ವಿದೇಶ

ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಹೊಗಳಿದ್ದು ನಿಜವೇ?: ಪಾಕ್ ಮಾಧ್ಯಮದ ಮಾಹಿತಿ ಬಗ್ಗೆ ವ್ಯಾಪಕ ಚರ್ಚೆ!

ಡೊನಾಲ್ಡ್ ಟ್ರಂಪ್- ನವಾಜ್ ಷರೀಫ್ ಅವರ ನಡುವಿನ ಸಂಭಾಷಣೆ ಬಗ್ಗೆ ಟ್ರಂಪ್ ಟೀಮ್ ಬಿಡುಗಡೆ ಮಾಡಿರುವ ಮಾಹಿತಿ ದಿಗ್ಭ್ರಾಂತಿ ಮೂಡಿಸುವಂತಿದೆ.

ಡೊನಾಲ್ಡ್ ಟ್ರಂಪ್ ಪಾಕಿಸ್ತಾನವನ್ನು ಹೊಗಳಿದ್ದು ನಿಜವೇ?: ಪಾಕ್ ಮಾಧ್ಯಮದ ಮಾಹಿತಿ ಬಗ್ಗೆ ವ್ಯಾಪಕ ಚರ್ಚೆ!
ಡೊನಾಲ್ಡ್ ಟ್ರಂಪ್-ನವಾಜ್ ಷರೀಫ್
Published On :
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಡೊನಾಲ್ಡ್ ಟ್ರಂಪ್ ಗೆ ಅಭಿನಂದನೆ ಸಲ್ಲಿಸಲು ಕರೆ ಮಾಡಿ ಮಾತನಾಡಿದ್ದ ಪಾಕ್ ಪ್ರಧಾನಿ ನವಾಜ್ ಷರೀಫ್ ಹಾಗೂ ಪಾಕಿಸ್ತಾನದ ಬಗ್ಗೆ ಟ್ರಂಪ್ ಅತ್ಯಂತ ಮೆಚ್ಚುಗೆಯ ಮಾತುಗಳನ್ನಾಡಿದ್ದರು ಎಂಬ ವರದಿ ನೆನ್ನೆಯಷ್ಟೇ ಪ್ರಕಟವಾಗಿತ್ತು. ಆದರೆ ಡೊನಾಲ್ಡ್ ಟ್ರಂಪ್- ನವಾಜ್ ಷರೀಫ್ ಅವರ ನಡುವಿನ ಸಂಭಾಷಣೆ ಬಗ್ಗೆ ಟ್ರಂಪ್ ಟೀಮ್ ಬಿಡುಗಡೆ ಮಾಡಿರುವ ಮಾಹಿತಿ ದಿಗ್ಭ್ರಾಂತಿ ಮೂಡಿಸುವಂತಿದೆ. 
ಒಂದೆಡೆ ಪಾಕಿಸ್ತಾನ ಅಮೆರಿಕದ ನೂತನ ಅಧ್ಯಕ್ಷರು ತನ್ನನ್ನು ಹಾಡಿ ಹೊಗಳಿದ್ದನ್ನು ಹೈಲೈಟ್ ಮಾಡಿದ್ದರೆ ಇತ್ತ ನವಾಜ್ ಷರೀಫ್ ಅವರೊಂದಿಗಿನ ಮಾತುಕತೆಗೆ ಸಂಬಂಧಿಸಿದಂತೆ ಅಧ್ಯಕ್ಷೀಯ ಅಧಿಕಾರ ಪರಿವರ್ತನೆಯಲ್ಲಿ ನಿರತವಾಗಿರುವ ಟ್ರಂಪ್ ಟೀಂ ಸೀಮಿತ ಅಥವಾ ಕನಿಷ್ಠ ಮಾಹಿತಿಯನ್ನಷ್ಟೆ ಬಹಿರಂಗಗೊಳಿಸಿದೆ. ಒಂದೆಡೆ ಪಾಕಿಸ್ತಾನ ವಿವರವಾದ ಮಾಹಿತಿ ಬಹಿರಂಗಗೊಳಿಸಿರುವುದು ಹಾಗೂ ಅಮೆರಿಕ ಟ್ರಂಪ್ ಹೊಗಳಿಕೆ ಬಗ್ಗೆ ಏನನ್ನೂ ಹೇಳದಿರುವುದು ವಿಶ್ಲೇಷಕರಿಗೆ ಅಚ್ಚರಿ ಮೂಡಿಸಿದೆ. 
