16 ಭಾರತೀಯ ಮೀನುಗಾರರು, 3 ದೋಣಿಗಳನ್ನು ವಶಪಡಿಸಿಕೊಂಡ ಶ್ರೀಲಂಕಾ ನೌಕಾಪಡೆ
ಗುರುವಾರ ಬೆಳಗ್ಗೆ ಶ್ರೀಲಂಕಾದ ನೌಕಾಪಡೆ 16 ಭಾರತೀಯ ಮೀನುಗಾರರನ್ನು ಬಂಧಿಸಿ ಅವರಿಗೆ ಸೇರಿದ್ದ ಮೂರು ದೋಣಿಗಳನ್ನು...

Published On :
ನೆಡುಂತೀವು: ಗುರುವಾರ ಬೆಳಗ್ಗೆ ಶ್ರೀಲಂಕಾದ ನೌಕಾಪಡೆ 16 ಭಾರತೀಯ ಮೀನುಗಾರರನ್ನು ಬಂಧಿಸಿ ಅವರಿಗೆ ಸೇರಿದ್ದ ಮೂರು ದೋಣಿಗಳನ್ನು ವಶಪಡಿಸಿಕೊಂಡಿದೆ. ಮೊನ್ನೆ 3ನೇ ತಾರೀಖಿನಂದು ಐವರು ಭಾರತೀಯ ಮೀನುಗಾರರನ್ನು ಅಪಹರಿಸಿ ಅವರ ದೋಣಿಗಳನ್ನು ವಶಪಡಿಸಿಕೊಂಡಿತ್ತು. ಇದಾಗಿ ನಾಲ್ಕನೇ ದಿನಕ್ಕೆ ಮತ್ತೆ ಭಾರತೀಯ ಮೀನುಗಾರರನ್ನು ಬಂಧಿಸಿದೆ.
ಈ ಬಂಧನಕ್ಕೂ ಮುನ್ನ 57 ಮಂದಿ ಭಾರತೀಯ ಮೀನುಗಾರರು ಶ್ರೀಲಂಕಾದ ಕಸ್ಟಡಿಯಲ್ಲಿದ್ದರು.ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತಮಿಳು ಮೀನುಗಾರರ ಶೀಘ್ರ ಹಾಗೂ ಸುರಕ್ಷಿತ ಬಿಡುಗಡೆಗೆ ಮಧ್ಯೆ ಪ್ರವೇಶಿಸಬೇಕೆಂದು ಮತ್ತು ಮೀನುಗಾರರ ಬಂಧನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದ್ದರು.
ತಮಿಳುನಾಡಿನ ಮೀನುಗಾರರು ರಾಮೇಶ್ವರ ಸಮುದ್ರದಲ್ಲಿ ಸೊಂಟದವರೆಗೆ ನೀರು ತುಂಬಿಕೊಂಡು ಶ್ರೀಲಂಕಾದ ಜೈಲಿನಿಂದ ಶೀಘ್ರವೇ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸಿದ್ದರು.
ಶ್ರೀಲಂಕಾದ ನೌಕಾಪಡೆಯಿಂದ ದೇಶದ ದೋಣಿ ಮೀನುಗಾರರನ್ನು ಬಂಧಿಸಿರುವುದಕ್ಕೆ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದರು. ಪಾಲ್ಕ್ ಸಮುದ್ರ ತೀರದಲ್ಲಿ ಭಾರತೀಯ ಮೀನುಗಾರರಿಗೆ ಮೀನುಗಾರಿಕೆ ನಡೆಸುವ ಹಕ್ಕನ್ನು ನಿರಾಕರಿಸಲಾಗಿದೆ. ಹೀಗಾಗಿ ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ಅವರನ್ನು ಬಂಧಿಸುತ್ತಾರೆ. ಶ್ರೀಲಂಕಾ ನೌಕಾಪಡೆಯಲ್ಲಿ 57 ಭಾರತೀಯ ಮೀನುಗಾರರು ಮತ್ತು 98 ದೋಣಿಗಳು ವಶದಲ್ಲಿವೆ. ಸೌಹಾರ್ದ ನೆಲೆಗಟ್ಟಿನಲ್ಲಿ ಮೀನುಗಾರರನ್ನು ಇದುವರೆಗೆ ಶ್ರೀಲಂಕಾ ಬಿಡುಗಡೆ ಮಾಡಿದರೂ ಕೂಡ ದೋಣಿಗಳನ್ನು ಹಾಗೆಯೇ ಇಟ್ಟುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


