ನಾಲೆಯೊಂದರಲ್ಲಿ ಎರಡನೆ ವಿಶ್ವಯುದ್ಧದ ಗ್ರೆನೇಡ್ ಗಳನ್ನು ಪತ್ತೆಹಚ್ಚಿನ ೮ ವರ್ಷದ ಬಾಲಕ
ನಾಲೆಯೊಂದರಲ್ಲಿ ಅಯಸ್ಕಾಂತ ಹಿಡಿದು ಕಬ್ಬಿಣದ ಚೂರುಗಳನ್ನು ಹುಡುಕ ಹೊರಟ ೮ ವರ್ಷದ ಬಾಲಕನಿಗೆ ಅಚ್ಚರಿ ಕಾದಿತ್ತು. ಸ್ಫೋಟಗೊಳ್ಳದ ಎರಡನೇ ವಿಶ್ವಯುದ್ಧದ

ಲಂಡನ್: ನಾಲೆಯೊಂದರಲ್ಲಿ ಅಯಸ್ಕಾಂತ ಹಿಡಿದು ಕಬ್ಬಿಣದ ಚೂರುಗಳನ್ನು ಹುಡುಕ ಹೊರಟ ೮ ವರ್ಷದ ಬಾಲಕನಿಗೆ ಅಚ್ಚರಿ ಕಾದಿತ್ತು. ಸ್ಫೋಟಗೊಳ್ಳದ ಎರಡನೇ ವಿಶ್ವಯುದ್ಧದ ಗ್ರೆನೇಡಗಳನ್ನು ಅವನು ಹೊರಗೆಳೆದಿದ್ದ.
ತನ್ನ ಅವಳಿ ಸಹೋದರನೊಂದಿಗೆ ತನ್ನ ತಾತನ ಹಡಗಿನಲ್ಲಿ ಕೂತು ಶಕ್ತಿಯುತ ಅಯಸ್ಕಾಂತ ಹಿಡಿದು ಕಬ್ಬಿಣದ ಚೂರುಗಳನ್ನು ಶಾಲಾ ಬಾಲಕನೊಬ್ಬ ನಾಲೆಯಲ್ಲಿ ಹುಡುಕಹೊರಟಿದ್ದ. ಇಟಲಿ ಮೂಲದ ಈ ಬಾಲಕರ ಅಯಸ್ಕಾಂತಕ್ಕೆ ಸಿಕ್ಕಿಬಿದ್ದದ್ದು ಗ್ರೇನೇಡಗಳೆಂದು ತಿಳಿದಾಕ್ಷಣ ಅವರ ಅಜ್ಜ ಜೇಮ್ಸ್ ಬೋಲ್ಟನ್ ಅವರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ಫೋಟಗೊಳ್ಳದ ಈ ಗ್ರೆನೇಡ್ಗಳನ್ನು ಎಚ್ಚರಿಕೆಯಿಂದ ತೆಗೆದಿಟ್ಟ ಅಜ್ಜ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಸೇನೆಯ ತಂತ್ರಜ್ಞರು ಬಂದು ಇವುಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಅಧಿಕಾರಿಗಳು ಈ ಗ್ರೆನೇಡ್ ಗಳನ್ನು ನಿಷ್ಕ್ರಿಯಗೊಳಿಸುವುದಕ್ಕೂ ಮೊದಲು, ಆ ಪ್ರದೇಶವನ್ನು ಸುತ್ತುವರಿದು ಬಾಂಬ್ ನಿಷ್ಕ್ರಿಯ ದಳ, ಆಂಬ್ಯುಲೆನ್ಸ್ ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಈ ಗ್ರೆನೇಡ್ ಗಳು ಎರಡನೇ ವಿಶ್ವಯುದ್ಧದವು ಎಂದು ಅಧಿಕಾರಿಗಳು ಧೃಢೀಕರಿಸಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಯ್ಯಲು ಸುರಕ್ಷಿತವಾದವು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


