ಈ ವರ್ಷ ಕಪಿಮುಷ್ಟಿಗೆ ಸಿಲುಕಲಿದೆ ಚೀನಾ
ಚೀನಾ ಈ ವರ್ಷ ಕಪಿಮುಷ್ಟಿಗೆ ಸಿಲುಕಲಿದೆ. ಹೌದು, ೨೦೧೬ರ ಈ ವರ್ಷಕ್ಕೆ ಅಲ್ಲಿನ ಸೌರಮನ ಪಂಚಾಂಗದ ಪ್ರಕಾರ ಕೋತಿಯೇ ಅಧಿಪತಿ...

ಬೀಜಿಂಗ್: ಚೀನಾ ಈ ವರ್ಷ ಕಪಿಮುಷ್ಟಿಗೆ ಸಿಲುಕಲಿದೆ. ಹೌದು, ೨೦೧೬ರ ಈ ವರ್ಷಕ್ಕೆ ಅಲ್ಲಿನ ಸೌರಮನ ಪಂಚಾಂಗದ ಪ್ರಕಾರ ಕೋತಿಯೇ ಅಧಿಪತಿ.
ಹೀಗಾಗಿ ಚೀನಾ ಈ ವರ್ಷ ಕೋತಿಮಯವಾಗಲಿದೆ. ಈ ರಾಶಿಯಲ್ಲಿ ನಡೆಯುತ್ತಿರುವ ಈ ವರ್ಷ ಅತ್ಯಂತ ಶುಭದಾಯಕ ಎಂದೇ ಅಲ್ಲಿ ನಂಬಲಾಗಿದೆ. ಈ ವರ್ಷ ಜನಿಸಿದ ಮಕ್ಕಳು ಬುದ್ಧಿಶಾಲಿಗಳೆಂದೂ ಅವರು ನಂಬಿದ್ದಾರೆ. ಇದೆಲ್ಲದರ ನಡುವೆ ಕೋತಿಯ ಚಿತ್ರವುಳ್ಳ ವಸ್ತುಗಳಿಗೆ ಅಲ್ಲಿ ಸಖತ್ ಡಿಮಂಡ್ ಸೃಷ್ಟಿಯಗಿದೆ. ಭಾರತೀಯ ಸಂಪ್ರದಾಯದಲ್ಲಿ ೧೨ ರಾಶಿಗಳಿರುವಂತೆ, ಚೀನಾದಲ ೧೨ ರಾಶಿಗಳ ನಂಬಿಕೆ ಇದೆ. ಈ ರಾಶಿಗಳೆಲ್ಲವೂ ಒಂದೊಂದು ಪ್ರಾಣಿಗಳಿಗೆ ಸಂಬಂಧಿಸಿವೆ. ಹುಲಿ, ಇಲಿ, ಕುರಿ, ಕೋತಿ, ಹಂದಿ ಹೀಗೆ ಒಂದೊಂದು ರಾಶಿಗೆ ಒಂದೊಂದು ಪ್ರಾಣಿಗಳು ಅಧಿಪತಿಗಳಾಗಿವೆ.
ಅದರಂತೆ, ೨೦೧೬ನೇ ವರ್ಷ ಕೋತಿ ರಾಶಿಗೆ ಸಂಬಂಧಿಸಿದ್ದಾಗಿದ್ದು, ೨೦೧೫ರ ಕುರಿ ರಾಶಿಗೆ ಫೆಬ್ರವರಿಯಲ್ಲಿ ವಿದಾಯ ಹೇಳಲಾಗುತ್ತದೆ. ಚೀನಾದ ಹೊಸ ವರ್ಷ ಫೆಬ್ರವರಿ ೮ಕ್ಕೆ ಆರಂಭವಾಗಲಿದೆ. ಅಂದು ಅಲ್ಲಿ ವಸಂತೋತ್ಸವ. ಈ ಹಬ್ಬದಂದು, ಕೋತಿ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ. ಈ ವರ್ಷದಲ್ಲಿ ಜನಿಸಿದ ಮಕ್ಕಳ ಬುದ್ಧಿ ಹೆಚ್ಚು ಸ್ಮಾರ್ಟ್ ಆಗಿರಲಿದೆ. ಚಾಣಾಕ್ಷರು, ಕ್ರಿಯಾಶೀಲರು, ಲವಲವಿಕೆಯುಳ್ಳವರೂ ಆಗಿರುತ್ತಾರೆ ಎಂದು ಅಲ್ಲಿ ನಂಬಲಾಗಿದೆ. ಆದರಂತೆ, ಈ ಹಿಂದಿನ ಕುರಿ ವರ್ಷದಲ್ಲಿ ಜನಿಸಿದ ಮಕ್ಕಳಿಗೆ ಅದೃಷ್ಟ ಕಡಿಮೆಯಂತೆ. ಸ್ಪ್ರಿಂಗ್ ಫೆಸ್ಟಿವಲ್‌ಗಾಗಿ ಇಡೀ ಚೀನಾ ಸಜ್ಜಾಗುತ್ತಿದೆ. ಮನೆ, ಕಚೇರಿ, ಕಾರು, ಅಂಗಡಿ ಮುಂಗಟ್ಟುಗಳು ಸಿಂಗಾರಗೊಂಡಿವೆ. ಹನ್ನೆರಡು ರಾಶಿಗಳ ಚಿತ್ರಗಳುಳ್ಳ ಚಿತ್ರಪಟಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ.
ಮಾರುತಿ ಮಹಿಮೆ
ಜನ ಬಳಕೆಯ ವಸ್ತುಗಳ ಮೇಲೆಲ್ಲ ಕೋತಿಗಳ ಚಿತ್ರಗಳನ್ನ ಅಂಟಿಸಿ ವರ್ತಕರು ಮಾರಾಟ ಆರಂಭಿಸಿದ್ದಾರೆ. ಇನ್ನು ಕೋತಿಯ ಬೊಂಬೆಗಳಿಗಂತೂ ಎಲ್ಲಿಲ್ಲದ ಬೇಡಿಕೆ. ವೆಬ್ ಶಾಪಿಂಗ್‌ನಲ್ಲೂ ಕೋತಿ ಕುಣಿತವೇ ಕಾಣಿಸುತ್ತಿದೆ. ಕೈಗಡಿಯರ, ಚಾಕೊಲೆಟ್, ಬ್ರೇಸ್‌ಲೆಟ್‌ಗಳಲ್ಲಿಯೂ ಕೋತಿ ಚಿತ್ರವೇ ಕಾಣಿಸುತ್ತಿದೆ. ಹೀಗಿರುವಾಗಲೇ ಖ್ಯಾತ ಚೀನಿ ನಟ ಲೂಯಿಸ್ ಕೂ ಅವರ ‘ ಮಂಕಿ ಕಿಂಗ್ ೨’ ಕೂಡ ಈ ವರ್ಷವೇ ಬಿಡುಗಡೆಯಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


