ದಕ್ಷಿಣಾ ಆಫ್ರಿಕಾದಲ್ಲಿ ಭಾರತೀಯನ ಭೀಕರ ಹತ್ಯೆ
ಕಳೆದ 15 ವರ್ಷಗಳಿಂದ ದಕ್ಷಿಣಾ ಆಫ್ರಿಕಾದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಭಾರತೀಯನನ್ನು ದರೋಡೆಕೋರರು ಹತ್ಯೆಗೈದಿರುವ...

ದಕ್ಷಿಣಾ ಆಫ್ರಿಕಾ: ಕಳೆದ 15 ವರ್ಷಗಳಿಂದ ದಕ್ಷಿಣಾ ಆಫ್ರಿಕಾದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಭಾರತೀಯನನ್ನು ದರೋಡೆಕೋರರು ಹತ್ಯೆಗೈದಿರುವ ಘಟನೆ ವರದಿಯಾಗಿದೆ.
ಗುಜರಾತ್ ಮೂಲದ ಬೈರೆನ್ ಪಟೇಲ್ ಹತ್ಯೆಗೀಡಾದ ಭಾರತೀಯ. ಈತ ಕಳೆದ 15 ವರ್ಷಗಳಿಂದ ಈತ ದಕ್ಷಿಣಾ ಆಫ್ರಿಕಾದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ. ಪ್ರತಿದಿನದಂತೆ ಮನೆಗೆ ಹೋಗಲು ಅಂಗಡಿಯನ್ನು ಮುಚ್ಚುವ ವೇಳೆ ಅಲ್ಲಿಗೆ ಬಂದ ಇಬ್ಬರು ದರೋಡೆಕೋರರು, ಅವನನ್ನು ಕಟ್ಟಿ ಹಾಕಿ ಆತನ ಬಳಿ ಇದ್ದ ಹಣವನ್ನು ಕಸಿದು, ನಂತರ ಚಾಕುವಿನಿಂದ ಆತನ ಕತ್ತಿಗೆ ಇರಿದು, ಪರಾರಿಯಾಗಿದ್ದಾರೆ.
ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದರಾದರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದಲ್ಲಿರುವ ಸಂಬಂಧಿಕರ ಮುಖಾಂತರ ಪಟೇಲ್ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಪಟೇಲ್ ಮೃತದೇಹವನ್ನು ಭಾರತಕ್ಕೆ ತರಲು ಸರ್ಕಾರ ಸಹಾಯ ಮಾಡಬೇಕು ಎಂದು ಪಟೇಲ್ ತಾಯಿ ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


