ವಿದೇಶ

ಬಾಂಗ್ಲಾದೇಶದಲ್ಲಿ ನಿಷೇಧಿತ ಸಂಘಟನೆಯ ಐವರು ಉಗ್ರರ ಬಂಧನ

ನಿಷೇಧಿತ ಸಂಘಟನೆಯ ಐವರು ಉಗ್ರರನ್ನು ಢಾಕಾದಲ್ಲಿ ಬಂಧಿಸಲಾಗಿದ್ದು, ಅವರಿಂದ ಸ್ಫೋಟಕಗಳು ಮತ್ತು ಬಾಂಬ್ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು

ಬಾಂಗ್ಲಾದೇಶದಲ್ಲಿ ನಿಷೇಧಿತ ಸಂಘಟನೆಯ ಐವರು ಉಗ್ರರ ಬಂಧನ
ಸಾಂದರ್ಭಿಕ ಚಿತ್ರ
Published On :
ಢಾಕಾ: ನಿಷೇಧಿತ ಸಂಘಟನೆಯ ಐವರು ಉಗ್ರರನ್ನು ಢಾಕಾದಲ್ಲಿ ಬಂಧಿಸಲಾಗಿದ್ದು, ಅವರಿಂದ ಸ್ಫೋಟಕಗಳು ಮತ್ತು ಬಾಂಬ್ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ. 
ಮೀರ್ಪುರ್ ಪ್ರದೇಶದಿಂದ ನಿಷೇಧಿತ ನಿಯೋ-ಜಮಾತುಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಸಂಘಟನೆಗೆ ಸೇರಿದ ಭಯೋತ್ಪಾದಕರನ್ನು ಬಾಂಗ್ಲಾದೇಶದ ಪೋಲೀಸರ ಭಯೋತ್ಪಾದಕ ವಿರೋಧಿ ದಳ ಬಂಧಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
ಪ್ರಚೋದನೆಯನ್ನು ನೀಡುವ ಧಾರ್ಮಿಕ ಪುಸ್ತಕಗಳು, ಸ್ಫೋಟಕಗಳು ಮತ್ತು ಬಾಂಬ್ ತಯಾರಿಸುವ ವಸ್ತುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ. 
೧೯ ವಿದೇಶಿಯರನ್ನು ಸೇರಿದಂತೆ ೨೨ ಜನರ ಹತ್ಯೆಗೆ ಕಾರಣವಾದ ಢಾಕಾ ಕಫೆ ದಾಳಿಯನ್ನು ನಡೆಸಿದ ಜಮಾತುಲ್ ಮುಜಾಹಿದ್ದೀನ್ ನ ಸಹ ಸಂಘಟನೆ ನಿಯೋ-ಜೆಬಿಎಮ್. 
ಈಗಾಗಲೇ ನೂರಾರು ಜೆಬಿಎಮ್ ಕಾರ್ಯಕರ್ತರು ಮತ್ತು ಮುಖಂಡರನ್ನು ಬಂಧಿಸಲಾಗಿದೆ. ಶೇಕ್ ಅಬ್ದುರ್ ರೆಹಮಾನ್ ಸೇರಿದಂತೆ ೨೦೦೭ ರಲ್ಲಿ ಈ ಸಂಘಟನೆಯ ಆರು ಹಿರಿಯ ಮುಖಂಡರನ್ನು ಗಲ್ಲಿಗೇರಿಸಲಾಗಿತ್ತು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.