ವಿದೇಶ

ನಾನೊಬ್ಬ ಮುಸ್ಲಿಂ, ಆದರೂ ನಿಮ್ಮನ್ನು ಇಷ್ಟ ಪಡ್ತೇನೆ

ಈಜಿಪ್ಟ್ ಮೂಲದ ಉದ್ಯಮಿ ಎಲ್ಹಾಮಿ ಇಬ್ರಾಹಿಂ ಓರ್ವ ಮುಸ್ಲಿಂನಾಗಿದ್ದರೂ ಆತನಿಗೆ ಇತರರ ಮುಸ್ಲಿಮರನ್ನು ಕಂಡರೆ ಆಗದು. ಆದರೆ ಅಮೆರಿಕಾ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್...

ನಾನೊಬ್ಬ ಮುಸ್ಲಿಂ, ಆದರೂ ನಿಮ್ಮನ್ನು ಇಷ್ಟ ಪಡ್ತೇನೆ
ಡೊನಾಲ್ಡ್ ಟ್ರಂಪ್
Published On :

ಕ್ಯಾರೋಲಿನಾ: ಈಜಿಪ್ಟ್ ಮೂಲದ ಉದ್ಯಮಿ ಎಲ್ಹಾಮಿ ಇಬ್ರಾಹಿಂ ಓರ್ವ ಮುಸ್ಲಿಂನಾಗಿದ್ದರೂ  ಆತನಿಗೆ ಇತರರ ಮುಸ್ಲಿಮರನ್ನು ಕಂಡರೆ ಆಗದು.  ಆದರೆ ಅಮೆರಿಕಾ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರನ್ನು ಕಂಡರೆ ಇಷ್ಟ ಅಂತಾ ಹೇಳಿಕೊಂಡಿದ್ದಾನೆ.

ಅಮೆರಿಕಾಗೆ 1981 ರಲ್ಲಿ  ವಲಸೆ ಬಂದು ಎರಡು ದಶಕಗಳ ನಂತರ ಅಲ್ಲಿನ ಪೌರತ್ವವನ್ನು ಪಡೆದ ಇಬ್ರಾಹಿಂ ಗೆ ಈಜಿಪ್ಟ್ ದೇಶದಲ್ಲಾಗುತ್ತಿರುವ ಬದಲಾವಣೆಗಳು ಗಾಬರಿ ತಂದಿವೆ. ಅಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆ ಹಾಗೂ ಬಡತನ ಹಲವಾರು ಯುವಕರನ್ನು  ಧಾರ್ಮಿಕ ಭಯೋತ್ಪಾದನೆಯತ್ತ ಹೆಜ್ಜೆ ಇಡುವಂತೆ ಮಾಡಿದೆ ಎಂಬುದು ಇಬ್ರಾಹಿಂ ಅಭಿಪ್ರಾಯ.

ಮುಸ್ಲಿಮರು ಅಮೆರಿಕಾದ ಸುರಕ್ಷತೆಗೆ ಬೆದರಿಕೆಯೊಡ್ಡುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವ ತನಕ ಅವರ ಅಮೆರಿಕಾ ಪ್ರವೇಶಕ್ಕೆ ನಿಷೇಧ ಹೇರಬೇಕೆಂಬ ಟ್ರಂಪ್ ಪ್ರಸ್ತಾಪವನ್ನು ಇಬ್ರಾಹಿಂ ಸ್ವಾಗತಿಸಿದ್ದಾರೆ.

ನಿಯಮಿತವಾಗಿ ಮಸೀದಿಗೆ ಹೋಗದ ತಾನು  ದಕ್ಷಿಣ ಕ್ಯಾರೋಲಿನಾದ ಮೈರ್ಟಲ್ ಬೀಚ್ ರ್ಯಾಲಿ ನಡೆಸಿದ್ದ ಟ್ರಂಪ್ ಅವರನ್ನು ಭೇಟಿಯಾಗಿ ನಾನೊಬ್ಬ ಮುಸ್ಲಿಂ ಹಾಗೂ ನಿಮ್ಮನ್ನು ಇಷ್ಟ ಪಡುತ್ತೇನೆ ಎಂದು ಹೇಳಿದ ವಿಡೀಯೋವನ್ನು ಫೇಸ್ ಬುಕ್ ನಲ್ಲಿ ಇಬ್ರಾಹಿಂ ಅಪ್ ಲೋಡ್ ಮಾಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.