ಇರಾಕಿನಲ್ಲಿ ೧೨೭ ಮಕ್ಕಳನ್ನು ಅಪಹರಿಸಿದ ಇಸ್ಲಾಮಿಕ್ ಸ್ಟೇಟ್
ಮಕ್ಕಳನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತರಬೇತಿ ನಿಡಲು, ತಮ್ಮ ವಶದಲ್ಲಿರುವ ಇರಾಕಿನ ನಗರ ಮೋಸುಲ್ ನಿಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ೧೨೭

ಬಾಗ್ದಾದ್: ಮಕ್ಕಳನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತರಬೇತಿ ನಿಡಲು, ತಮ್ಮ ವಶದಲ್ಲಿರುವ ಇರಾಕಿನ ನಗರ ಮೋಸುಲ್ ನಿಂದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ೧೨೭ ಮಕ್ಕಳನ್ನು ಅಪಹಸಿದೆ ಎಂದು ಮಾಧ್ಯಮವೊಂದು ಮಂಗಳವಾರ ವರದಿ ಮಾಡಿದೆ.
ಕಳೆದ ಕೆಲವು ದಿನಗಳಲ್ಲಿ ಇಸ್ಲಾಮಿಕ್ ಸ್ಟೇಟ್ ೧೧ ರಿಂದ ೧೫ ವರ್ಷದ ಒಳಗಿನ ೧೨೭ ಮಕ್ಕಳನ್ನು ಅಪಹರಿಸಿದೆ ಎಂದು ಕುರ್ದಿಸ್ತಾನ್ ಡೆಮಾಕ್ರೆಟಿಕ್ ಪಕ್ಷದ ಅಧಿಕಾರಿ ಸಯದ್ ಮಮೌಜಿನಿ ತಿಳಿಸಿದ್ದಾರೆ ಎಂದು ಇರಾಕಿ ನ್ಯೂಸ್ ವರದಿ ಮಾಡಿದೆ.
ಶಸ್ತ್ರಾಸ್ತ್ರ ಬಳಕೆ ಮತ್ತು ಭಯೋತ್ಪಾದನ ಚಟುವಟಿಕೆಗಳನ್ನು ನಡೆಸುವ ತರಬೇತಿ ನೀಡುವ ವಿವಿಧ ವಿಶೇಷ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


