ಜುಂಪಾ ಲಹಿರಿಗೆ ಮಾನವತಾ ಮೆಡಲ್
ಭಾರತೀಯ- ಅಮೆರಿಕನ್ ಕಾದಂಬರಿಗಾರ್ತಿ ಜುಂಪಾ ಲಹಿರಿ ಅವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಶುಕ್ರವಾರ ಪ್ರತಿಷ್ಠಿತ ನ್ಯಾಷನಲ್ ಹ್ಯುಮ್ಯಾನಿಟಿ ಮೆಡಲ್ (2014ರ ರಾಷ್ಟ್ರೀಯ ಮಾನವತಾ ಪ್ರಶಸ್ತಿ) ಪ್ರದಾನ ಮಾಡಿದರು.

ವಾಷಿಂಗ್ಟನ್: ಭಾರತೀಯ- ಅಮೆರಿಕನ್ ಕಾದಂಬರಿಗಾರ್ತಿ ಜುಂಪಾ ಲಹಿರಿ ಅವರಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಶುಕ್ರವಾರ ಪ್ರತಿಷ್ಠಿತ ನ್ಯಾಷನಲ್ ಹ್ಯುಮ್ಯಾನಿಟಿ ಮೆಡಲ್ (2014ರ ರಾಷ್ಟ್ರೀಯ ಮಾನವತಾ ಪ್ರಶಸ್ತಿ) ಪ್ರದಾನ ಮಾಡಿದರು.
ವಿಮುಖತೆ ಮತ್ತು ಒಡಮೆಯ ಕಥೆಯನ್ನು ಅದ್ಭುತವಾಗಿ ರಚಿಸುವ ಮೂಲಕ ಭಾರತೀಯ-ಅಮೆರಿಕ ನ್ ಅನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಕ್ಕಾಗಿ ಪುಲಿಟ್ಜರ್ ಪ್ರಶಸ್ತಿ ವಿಜೇತೆ ಲಹಿರಿ ಅವರಿಗೆ ಈ ಗೌರವ ಸಂದಿದೆ. ಶ್ವೇತಭವನದ ಈಸ್ಟ್ ರೂಂನಲ್ಲಿ ನಡೆದ ಸಮಾರಂಭದಲ್ಲಿ ಇತರೆ 20 ಮಂದಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಿಶೆಲ್ ಒಬಾಮ ಹಾಗೂ ಕಲೆ-ಮಾನವತೆ ಕ್ಷೇತ್ರದನ ಹಲವು ಗಣ್ಯರು ಪಾಲ್ಗೊಂಡಿದ್ದರು. ಇಲ್ಲಿ ಮಾತನಾಡಿದ ಒಬಾಮ, ``ಇಂದು ಪ್ರಶಸ್ತಿ ಗಳನ್ನು ಮುಡಿಗೇರಿಸಿಕೊಂಡ ಗಣ್ಯರು ಅಪರೂಪದ ಸತ್ಯಗಳನ್ನು ಹೇಳಿಕೊಂಡವರು. ಇವರಿಲ್ಲದಿದ್ದರೆ ಎಡಿಬಲ್ ಸ್ಕೂಲ್ ಯಾರ್ಡ್ ಇರುತ್ತಿರಲಿಲ್ಲ, ಜುಂಪಾ ಲಹಿರಿಯ ಕಾದಂಬರಿಗಳು ಇರುತ್ತಿರಲಿಲ್ಲ, ಕ್ಯಾರಿ, ಮಿಸರಿಯಂತಹ ಭಯಾನಕ ಕಥಾನಕಗಳು ಇರುತ್ತಿರಲಿಲ್ಲ'' ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


