ವಿದೇಶ

ಬಲೂಚ್ ರಾಷ್ಟ್ರೀಯವಾದಿಗಳನ್ನು ಪಾಕಿಸ್ತಾನ ಟಾರ್ಗೆಟ್ ಮಾಡುತ್ತಿದೆ: ಏಷ್ಯಾ ಮಾನವ ಹಕ್ಕು ಆಯೋಗ

ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನದ ಜನತೆ ಪಾಕಿಸ್ತಾನಿ ಸರ್ಕಾರದ ಕ್ರೋಧಕ್ಕೆ ಬಲಿಯಾಗಿದ್ದು, ಪಾಕ್ ಸರ್ಕಾರಿ ಸಂಸ್ಥೆಗಳು ಬಲೂಚಿಸ್ಥಾನದ ರಾಷ್ಟ್ರೀಯವಾದಿಗಳನ್ನು ಟಾರ್ಗೆಟ್ ಮಾಡುತ್ತಿದೆ

ಬಲೂಚ್ ರಾಷ್ಟ್ರೀಯವಾದಿಗಳನ್ನು ಪಾಕಿಸ್ತಾನ ಟಾರ್ಗೆಟ್ ಮಾಡುತ್ತಿದೆ: ಏಷ್ಯಾ ಮಾನವ ಹಕ್ಕು ಆಯೋಗ
ಬಲೂಚ್ ರಾಷ್ಟ್ರೀಯವಾದಿಗಳನ್ನು ಪಾಕಿಸ್ತಾನ ಟಾರ್ಗೆಟ್ ಮಾಡುತ್ತಿದೆ: ಏಷ್ಯಾ ಮಾನವ ಹಕ್ಕು ಆಯೋಗ
Published On :

ಹಾಂಕ್-ಕಾಂಗ್: ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಬಲೂಚಿಸ್ತಾನದ ಜನತೆ ಪಾಕಿಸ್ತಾನಿ ಸರ್ಕಾರದ ಕ್ರೋಧಕ್ಕೆ ಬಲಿಯಾಗಿದ್ದು, ಪಾಕ್ ಸರ್ಕಾರಿ ಸಂಸ್ಥೆಗಳು ಬಲೂಚಿಸ್ಥಾನದ ರಾಷ್ಟ್ರೀಯವಾದಿಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಏಷ್ಯಾದ ಮಾನವಹಕ್ಕು ಆಯೋಗ ವರದಿ ಪ್ರಕಟಿಸಿದೆ.

ಎಲ್ಲಾ ರೀತಿಯ ಕಾರ್ಯಾಚರಣೆಗಳಿಂದ ಬಲೂಚಿಸ್ಥಾನದ ರಾಷ್ಟ್ರೀಯವಾದಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಬಲೂಚಿಸ್ಥಾನದ ಸ್ವಾತಂತ್ರ್ಯದ ಕೂಗನ್ನು ಅಡಗಿಸುವುದಕ್ಕೆ ಧಾರ್ಮಿಕ ಉಗ್ರ ಸಂಘಟನೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ನಿರ್ಭಯದಿಂದ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದೆ ಎಂದು ಏಷ್ಯಾದ ಮಾನವ ಹಕ್ಕು ಆಯೋಗದ ವರದಿ ಪ್ರಕಟಿಸಿದೆ.

