ಬಾಲಿವುಡ್ ನಟಿ ಶ್ರದ್ಧಾಕಪೂರ್ ರನ್ನು ಭೇಟಿಯಾಗಿದ್ದ ಢಾಕಾ ದಾಳಿ ಉಗ್ರ!
ಬಾಂಗ್ಲಾದೇಶ ರಾಜಧಾನಿ ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಬರೊಬ್ಬರಿ 20 ವಿದೇಶಿಯರ ಮಾರಣ ಹೋಮ ನಡೆಸಿದ್ದ ಉಗ್ರರ ಪೈಕಿ ಓರ್ವ ಉಗ್ರ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ರನ್ನು ಭೇಟಿ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ...

ಢಾಕಾ: ಬಾಂಗ್ಲಾದೇಶ ರಾಜಧಾನಿ ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಬರೊಬ್ಬರಿ 20 ವಿದೇಶಿಯರ ಮಾರಣ ಹೋಮ ನಡೆಸಿದ್ದ ಉಗ್ರರ ಪೈಕಿ ಓರ್ವ ಉಗ್ರ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ರನ್ನು ಭೇಟಿ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಢಾಕಾದ ಕೆಫೆ ಮೇಲೆ ದಾಳಿ ನಡೆಸಿ, ಬಾಂಗ್ಲಾ ಸೈನಿಕರ ಗುಂಡೇಟಿಗೆ ಬಲಿಯಾಗಿದ್ದ ಆರು ಉಗ್ರರ ಪೈಕಿ ಬಾಂಗ್ಲಾದೇಶ ನಿವಾಸಿ ಮತ್ತು ಉಗ್ರ ನಿಬ್ರಾಸ್ ಇಸ್ಲಾಮ್ ಎಂಬಾತ ಕಾರ್ಯಕ್ರಮವೊಂದರಲ್ಲಿ ನಟಿ ಶ್ರದ್ಧಾಕಪೂರ್ ರನ್ನು ಭೇಟಿ ಮಾಡಿದ್ದನಂತೆ. ಅಲ್ಲದೆ ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣ ಫೇಸ್ ಬುಕ್ ಗೆ ಅಪ್ಲೋಡ್ ಮಾಡಿದ್ದನಂತೆ. 2015ರ ಜೂನ್ 8ರಂದು ನಿಬ್ರಾಸ್ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಇದೀಗ ಈ ವಿಚಾರ ಬಾಂಗ್ಲಾ ಮಾತ್ರವಲ್ಲದೇ ಭಾರತದಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಉಗ್ರದಾಳಿ ಕುರಿತಂತೆ ತನಿಖೆ ನಡೆಸುತ್ತಿರುವ ಬಾಂಗ್ಲಾದೇಶ ತನಿಖಾಧಿಕಾರಿಗಳು ಮೃತ ಉಗ್ರರ ಗುರುತು ಪತ್ತೆ ಮಾಡಿದ್ದು, ಉಗ್ರರೆಲ್ಲರೂ ಶ್ರೀಮ೦ತ ಕುಟು೦ಬದಿ೦ದ ಬ೦ದವರು ಎ೦ಬ ಅಚ್ಚರಿಯ ವಿಷಯ ಬೆಳಕಿಗೆ ಬ೦ದಿದೆ. ದಾಳಿಕೋರರ ಪ್ಯೆಕಿ ನಿಬ್ರಾಸ್ ಇಸ್ಲಾಮ್ ಮಲೇಷ್ಯಾದ ಮೊನಾಸ್ ವಿವಿ ಹಾಗೂ ಢಾಕಾದ ನಾತ್‍೯ ಸೌತ್ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದನಂತೆ. ಉಳಿದವರು ಢಾಕಾದ ಪ್ರತಿಷ್ಠಿತ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು ಎಂದು ತಿಳಿದುಬಂದಿದೆ.
ಇಸ್ಲಾಮ್ ಕುರಿತಂತೆ ಹೆಚ್ಚು ಆಸಕ್ತರಾಗಿದ್ದ ಹುಡುಗರನ್ನು ಬಾಂಗ್ಲಾದೇಶ ಉಗ್ರಗಾಮಿ ಸಂಘಟನೆ ಜಮಾತ್ ಉಲ್ ಮುಜಾಹಿದ್ದೀನ್ ಉಗ್ರರು ಮನಪರಿವತ೯ನೆ ಮಾಡಿ ದಾಳಿ ನಡೆಸಲು ಪ್ರಚೋದಿಸಿದ್ದಾರೆ. ಅವರ ಮಾತಿನಂತೆ ಹುಡುಗರು ಕೆಫೆ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


