ವಿದೇಶ

ಭಾರತ-ಪಾಕ್ ಉತ್ತಮ ಸಂಬಂಧಕ್ಕೆ ಭಯೋತ್ಪಾದನೆಯೇ ದೊಡ್ಡ ಸಮಸ್ಯೆ: ನಿತಿನ್ ಗಡ್ಕರಿ

ಪಾಕಿಸ್ತಾನದ ಜೊತೆಗೆ ಉತ್ತಮ ಸಂಬಂಧ ಹೊಂದಲು ಭಾರತ ಬಯಸುತ್ತಿದೆ. ಆದರೆ, ಭಯೋತ್ಪಾದನಾ ಕೃತ್ಯಗಳು ಈ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂದು ಕೇಂದ್ರ ಭೂ ಸಾರಿಗೆ...

ಭಾರತ-ಪಾಕ್ ಉತ್ತಮ ಸಂಬಂಧಕ್ಕೆ ಭಯೋತ್ಪಾದನೆಯೇ ದೊಡ್ಡ ಸಮಸ್ಯೆ: ನಿತಿನ್ ಗಡ್ಕರಿ
ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ
Published On :

ನ್ಯೂಯಾರ್ಕ್: ಪಾಕಿಸ್ತಾನದ ಜೊತೆಗೆ ಉತ್ತಮ ಸಂಬಂಧ ಹೊಂದಲು ಭಾರತ ಬಯಸುತ್ತಿದೆ. ಆದರೆ, ಭಯೋತ್ಪಾದನಾ ಕೃತ್ಯಗಳು ಈ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನದ ಜೊತೆಗೆ ಉತ್ತಮ ಸಂಬಂಧ ಹೊಂದಲು ಭಾರತ ಯಾವಾಗಲೂ ಬಯುಸುತ್ತಿರುತ್ತದೆ. ನಮ್ಮಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ, ಭಯೋತ್ಪಾದನಾ ಚಟುವಟಿಗಳಿಗೆ ಕುಮ್ಮಕ್ಕು ನೀಡುವುದು, ಉಗ್ರ ಸಂಘಟನೆ ವಿಧ್ವಂಸಕ ಕೃತ್ಯಗಳು ಭಾರತ ಮತ್ತು ಪಾಕಿಸ್ತಾನದ ಉತ್ತಮ ಸಂಬಂಧದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

ಇನ್ನು 18 ತಿಂಗಳೊಳಗಾಗಿ ಛಬಹಾರ್ ಬಂದರು ಅಭಿವೃದ್ಧಿ ಕಾರ್ಯವನ್ನು ಸಂಪೂರ್ಣಗೊಳಿಸುವುದಾಗಿ ವಿಶ್ವಾಸವಿದ್ದು, ಪಾಕಿಸ್ತಾನಕ್ಕೆ ಹೋಗದೆಯೇ ಬಂದರು ಮೂಲಕ ಭಾರತ ಅಫ್ಘಾನಿಸ್ತಾನ ಮತ್ತು ರಷ್ಯಾ ದೇಶಗಳನ್ನು ಸಂಪರ್ಕಿಸಲಿದೆ. ಬಂದರು ಪ್ರದೇಶದಲ್ಲಿ ಗೇಟ್ ವೇ ಇರಲಿದ್ದು, ಇದು ಭಾರತ ಉದ್ಯಮಿಗಳಿಗೆ ಹೆಚ್ಚೆಚ್ಚು ಅವಕಾಶಗಳನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.