ವಿದೇಶ

ಪಠಾಣ್ ಕೋಟ್ ದಾಳಿ ಪ್ರಕರಣ: ಪಾಕಿಸ್ತಾನದಲ್ಲಿ ಶಂಕಿತ ಉಗ್ರರ ಬಂಧನ

ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ಸಂಬಂಧ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿರುವ ಪಾಕ್ ತನಿಖಾ ತಂಡ ಹಲವು ಶಂಕಿತ ಉಗ್ರರನ್ನು ವಶಕ್ಕೆ ...

ಪಠಾಣ್ ಕೋಟ್ ದಾಳಿ ಪ್ರಕರಣ: ಪಾಕಿಸ್ತಾನದಲ್ಲಿ ಶಂಕಿತ ಉಗ್ರರ ಬಂಧನ
ಗೂಗಲ್ ಮ್ಯಾಪ್
Published On :

ಇಸ್ಲಾಮಾಬಾದ್: ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ಸಂಬಂಧ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿರುವ ಪಾಕ್ ತನಿಖಾ ತಂಡ ಹಲವು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಗುಜ್ರಾನ್ವಾಲ್ , ಜೆಲೂಮ್ ಮತ್ತು ಬಹವಾಲ್ ಪುರ ಜಿಲ್ಲೆಗಳ ಮೇಲೆ ದಾಳಿ ನಡೆಸಿರುವ ಪಾಕ್ ಪಡೆ ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಹಲವು ಮಂದಿಯನ್ನು ವಶಕ್ಕೆ ಪಡೆದಿರುವ ತನಿಖಾ ತಂಡದ ಅಧಿಕಾರಿಗಳು ದಾಳಿಯಲ್ಲಿ ಬಂಧಿತರ ಕೈವಾಡ ವಿದೆಯೇ, ದಾಳಿಯಲ್ಲಿ ಯಾರ ಪಾತ್ರವಿದೆ, ಯಾರು ಇದರ ಅನುಕೂಲ ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದೆ.

ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್  ಪಠಾಣ್ ಕೋಟ್ ದಾಳಿ ಸಂಬಂಧ ತನಿಖೆಗೆ ಆದೇಶಿಸಿದ ಬೆನ್ನಲ್ಲೇ, ಪಾಕಿಸ್ತಾನ ಗುಪ್ತಚರ ದಳ, ಆಂತರಿಕ ಗುಪ್ತಚರ ಇಲಾಖೆ, ಮಿಲಿಟರಿ ಗುಪ್ತಚರ ಇಲಾಖೆ, ಫೆಡರಲ್  ತನಿಖಾ ಏಜೆನ್ಸಿ ಗಳ ಅಧಿಕಾರಿಗಳ ತನಿಖಾ ತಂಡ ರಚಿಸಿದ್ದರು.

ಪಠಾಣ್ ಕೋಟ್ ದಾಳಿಯಲ್ಲಿ ಬಂಧಿತರಿಗೆ ನಂಟು ಇದೆಯೇ ಎಂಬುದರ ಬಗ್ಗೆ ಪಾರದರ್ಶಕ ತನಿಖೆ ನಡೆಸುವಂತೆ ಪ್ರಧಾನಿ ನವಾಜ್ ಷರೀಫ್ ಉನ್ನತ ಮಟ್ಟದ ತನಿಖಾ ತಂಡಕ್ಕೆ  ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.