ವಿದೇಶ

ಢಾಕಾದಲ್ಲಿ ಐಎಸ್ ಉಗ್ರರಿಂದ ಅರ್ಚಕನ ಹತ್ಯೆ

ಬಾಂಗ್ಲಾದೇಶದ ಉತ್ತರ ಭಾಗದಲ್ಲಿರುವ ಪಂಚ್‌ಗಢ್ ಜಿಲ್ಲೆಯ ದೇಬೀಗಂಜ್ ಉಪಾಜಿಲಾದಲ್ಲಿರುವ ಸಂತಗೌರ್‌ಹಿಯೋ ದೇವಾಲಯದ ಅರ್ಚಕನನ್ನು ದೇವಾಲಯದ...

ಢಾಕಾದಲ್ಲಿ ಐಎಸ್ ಉಗ್ರರಿಂದ ಅರ್ಚಕನ ಹತ್ಯೆ
ಸಾಂದರ್ಭಿಕ ಚಿತ್ರ
Published On :
ಢಾಕಾ: ಬಾಂಗ್ಲಾದೇಶದ ಉತ್ತರ ಭಾಗದಲ್ಲಿರುವ ಪಂಚ್‌ಗಢ್ ಜಿಲ್ಲೆಯ ದೇಬೀಗಂಜ್ ಉಪಾಜಿಲಾದಲ್ಲಿರುವ ಸಂತಗೌರ್‌ಹಿಯೋ ದೇವಾಲಯದ ಅರ್ಚಕನನ್ನು ದೇವಾಲಯದ ಅಂಗಳದಲ್ಲೇ ಹತ್ಯೆಗೈದ ಘಟನೆಯ ಜವಾಬ್ದಾರಿಯನ್ನು ಇಸ್ಲಾಮಿಕ್ ಸ್ಟೇಟ್ ವಹಿಸಿಕೊಂಡಿದೆ. ಜವಾಬ್ದಾರಿ ವಹಿಸಿಕೊಂಡಿರುವ ಬಗ್ಗೆ ಇಸ್ಲಾಮಿಕ್ ಸ್ಟೇಟ್  ಸಾಮಾಜಿಕ ತಾಣದಲ್ಲಿ ಹೇಳಿಕೆ ನೀಡಿತ್ತು.
50ರ ಹರೆಯದ ಜೋಗೇಶ್ವರ್ ರಾಯ್ ಎಂಬ ಅರ್ಚಕನನ್ನು ಐಎಸ್ ಉಗ್ರರು ಶನಿವಾರ ಹತ್ಯೆಗೈದಿದ್ದರು. ರಾಯ್ ಜತೆಗಿದ್ದ ಇಬ್ಬರು ಸಹಾಯಕರಿಗೆ ಗುಂಡೇಟು ತಗಲಿದೆ. ಮೊಟಾರ್ ಬೈಕಿನಲ್ಲಿ ಬಂದ ಮೂವರು ಆಗಂತುಕರು ಈ ದಾಳಿ ನಡೆಸಿದ್ದಾರೆ.
ದೇವಾಲಯಕ್ಕೆ ಕಲ್ಲು ಬಿಸಾಡಿದ ಸದ್ದು ಕೇಳಿ ಹೊರಗೆ ಬಂದು ನೋಡಿದ ಅರ್ಚಕನನ್ನು ದಾಳಿಕೋರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ನಂತರ ಕೈಬಾಂಬ್ ಎಸೆದು ಉಗ್ರರು ಪರಾರಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.