ವಿದೇಶ

ಬಲೂನ್ ನಲ್ಲಿ ಕಳಿಸಿದ್ದ 145 ವರ್ಷ ಹಳೆಯ ಪತ್ರ ಪತ್ತೆ

ಸುಮಾರು 145 ವರ್ಷಗಳಷ್ಟು ಹಳೆಯದಾದ ಅಪರೂಪದ ಪತ್ರವೊಂದು ಆಸ್ಚ್ರೇಲಿಯಾದಲ್ಲಿ ಪತ್ತೆಯಾಗಿದ್ದು, ಪತ್ರವನ್ನು ಪತ್ರಗಾರದಲ್ಲಿ ಸುರಕ್ಷಿತವಾಗಿಡಲಾಗಿದೆ...

ಬಲೂನ್ ನಲ್ಲಿ ಕಳಿಸಿದ್ದ 145 ವರ್ಷ ಹಳೆಯ ಪತ್ರ ಪತ್ತೆ
145 ವರ್ಷ ಹಳೆಯ ಪತ್ರ (ಸಂಗ್ರಹ ಚಿತ್ರ)
Published On :

ಸಿಡ್ನಿ: ಸುಮಾರು 145 ವರ್ಷಗಳಷ್ಟು ಹಳೆಯದಾದ ಅಪರೂಪದ ಪತ್ರವೊಂದು ಆಸ್ಚ್ರೇಲಿಯಾದಲ್ಲಿ ಪತ್ತೆಯಾಗಿದ್ದು, ಪತ್ರವನ್ನು ಪತ್ರಾಗಾರದಲ್ಲಿ ಸುರಕ್ಷಿತವಾಗಿಡಲಾಗಿದೆ.

ಮೂಲಗಳ ಪ್ರಕಾರ ಸುಮಾರು 145 ವಷ೯ಗಳ ಹಿ೦ದೆ ಫ್ರಾನ್ಸ್ ಮೂಲದ ವ್ಯಕ್ತಿ ಚಾಲ್ಸ್‍೯ ಮೆಸ್ನಿಯರ್ ಎ೦ಬಾತ ತನ್ನ ತಾಯಿಗೆ ಬರೆದಿದ್ದ ಪತ್ರ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಪ್ರಸ್ತುತ ಈ  ಅಪರೂಪದ ಪತ್ರವನ್ನು ಆಸ್ಟ್ರೇಲಿಯಾದ ಪತ್ರಾಗಾರದಲ್ಲಿ ಸುರಕ್ಷಿತವಾಗಿಡಲಾಗಿದ್ದು, ಈ ಪತ್ರವು ಸೇರಬೇಕಾಗಿದ್ದ ಜಾಗದ ಕುರಿತು ಇದೀಗ ಪತ್ರಾಗಾರ ಇಲಾಖೆ ಹುಡುಕಾಟ ಆರಂಭಿಸಿದೆ.

1870ರಲ್ಲಿ ನಡೆದ ಫ್ರಾನ್ಸ್ ಮತ್ತು ರಷ್ಯಾ ಯುದ್ಧದಲ್ಲಿ ಜಮ೯ನಿಯು ಪ್ಯಾರಿಸನ್ನು ನಾಲ್ಕು ತಿ೦ಗಳಿಗೂ ಅಧಿಕ ಕಾಲ ಸುತ್ತುವರಿದಿತ್ತು. ಈ ಸಂದರ್ಭದಲ್ಲಿ ಪ್ಯಾರಿಸ್ ನಿಂದ ಹೊರಹೋಗಲು  ಯಾವುದೇ ಮಾರ್ಗಗಳಿರಲಿಲ್ಲ. ಹೀಗಾಗಿ ಆ ಸಮಯದಲ್ಲಿ ಅಲ್ಲಿ ಬಿಸಿಗಾಳಿಯ ಬಲೂನ್ ಮೂಲಕ ಪತ್ರ ವ್ಯವಹಾರ ನಡೆಸಲಾಗುತ್ತಿತ್ತು. ಇದೇ ರೀತಿ ಈ ಪತ್ರವನ್ನು ಕೂಡ ಬಿಸಿ ಗಾಳಿ ಬಲೂನು  ಮೂಲಕ ರವಾನಿಸಲಾಗಿತ್ತಾದರೂ, ಆಗ ಮಾರ್ಗ ತಪ್ಪಿದ ಬಲೂನ್ ಪ್ಯಾರಿಸ್ ಬಿಟ್ಟು ಹೊರಗಡೆ ಹಾರಿತ್ತು.

ಇದೀಗ ಸುಮಾರು 145 ವರ್ಷಗಳ ಬಳಿಕ ಈ ಪತ್ರ ಪ್ಯಾರಿಸ್ ನಿಂದ ಸುಮಾರು 10 ಸಾವಿರ ಮೈಲುಗಳನ್ನು ಸಂಚರಿಸಿ ಆಸ್ಚ್ರೇಲಿಯಾದ ಸಿಡ್ನಿಯಲ್ಲಿ ಪತ್ತೆಯಾಗಿದ್ದು, ಪತ್ರವನ್ನು ಆಸ್ಟ್ರೇಲಿಯಾದ  ಪತ್ರಾಗಾರದಲ್ಲಿ ಶೇಖರಿಸಿಡಲಾಗಿದೆ. 8/5 ಇಂಚಿರುವ ಪತ್ರ 1870 ಅಥವಾ 1871ರಲ್ಲಿ ಬರೆದಿರಬಹುದು ಎಂದು ಹೇಳಲಾಗುತ್ತಿದೆ. 145 ವಷ೯ಗಳ ಹಿ೦ದಿನ ಪತ್ರವಾಗಿದ್ದರಿ೦ದ ಇದಕ್ಕೆ  ಐತಿಹಾಸಿಕ ಹಿನ್ನೆಲೆಯಿದ್ದು, ಇದು ಎಲ್ಲಿ೦ದ ಬ೦ದಿದೆ ಎನ್ನುವ ಕುರಿತು ಖಚಿತ ಮಾಹಿತಿಯಿಲ್ಲ ಎ೦ದು ಪತ್ರ ಸ೦ಗ್ರಹಾಲಯ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.