ರಾಜಕುಮಾರಿಯ ಒಂದು ದಿನದ ಭೇಟಿಗಾಗಿ 27. ಲಕ್ಷ ರು. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ
ಥಾಯ್ಲೆಂಡ್ ರಾಜಕುಮಾರಿ ಭೇಟಿ ನೀಡುತ್ತಿರುವ ಒಂದು ದಿನದ ಭೇಟಿಗಾಗಿ ಹವಾ ನಿಯಂತ್ರಿತ ಹೊರಮನೆ ಮತ್ತು ಐಷಾರಾಮಿ ಟಾಯ್ಲೆಟ್ ನಿರ್ಮಿಸಲು 27.45 ಲಕ್ಷ ರೂ. ವೆಚ್ಚ ಮಾಡಿರುವುದು ..

ಬ್ಯಾಂಕಾಕ್: ಕಾಂಬೋಡಿಯಾದ ಬಡ ಪ್ರಾಂತ್ಯವೊಂದಕ್ಕೆ ಥಾಯ್ಲೆಂಡ್ ರಾಜಕುಮಾರಿ ಭೇಟಿ ನೀಡುತ್ತಿರುವ ಒಂದು ದಿನದ ಭೇಟಿಗಾಗಿ ಹವಾ ನಿಯಂತ್ರಿತ ಹೊರಮನೆ ಮತ್ತು ಐಷಾರಾಮಿ ಟಾಯ್ಲೆಟ್ ನಿರ್ಮಿಸಲು 27.45 ಲಕ್ಷ ರೂ. ವೆಚ್ಚ ಮಾಡಿರುವುದು ತೀವ್ರ ವಿವಾದ ಸೃಷ್ಟಿಸಿದೆ.
ಥಾಯ್ಲೆಂಡ್ ರಾಜಕುಮಾರಿ ಮಹಾಚಕ್ರಿ ಸಿರಿಂಧೋರ್ನ್ ಕಾಂಬೋಡಿಯಾಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ. ಅವರು ಮೊದಲ ದಿನ, ರತನಕ್ಕಿರಿ ಪ್ರಾಂತ್ಯದ ಸಂರಕ್ಷಿತ ಸರೋವರ ಯೀಕ್ ಲಾಹೋಮ್ ತಟದಲ್ಲಿ ಒಂದು ರಾತ್ರಿ ಕಳೆಯಲಿದ್ದಾರೆ.
ಇದಕ್ಕಾಗಿ ಸರೋವರದ ತಟದಲ್ಲಿ 8 ಚದರ ಮೀಟರ್ ವಿಸ್ತೀರ್ಣದಲ್ಲಿ ಐಷಾರಾಮಿ ಟಾಯ್ಲೆಟ್ ಹೊಂದಿರುವ ಹೊರಮನೆಯೊಂದನ್ನು ನಿರ್ಮಿಸಲಾಗಿದೆ. ಥಾಯ್ ಮೂಲದ ಎಸ್‌ಸಿಜಿ ನಿರ್ಮಾಣ ಕಂಪನಿ ಕೇವಲ 19 ದಿನಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದೆ. ರಾಜಕುಮಾರಿ ಮಹಾಚಕ್ರಿ ಸಿರಿಂಧೋರ್ನ್ ಅವರ ಖಾಸಗಿ ಬಳಕೆಗೆಂದೇ ಐಷಾರಾಮಿ ಟಾಯ್ಲೆಟ್ ನಿರ್ಮಿಸಲಾಗಿದೆ.
ರಾಜಕುಮಾರಿ ನಿರ್ಗಮನದ ಬಳಿಕ ಈ ಐಷಾರಾಮಿ ಶೌಚಾಲಯವನ್ನು ಕೆಡವಲಾಗುತ್ತದಂತೆ. ವಿಶೇಷವೆಂದರೆ, ಮನೆ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕಚ್ಚಾವಸ್ತುಗಳನ್ನು ಬ್ಯಾಂಕಾಕ್‌ನಿಂದಲೇ ತರಿಸಲಾಗಿತ್ತಂತೆ. ರಾಜಕುಮಾರಿಗೆ ಶೌಚಾಲಯ ನಿರ್ಮಿಸಲು ಉತ್ತಮ ಗುಣಮಟ್ಟದ ಟಾಯ್ಲೆಟ್ ನಿರ್ಮಾಣಕ್ಕೆ ತಗುಲುವ ವೆಚ್ಚಕ್ಕಿಂತ 130 ಪಟ್ಟು ಹೆಚ್ಚಿನ ಹಣ ಖರ್ಚು ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


