2014 ಇರಾಕ್ ಸೈನಿಕರ ಹತ್ಯಾಕಾಂಡ; 36 ಇಸಿಸ್ ಉಗ್ರರಿಗೆ ಗಲ್ಲುಶಿಕ್ಷೆ
2014ರಲ್ಲಿ ಇಸಿಸ್ ನಡೆಸಿದ ಸೈನಿಕರ ಹತ್ಯಾಕಾಂಡ ಸಂಬಂಧ ಬಂಧಿತರಾಗಿದ್ದ 36 ಮಂದಿ ಉಗ್ರರನ್ನು ಇರಾಕ್ ಸರ್ಕಾರ ಭಾನುವಾರ ಗಲ್ಲಿಗೇರಿಸಿದೆ.

ಬಾಗ್ದಾದ್: 2014ರಲ್ಲಿ ಇಸಿಸ್ ನಡೆಸಿದ ಹತ್ಯಾಕಾಂಡ ಸಂಬಂಧ ಬಂಧಿತರಾಗಿದ್ದ 36 ಮಂದಿ ಉಗ್ರರನ್ನು ಇರಾಕ್ ಸರ್ಕಾರ ಭಾನುವಾರ ಗಲ್ಲಿಗೇರಿಸಿದೆ.
2014ರಲ್ಲಿ ಇಸಿಸ್ ಉಗ್ರಗಾಮಿ ಸಂಘಟನೆ ಇರಾಕ್ ಸೇನೆಯ ವಶದಲ್ಲಿದ್ದ ಟಿಕ್ರಿತ್ ನಗರವನ್ನು ತನ್ನ ವಶಕ್ಕೆ ಪಡೆಯುವ ವೇಳೆ ವ್ಯಾಪಕ ಹಿಂಸಾಚಾರ ನಡೆಸಿತ್ತು. ಈ ವೇಳೆ ತನ್ನ ಕೈಗೆ ಸಿಕ್ಕ ಇರಾಕ್ ನ ನೂರಾರು ಸೈನಿಕರನ್ನು ಅಮಾನುಷವಾಗಿ ಹತ್ಯೆಗೈದಿತ್ತು. ಸರ್ಕಾರಿ ಮೂಲಗಳ ಪ್ರಕಾರ ಹೀಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ಕೈಗೆ ಸಿಕ್ಕಿ ಸುಮಾರು 1700ಕ್ಕೂ ಅಧಿಕ ಇರಾಕ್ ಸೈನಿಕರು ಧಾರುಣವಾಗಿ ಹತರಾಗಿದ್ದರು.
ಸೈನಿಕರನ್ನು ಸಾಲಾಗಿ ಮಲಗಿಸಿ ಅವರ ಮೇಲೆ ಧಾರುಣವಾಗಿ ಗುಂಡು ಹಾರಿಸಿ ಸಾಮೂಹಿಕವಾಗಿ ಹತ್ಯೆಗೈಯ್ಯಲಾಗಿತ್ತು. ಘಟನೆ ಬಳಿಕ ಇಸಿಸ್ ವಿರುದ್ಧ ಮುಗಿಬಿದ್ದಿದ್ದ ಇರಾಕ್ ಸೇನೆ 36ಕ್ಕೂ ಹೆಚ್ಚು ಉಗ್ರರನ್ನು ಬಂಧಿಸಿತ್ತು. ಬಂಧಿತ ಉಗ್ರರ ಪೈಕಿ 36 ಮಂದಿ ಉಗ್ರರಿಗೆ ಇಂದು ದಕ್ಷಿಣ ಇರಾಕ್ ನ ನಸರಿಯಾಹ್ ಬಂಧೀಖಾನೆಯಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


