ಟ್ರಂಪ್ ಗೆ ವಿದೇಶಾಂಗ ನೀತಿ ಬಗ್ಗೆ ಹೆಚ್ಚು ತಿಳಿದಿಲ್ಲ: ಬರಾಕ್ ಒಬಾಮ
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಅಧ್ಯಕ್ಷ ಬರಾಕ್ ಒಬಾಮ ಪ್ರತಿಕ್ರಿಯೆ ನೀಡಿದ್ದು, ಟ್ರಂಪ್ ಗೆ ವಿದೇಶಾಂಗ ನೀತಿಗಳ ಬಗ್ಗೆ ಹೆಚ್ಚು ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

ವಾಷಿಂಗ್ ಟನ್: ಜಪಾನ್ ಹಾಗೂ ದಕ್ಷಿಣ ಕೊರಿಯಾ ಸ್ವಂತವಾಗಿ ಪರಮಾಣು ಶಸ್ತ್ರಾಗಾರಗಳನ್ನು ಅಭಿವೃದ್ಧಿಪಡಿಸುವುದನ್ನು ಪರಿಗಣಿಸಬೇಕು ಎಂದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಅಧ್ಯಕ್ಷ ಬರಾಕ್ ಒಬಾಮ ಪ್ರತಿಕ್ರಿಯೆ ನೀಡಿದ್ದು, ಟ್ರಂಪ್ ಗೆ ವಿದೇಶಾಂಗ ನೀತಿಗಳ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲ ಎಂದಿದ್ದಾರೆ.
ಪರಮಾಣು ಭದ್ರತಾ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬರಾಕ್ ಒಬಾಮ, ಅಮೆರಿಕಾವನ್ನು ಜಪಾನ್ ಹಾಗೂ ದಕ್ಷಿಣ ಕೊರಿಯಾದ ಪರಮಾಣು ಶಸ್ತ್ರಾಗಾರಗಳ ರಕ್ಷಕ ಎಂದರು. ಅಮೆರಿಕಾ ಪರಮಾಣು ಶಸ್ತ್ರಾಸ್ತ್ರಗಳ ಏರಿಕೆ ಮತ್ತು ಸಂಘರ್ಷವನ್ನು ತಪ್ಪಿಸಿದೆ ಎಂದೂ ಸಹ ಅವರು ಹೇಳಿದ್ದಾರೆ.
ಕಳೆದ ವಾರ ವಿವಾದಾತ್ಮಕ ಪರಮಾಣು ಪ್ರಸ್ತಾವನೆಗಳನ್ನು ಮಂಡಿಸಿದ್ದ ಡೊನಾಲ್ಡ್ ಟ್ರಂಪ್, ಪರಮಾಣು ಪ್ರಸರಣ ವಿಶ್ವದ ಬಹುದೊಡ್ಡ ಸವಾಲಾಗಿದೆ. ಜಪಾನ್ ಹಾಗೂ ದಕ್ಷಿಣ ಕೊರಿಯಾ ತಮ್ಮದೇ ಅದ ಸ್ವಂತ ಪರಮಾಣು ಶಸ್ತ್ರಾಗಾರಗಳನ್ನು ಅಭಿವೃದ್ಧಿಪಡಿಸುವುದನ್ನು ಪರಿಗಣಿಸಬೇಕು ಹಾಗಾದಲ್ಲಿ ಅಮೆರಿಕ ಏಷ್ಯಾದಿಂದ ಕಾಲ್ತೆಗೆಯಬಹುದು ಎಂದು ಸಲಹೆ ನೀಡಿದ್ದರು. ಇನ್ನು ಉಳಿದ ಭಾಗಗಳಲ್ಲಿ ಅಮೆರಿಕದ ಭದ್ರತಾ ಸಂಬಂಧಗಳನ್ನು ಪುನಾರಚನೆ ಮಾಡಬೇಕೆಂಬ ಸಲಹೆಯನ್ನು ಮುಂದಿಟ್ಟಿದ್ದ ಟ್ರಂಪ್, ಸೌದಿ ಅರೇಬಿಯಾ ಹಾಗೂ ಜರ್ಮನಿ ತಮ್ಮದೇ ಅದ ಸ್ವಂತ ರಕ್ಷಣಾ ತಂಡದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಅಥವಾ ಅಲ್ಲಿಗೆ ಅಮೆರಿಕಾ ನೀಡುತ್ತಿರುವ ಭದ್ರತೆಗೆ ಹೆಚ್ಚು ಹಣ ಪಾವತಿಸಬೇಕು ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


