ವಿದೇಶ

ಯುಕೆ ಮತದಾರರ ಅಧಿಕೃತ ಪಟ್ಟಿಯಲ್ಲಿ ವಿಜಯ್ ಮಲ್ಯ: ವರದಿ

ಬ್ಯಾಂಕ್ ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲಾಗದೇ ಸುಸ್ತಿದಾರರಾಗಿ ಬ್ರಿಟನ್ ನಲ್ಲಿ ವಾಸ ಮಾಡುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರ ಹೆಸರು ಬ್ರಿಟನ್ ನ ಮತದಾರರ ಪಟ್ಟಿಯಲ್ಲಿ ದಾಖಲಾಗಿದೆ.

ಯುಕೆ ಮತದಾರರ ಅಧಿಕೃತ ಪಟ್ಟಿಯಲ್ಲಿ ವಿಜಯ್ ಮಲ್ಯ: ವರದಿ
ವಿಜಯ್ ಮಲ್ಯ
Published On :

ಲಂಡನ್: ಬ್ಯಾಂಕ್ ಗಳಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲಾಗದೇ ಸುಸ್ತಿದಾರರಾಗಿ ಬ್ರಿಟನ್ ನಲ್ಲಿ ವಾಸ ಮಾಡುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರ ಹೆಸರು ಬ್ರಿಟನ್ ನ ಮತದಾರರ ಪಟ್ಟಿಯಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ.
ಲಂಡನ್ ನಿಂದ ಉತ್ತರ ದಿಕ್ಕಿನಲ್ಲಿರುವ ಟೆವಿನ್ ಎಂಬ ಹಳ್ಳಿಯಲ್ಲಿ ವಿಜಯ್ ಮಲ್ಯ ಲೇಡಿ ವಾಕ್‌ ' ಎಂಬ ಎಸ್ಟೇಟ್ ಅನ್ನು ಮಲ್ಯ ಹೊಂದಿದ್ದು, ದಿ ಸಂಡೇ ಟೈಮ್ಸ್ ಪ್ರಕಾರ 'ಲೇಡಿ ವಾಕ್‌' ಎಸ್ಟೇಟ್ ಲಂಡನ್ ನಲ್ಲಿರುವ ತಮ್ಮ ಅಧಿಕೃತ ವಿಳಾಸ ಎಂಬುದನ್ನು ತಿಳಿಸಿದ್ದು, ಇದನ್ನು ಭಾರತೀಯ ಅಧಿಕಾರಿಗಳಿಗೂ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಲೇಡಿ ವಾಕ್ ಮೇಲಿನ ಮಲ್ಯ ಅವರ ಒಡೆತನ ಸಂಪೂರ್ಣ ಕಾನೂನು ಬದ್ಧವಾಗಿದೆ ಎಂದು ದಿ ಸಂಡೇ ಟೈಮ್ಸ್ ಪ್ರಕಟಿಸಿರುವ ವರದಿಯಾ ಮೂಲಕ ತಿಳಿದುಬಂದಿದೆ.
ಬ್ರಿಟನ್ ನಲ್ಲಿ ಆಸ್ತಿ ಖರೀದಿಸಿರುವವರು ತಮ್ಮ ಮಾಹಿತಿಯನ್ನು  ಗೌಪ್ಯವಾಗಿಟ್ಟುಕೊಂಡು ತೆರಿಗೆ ವಂಚನೆ ಮಾಡುವ ಸಾಧ್ಯತೆ ಇರುವುದರಿಂದ, ಹೊರದೇಶದ ಕಂಪನಿಗಳು ಬ್ರಿಟನ್ ನಲ್ಲಿ ಆಸ್ತಿ ಖರೀದಿಸುವ ಬಗ್ಗೆ  ಸೂಕ್ಷ್ಮ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಜಯ್ ಮಲ್ಯ ತಾವು ತೆರಿಗೆ ವಂಚನೆ ಮಾಡಿಲ್ಲ ಹಾಗೂ ತಾವು 1992 ರಿಂದ ಬ್ರಿಟನ್ ನ ನಿವಾಸಿಯಾಗಿರುವುದಾಗಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.