ಪಾಕಿಸ್ತಾನದ ಉಗ್ರ ಸಂಘಟನೆಗಳಾದ ಅಹ್ಲೇ ಸುನ್ನತ್-ವಾಲ್-ಜಮಾತ್(ಎಎಸ್ ಡಬ್ಲ್ಯೂ ಜೆ) ಹಾಗೂ ಲಷ್ಕರ್-ಎ- ಜಾಂಗ್ವಿ ಗೆ ಪಾಕಿಸ್ತಾನ ಸರ್ಕಾರ ಬಲೂಚಿಸ್ಥಾನದ ಸ್ವಾತಂತ್ರ್ಯದ ಕೂಗನ್ನು ಅಡಗಿಸಲು ಸೂಚನೆ ನೀಡಿದ್ದು, ಇದಕ್ಕೆ ಅಗತ್ಯವಿರುವ ರೀತಿಯಲ್ಲಿ ನಿರ್ಭಯದಿಂದ ಮುಂದುವರೆಯಲು ಸೂಚಿಸಿದೆಯಂತೆ. ಅಷ್ಟೇ ಅಲ್ಲದೆ ಬಲೂಚಿಸ್ಥಾನದಲ್ಲಿ ಯುದ್ಧ ಪರಿಸ್ಥಿತಿ ಉಂಟುಮಾಡಿ ಸಂಪತ್ತಿನ ಮೇಲೆ ಹಿಡಿತ ಸಾಧಿಸುವಂತೆ ಸೂಚನೆ ನೀಡಿದೆ.

ಬಲೂಚಿಸ್ತಾನದಲ್ಲಿ ಕೇಳಿಬರುತ್ತಿರುವ ಸ್ವಾತಂತ್ರ್ಯದ ಕೂಗನ್ನು ರಾಜಕೀಯದಿಂದ ನಿಯಂತ್ರಿಸಲು ಪಾಕಿಸ್ತಾನ ಸರ್ಕಾರ ವಿಫಲವಾಗಿದೆ ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಉಗ್ರ ಸಂಘಟನೆಗಳ ಮೂಲಕ ಬಲೂಚಿಸ್ಥಾನವನ್ನು ನಿಯಂತ್ರಿಸಲು ಯತ್ನಿಸುತ್ತಿದ್ದು, ಬಲೂಚಿಸ್ಥಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಧ್ವನಿಯನ್ನು ಅಡಗಿಸುವ ಉದ್ದೇಶದಿಂದ ಕ್ವೆಟ್ಟಾದಲ್ಲಿ ಇತ್ತೀಚೆಗಷ್ಟೇ ದಾಳಿ ಸಹ ನಡೆಸಲಾಗಿತ್ತು ಎಂದು ಏಷ್ಯಾದ ಮಾನವ ಹಕ್ಕು ಆಯೋಗ ವರದಿ ಪ್ರಕಟಿಸಿದೆ.

ಇನ್ನು ಚೀನಾ-ಪಾಕಿಸ್ತಾನ ಎಕೆನಾಮಿಕ್ ಕಾರಿಡಾರ್ ನ್ನು ರಕ್ಷಿಸಲು ಮಾತ್ರ ಪಾಕಿಸ್ತಾನ ಉತ್ಸಾಹ ತೋರುತ್ತಿದ್ದು, ಬಲೂಚಿಸ್ತಾನದ ರಕ್ಷಣೆ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ ಎಂದು ಏಷ್ಯಾ ಮಾನವಹಕ್ಕು ಆಯೋಗ ವರದಿಯಲ್ಲಿ ತಿಳಿಸಿದ್ದು ಚೀನಾ-ಪಾಕಿಸ್ತಾನ ಎಕೆನಾಮಿಕ್ ಕಾರಿಡಾರ್ ನ್ನು ವಿರೋಧಿಸುತ್ತಿರುವ ಬಲೂಚಿಸ್ಥಾನದ ಜನತೆಯನ್ನು ಶಿಕ್ಷಿಸಲು ಪಾಕಿಸ್ತಾನ ಸೇನೆ ಸಹ ನಿರ್ಧರಿಸಿದ್ದು, ಬಲೂಚಿಸ್ಥಾನದ ಜನತೆಗೆ ತಮ್ಮ ನೆಲದಲ್ಲಿ ತಾವೇ ಅಲ್ಪಸಂಖ್ಯಾತರಾಗುವ ಆತಂಕ ಉಂಟಾಗಿದೆ ಎಂದು ಏಷ್ಯಾ ಮಾನವ ಹಕ್ಕು ಆಯೋಗ ಆತಂಕ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.