರ ವಿವಾದವನ್ನು ಕೆದಕುವುದರ ಜೊತೆಯಲ್ಲೇ ಉಗ್ರ ಮುಜಾಫರ್ ವಾನಿಯ ಹತ್ಯೆಯನ್ನು ಖಂಡಿಸಿದ ಪಾಕಿಸ್ತಾನದ ಪ್ರತಿನಿಧಿ ಮಲಿಹ ಲೋಧಿ, ವಾನಿಯನ್ನು ಕಾಶ್ಮೀರದ ನಾಯಕ ಎಂದು ಬಣ್ಣಿಸಿದ್ದು ಆತನನ್ನು ಭಾರತ ಅನ್ಯಾಯವಾಗಿ ಹತ್ಯೆ ಮಾಡಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್, ಭಯೋತ್ಪಾದಕರನ್ನು ಹೊಗಳುವ ಪಾಕಿಸ್ತಾನ ಅನ್ಯ ದೇಶದವರ ಪ್ರಾಂತ್ಯವನ್ನು ಕಬಳಿಸಲು ಭಯೋತ್ಪಾದನೆಯನ್ನು ಬಳಸಿಕೊಳ್ಳುತ್ತಿದ್ದು ಇಂತಹ ಹಿನ್ನೆಲೆಯಿಂದಲೇ ಪಾಕಿಸ್ತಾನಕ್ಕೆ ಈ ವರೆಗೂ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ವಿಭಾಗದಲ್ಲಿ ಸದಸ್ಯತ್ವ ಸಿಕ್ಕಿಲ್ಲ ಎಂದು ಟೀಕಿಸಿದ್ದಾರೆ. ಇನ್ನು ಕಾಶ್ಮೀರದ ವಿಷಯ ಪ್ರಸ್ತಾಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ, ಪಾಕಿಸ್ತಾನ ವಿಶ್ವಸಂಸ್ಥೆಯ ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.