ಡೊನಾಲ್ಡ್ ಟ್ರಂಪ್- ನವಾಜ್ ಷರೀಫ್ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂಬುದು ತಿಳಿದಿದೆ ಅಂತೆಯೇ, ಸಂಭಾಷಣೆ ವೇಳೆ ವಿಷಯಕ್ಕೆ ತಕ್ಕಂತೆ ಮಾತನಾಡಲಾಗಿದೆ ಎಂದು ಸಿಎನ್ಎನ್ ಹೇಳಿದೆ. ಟ್ರಂಪ್-ಷರೀಫ್ ನಡುವಿನ ಮಾತುಕತೆಯ ವಿವರಗಳನ್ನು ಪ್ರಕಟಿಸಿದ್ದ ಪಾಕಿಸ್ತಾನ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಡೊನಾಲ್ಡ್ ಟ್ರಂಪ್ ನವಾಜ್ ಷರೀಫ್ ಅವರನ್ನು ಅದ್ಭುತ ವ್ಯಕ್ತಿ ಎಂದು ಹೊಗಳಿದ್ದು, ನಿಮ್ಮೊಂದಿಗೆ ಮಾತನಾಡುತ್ತಿರುವುದು ಹಳೆಯ ಪರಿಚಯದ ವ್ಯಕ್ತಿಯೊಂದಿಗೆ ಮಾತನಾಡುವಂತೆ ಭಾಸವಾಗುತ್ತಿದೆ ಎಂದಿದ್ದಾಗಿ ತಿಳಿಸಿತ್ತು. ಅಷ್ಟೇ ಅಲ್ಲದೇ ಪಾಕಿಸ್ತಾನದ ಜನತೆಯನ್ನು ಅಸಾಮಾನ್ಯ ಬುದ್ಧಿವಂತರೆಂದು ಬಣ್ಣಿಸಿರುವ ಡೊನಾಲ್ಡ್ ಟ್ರಂಪ್, ಪಾಕಿಸ್ತಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ನೀವು ಅಪೇಕ್ಷಿಸುತ್ತಿರುವ ಪಾತ್ರವನ್ನು ನಿರ್ವಹಿಸಲಿದ್ದೇನೆ ಎಂದು ಭರವಸೆ ನೀಡಿದ್ದಾಗಿಯೂ ಹೇಳಿತ್ತು. 
ಎರಡು ದೇಶಗಳ ನಾಯಕರ ಸಂಭಾಷಣೆಯ ವಿವರಗಳನ್ನು ದಾಖಲಿಸುವಾಗ ಔಪಚಾರಿಕವಾದ ವಾಕ್ಯಗಳನ್ನಷ್ಟೇ ಬಳಸಲಾಗುತ್ತದೆ. ಎಚ್ಚರಿಕೆಯಿಂದ ರಾಜತಾಂತ್ರಿಕ ಹೇಳಿಕೆಗಳನ್ನು ನೀಡಲಾಗುತ್ತದೆ. ಡೊನಾಲ್ಡ್ ಟ್ರಂಪ್ ಮಾಡಿದಂತೆ ಯಾವ ಅಧ್ಯಕ್ಷರೂ ವಿದೇಶಿ ನಾಯಕರೊಂದಿಗೆ ಮಾತನಾಡಲು ಸಾಧ್ಯವಿಲ್ಲ. ವಿಶ್ವನಾಯಕರು ಸ್ವಯಂ ಪ್ರೇರಿತರಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಸಿಎನ್ಎನ್ ರಾಜಕೀಯ ವಿಶ್ಲೇಷಕ, ಅಮೆರಿಕಾದ ಅಧ್ಯಕ್ಷರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಡೇವಿಡ್ ಜರ್ಜನ್ ಅಭಿಪ್ರಾಯಪಟ್ಟಿದ್ದಾರೆ. 
ಪಾಕಿಸ್ತಾನ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಟ್ರಂಪ್ ಅವರೊಂದಿಗೆ ನವಾಜ್ ಷರೀಫ್ ಅವರ ಸಂಭಾಷಣೆಯ ಸಂಪೂರ್ಣ ವಿವರಗಳನ್ನು ಯಥಾವತ್ತಾಗಿ ಪ್ರಕಟಿಸಿರುವುದು ಅಸಹಜವಾದುದ್ದೆಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬರುತ್ತಿದ್ದು, ಬಿಬಿಸಿ ಸಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.