ಹಸಿವಿನಿಂದ ಬಳಲಿ ನೀರು ಕುಡಿಯುತ್ತಿರುವ ಬಾಲಕನ ಫೋಟೊ: ಬೃಹತ್ ದೇಣಿಗೆಗೆ ಸ್ಫೂರ್ತಿ
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಫೋಟೊವೊಂದು ಇದೀಗ ಒಂದು ದೇಶಕ್ಕೆ ಬೃಹತ್ ಪ್ರಮಾಣದಲ್ಲಿ ದೇಣಿಗೆ ನೀಡಲು ಸ್ಫೂರ್ತಿ ನೀಡುತ್ತಿದೆ...

ವಾಷಿಂಗ್ಟನ್: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಫೋಟೊವೊಂದು ಇದೀಗ ಒಂದು ದೇಶಕ್ಕೆ ಬೃಹತ್ ಪ್ರಮಾಣದಲ್ಲಿ ದೇಣಿಗೆ ನೀಡಲು ಸ್ಫೂರ್ತಿ ನೀಡುತ್ತಿದೆ.
ವಿದೇಶಿ ಯುವತಿಯೊಬ್ಬಳು ಹಸಿವಿನಿಂದ ಬಳಲಿದ್ದ ಪುಟ್ಟ ಬಾಲಕನಿಗೆ ನೀರು ಕುಡಿಸುತ್ತಿರುವ ಫೋಟೊ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಡತನದ ಬೇಗುದಿಯಲ್ಲಿ ಬೇಯುತ್ತಿರುವ ನೈಜಿರಿಯಾದಲ್ಲಿ ತೆಗೆದ ಈ ಫೋಟೊ ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ವದ ಮೂಲೆ ಮೂಲೆಯನ್ನು ತಲುಪಿದೆ. ಈ ಹೃದಯ ಹಿಂಡುವ ಫೋಟೊವನ್ನು ಲಕ್ಷಾಂತರ ಮಂದಿ ಷೇರ್ ಮಾಡಿದ್ದು, ಇದೀಗ ಹಲವು ಸಂಘ ಸಂಸ್ಥೆಗಳು ನೈಜಿರಿಯಾಗೆ ಆರ್ಥಿಕವಾಗಿ ನೆರವಾಗಲು ಮುಂದೆ ಬಂದಿದ್ದಾರೆ.
ಅಲ್ಲದೆ ವಿಶ್ವದ ನಾನಾ ಭಾಗದಲ್ಲಿರುವ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳಿಂದ ಆರ್ಥಿಕ ನೆರವು ಬರುತ್ತಿದ್ದು, ಬೃಹತ್ ಪ್ರಮಾಣದಲ್ಲಿ ನೈಜಿರಿಯಾಗೆ ದೇಣಿಗೆ ಸಂಗ್ರಹವಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಆಫ್ರಿಕಾ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿ ಫೌಂಡೇಶನ್ ಸಂಸ್ಥೆ ಫೋಟೊದಲ್ಲಿರುವ ಮಗುವನ್ನು ತನ್ನ ವಶಕ್ಕೆ ಪಡೆದುಕೊಂಡು ಚಿಕಿತ್ಸೆ ನೀಡುತ್ತಿರುವುದಾಗಿ ಹೇಳಿಕೊಂಡಿದೆ. ಸಂಸ್ಥೆಯ ಮುಖ್ಯಸ್ಥ ಅಂಜಾ ರಿಂಗ್ರೆನ್ ಲಾವೆನ್ ಅವರು ಹೇಳುವಂತೆ 2ರಿಂದ 3 ವರ್ಷ ವಯಸ್ಸಿನ ಆ ಮಗುವನ್ನು ಹಾಗೆಯೇ ರಸ್ತೆಯಲ್ಲಿ ಬಿಟ್ಟರೆ ಖಂಡಿತ ಅದು ಸಾವನ್ನಪ್ಪುತ್ತದೆ. ಹೀಗಾಗಿ ನಮ್ಮ ಸಂಸ್ಥೆ ಆ ಮಗುವನ್ನು ತನ್ನ ವಶಕ್ಕೆ ತೆಗೆದುಕೊಂಡು ಚಿಕಿತ್ಸೆ ನೀಡುತ್ತಿದೆ.
ಕೇವಲ ಅದೊಂದು ಮಗುವಷ್ಟೇ ಅಲ್ಲದೆ ಆ ಭಾಗದಲ್ಲಿ ಬಡತನ ಮತ್ತು ಆಹಾರವಿಲ್ಲದೆ ನರಳುತ್ತಿರುವ ಮಕ್ಕಳನ್ನು ಗುರುತಿಸಿ ಆ ಎಲ್ಲ ಮಕ್ಕಳನ್ನು ತಮ್ಮ ಸಂಸ್ಥೆ ವಶಕ್ಕೆ ಪಡೆಯಲಿದೆ ಎಂದು ಲಾವನ್ ಹೇಳಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಲಾವನ್ ಬರೆದುಕೊಂಡಿದ್ದು, ಲಾವನ್ ಅವರ ಪೋಸ್ಟ್ ಗೆ ಲಕ್ಷಾಂತರ ಲೈಕ್ ಗಳು ಮತ್ತು ಷೇರ್ ಗಳು ಬಂದಿವೆ.
ಈ ಹಿಂದೆ 1993ರಲ್ಲಿ ಇಂತಹುದೇ ಫೋಟೊವೊಂದು ಸಂಚಲನ ಸೃಷ್ಟಿ ಮಾಡಿತ್ತು.

ಹಸಿವಿನಿಂದ ಬಳಲಿ ಸಾವಿನಂಚಿಲ್ಲಿದ್ದ ಪುಟ್ಟ ಬಾಲಕಿಯನ್ನು ತಿನ್ನಲು ಹದ್ದು ಕಾಯುತ್ತಿರುವ ಫೋಟೊ ವಿಶ್ವಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು. ಅಲ್ಲದೆ ಈ ಫೋಟೊ ತೆಗೆದ ಛಾಯಾಗ್ರಾಹಕ ಕೆವಿನ್ ಕಾರ್ಟರ್ ವಿರುದ್ಧವೂ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು. ಅಂತಿಮವಾಗಿ ಈ ಫೋಟೊ ತೆಗೆದ ಆಫ್ರಿಕನ್ ಛಾಯಾಗ್ರಾಹಕ ಕೆವಿನ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


