ಅಚಾತುರ್ಯದಿಂದ ಪೊಲೀಸರಿಗೆ ಕರೆ ಮಾಡಿ ಕಳವು ಸಂಚು ವಿವರಿಸಿ ಸಿಕ್ಕಿಬಿದ್ದ!
ಕಳ್ಳತನದ ಸಂಚಿನ ಬಗ್ಗೆ ಪೊಲೀಸರ ಬಳಿಯೇ ಹೇಳಿ ತಾನಾಗಿ ಸಿಕ್ಕಿಕೊಂಡ ಪಜೀತಿಯ ಪ್ರಸಂಗ ನ್ಯೂಜೆರ್ಸಿಯಲ್ಲಿ ನಡೆದಿದೆ...

ನ್ಯೂಯಾರ್ಕ್: ಕಳ್ಳತನದ ಸಂಚಿನ ಬಗ್ಗೆ ಪೊಲೀಸರ ಬಳಿಯೇ ಹೇಳಿ ತಾನಾಗಿ ಸಿಕ್ಕಿಕೊಂಡ ಪಜೀತಿಯ ಪ್ರಸಂಗ ನ್ಯೂಜೆರ್ಸಿಯಲ್ಲಿ ನಡೆದಿದೆ. ಫೋನ್‍ಕಾಲ್ನಿಂದ ಆದ ಅಚಾತುರ್ಯ ಆತನನ್ನು ನೇರ ಕಂಬಿಗಳ ಹಿಂದೆ ನಿಲ್ಲಿಸಿದೆ.
ಸ್ಕಾಟ್ ರಾಬರ್ಟ್ ಎಸ್ಸರ್(42) ಎಂಬ ದರೋಡೆಕೋರ ತನ್ನ ಸಹವರ್ತಿಗೆ ಫೋನ್ ಮಾಡಿ ದರೋಡೆ ಯೋಜನೆ ತಿಳಿಸಬೇಕಿತ್ತು. ಅದಕ್ಕಾಗಿ ಆತ ಫೋನ್ ಮಾಡಿದ್ದು 911 ನಂಬರ್‍ಗೆ. ನಮ್ಮ ದೇಶದಲ್ಲಿ 100, 101 ಮುಂತಾದ ತುರ್ತು ನಂಬರ್‍ಗಳಿರುವ ಹಾಗೆ ಅಮೆರಿಕದಲ್ಲಿ 911 ಇದೆ.
ಆ ಕರೆ ನೇರ ಪೊಲೀಸರಿಗೆ ತಲುಪಿದೆ. ಅವರು ಸದ್ದಿಲ್ಲದೆ ಈತನ ಮಾತು ಆಲಿಸಿದ್ದಾರೆ. ಅದೇ ರಾತ್ರಿ ನ್ಯೂಜೆರ್ಸಿಯ ಮನೆಯೊಂದರಲ್ಲಿ ದರೋಡೆ ನಡೆದದ್ದು ಗೊತ್ತಾಗುತ್ತಿದ್ದಂತೆಯೇ ಈ ಕರೆಯ ವಿವರ ಇಟ್ಟು ಕೊಂಡು ಕಳ್ಳರ ಜಾಡುಪತ್ತೆ ಹಚ್ಚಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


