ವಿದೇಶ

ವಿಮಾನ ದುರಂತದಿಂದ ಪಾರಾದ ಭಾರತೀಯ ಪ್ರಯಾಣಿಕನಿಗೆ ಖುಲಾಯಿಸಿತು ಅದೃಷ್ಟ

ಎಮಿರೇಟ್ಸ್ ವಿಮಾನ ದುರಂತದಲ್ಲಿ ಸುಮಾರು 300 ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾಗಿದ್ದರು. ಅದೇ ವಿಮಾನದಲ್ಲಿದ್ದ ಕೇರಳ ಮೂಲದ ವ್ಯಕ್ತಿಗೆ ...

ವಿಮಾನ ದುರಂತದಿಂದ ಪಾರಾದ ಭಾರತೀಯ ಪ್ರಯಾಣಿಕನಿಗೆ ಖುಲಾಯಿಸಿತು ಅದೃಷ್ಟ
ಮಹ್ಮದ್ ಬಶೀರ್ ಅಬ್ದುಲ್ ಖಾದರ್
Published On :

ದುಬೈ: ಅದೃಷ್ಟ ಅನ್ನೋದು ಹೇಗೆ ಬರುತ್ತೆ ಎಂದು ಹೇಳೋಕೆ ಆಗಲ್ಲ. ಆದ್ರೆ ಕೆಲವೊಮ್ಮೆ ಪವಾಡಗಳೇ ನಡೆದುಹೋಗುತ್ತೆ. ಅಂತಹದ್ದೇ ಒಂದು ಪ್ರಸಂಗ ನಡೆದಿದೆ.

ಕಳೆದ ಬುಧವಾರ ಎಮಿರೇಟ್ಸ್ ವಿಮಾನ ದುರಂತದಲ್ಲಿ ಸುಮಾರು 300 ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾಗಿದ್ದರು. ಅದೇ ವಿಮಾನದಲ್ಲಿದ್ದ ಕೇರಳ ಮೂಲದ ವ್ಯಕ್ತಿಗೆ ಮತ್ತೊಮ್ಮೆ ಅದೃಷ್ಟ ಕುಲಾಯಿಸಿದೆ.

ಈ ವಿಮಾನ ಸಂಸ್ಥೆಯ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹ್ಮದ್ ಬಶೀರ್ ಅಬ್ದುಲ್ ಖಾದರ್ ಎಂಬುವರು ಕೆಲದಿನಗಳ ಹಿಂದೆ ಲಾಟರಿ ಖರೀದಿಸಿದ್ದರು. ಇದೀಗ ಈ ಲಾಟರಿಗೆ ಬರೋಬ್ಬರಿ (1 ಮಿಲಿಯನ್ ಡಾಲರ್ ) 6.68 ಕೋಟಿ ರೂ. ಲಾಟರಿ ಹೊಡೆದಿದೆ.

ಘಟನೆ ಸಂಭವಿಸಿದ ಆರೇ ದಿನಗಳಲ್ಲಿ ಇವರಿಗೆ ಲಾಟರಿ ಹೊಡೆದಿದೆ. ದುಬೈನ ಲಾಟರಿ ಸಂಸ್ಥೆ ನೀಡಿದ್ದ 0845 ನಂಬರ್‍ಗೆ ಈ ಲಾಟರಿ ಹೊಡೆದಿದೆ.  ಇದು ಇವರ 17ನೇ ಲಾಟರಿ. ಇನ್ನೊಂದು ವಿಚಾರವೆಂದರೆ ಇದೇ ವರ್ಷದ ಡಿಸೆಂಬರ್‍ನಲ್ಲಿ ಕೆಲಸದಿಂದ ನಿವೃತ್ತಿಹೊಂದುತ್ತಿದ್ದು, ಈ ಹಣ ನನ್ನ ನಿವೃತ್ತಿ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಅವರು ಸಂತಸ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.