ಮೋದಿ ಭೇಟಿ ವೇಳೆ 4 ಜಿ ವಿಸ್ತರಣೆ, ಡಿಜಿಟಲೀಕರಣಕ್ಕೆ ಅಮೇರಿಕಾದ ಮಾಧ್ಯಮ ಸಿಇಒಗಳ ಸಲಹೆ
ಅಮೆರಿಕಾದ ಮಾಧ್ಯಮ ಹಾಗೂ ಮನೋರಂಜನಾ ವಾಹಿನಿಗಳ ಸಿಇಒ ಗಳು 4 ಜಿ ನೆಟ್ವರ್ಕ್ ನ ಶೀಘ್ರಗತಿಯ ವಿಸ್ತರಣೆ ಹಾಗೂ ಟಿವಿ ಡಿಜಿಟೈಸೇಷನ್ ಗೆ ಸಲಹೆ ನೀಡಿದ್ದಾರೆ.

ನ್ಯೂಯಾರ್ಕ್: ಅಮೆರಿಕಾದ ಸಿಇಒ ಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಅಲ್ಲಿನ ಮಾಧ್ಯಮ ಹಾಗೂ ಮನೋರಂಜನಾ ವಾಹಿನಿಗಳ ಸಿಇಒ ಗಳು 4 ಜಿ ನೆಟ್ವರ್ಕ್ ನ ಶೀಘ್ರಗತಿಯ ವಿಸ್ತರಣೆ ಹಾಗೂ ಟಿವಿ ಡಿಜಿಟೈಸೇಷನ್ ಗೆ ಸಲಹೆ ನೀಡಿದ್ದಾರೆ.
ನ್ಯೂಸ್ ಕಾರ್ಪ್ ನ ರೂಪರ್ಟ್ ಮುರ್ಡೋಕ್, ಸೋನಿ ಎಂಟರ್ಟೇನ್ ಮೆಂಟ್ ನ ಮೈಕೇಲ್ ಲಿಂಟನ್, ಡಿಸ್ಕವರಿ ಕಮ್ಯುನಿಕೇಶನ್ಸ್ ನ ಡೇವಿಡ್ ಜಸ್ಲಾವ್ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಡಿಜಿಟಲ್ ಮೂಲಸೌಕರ್ಯವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
4 ಜಿ ನೆಟ್ವರ್ಕ್ ವಿಸ್ತರಣೆ ಹಾಗೂ ಟಿವಿ ಡಿಜಿಟಲೀಕರಣದಿಂದ ಮಾಧ್ಯಮ ಹಾಗೂ ಮನೋರಂಜನಾ ಕ್ಷೇತ್ರ ಭಾರತದಲ್ಲಿ ಹೆಚ್ಚಿನ ಉದ್ಯೋಗವನ್ನು ಸೃಷ್ಟಿ ಮಾಡಲಿದೆ ಎಂದು ಸಿಇಒ ಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಚುರುಕು, ಕ್ರಿಯಾತ್ಮಕ ನಾಯಕತ್ವಕ್ಕೆ ಸಿಇಒ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಇಂಡಿಯಾ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭೌತಿಕ ಮೂಲ ಸೌಕರ್ಯದೊಂದಿಗೆ, ಡಿಜಿಟಲ್ ಮೂಲಸೌಕರ್ಯವೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


