ವಿದೇಶ

ಕೆನಡಾ ಸಂಸತ್ ಚುನಾವಣೆ: 40 ಕ್ಕೂ ಹೆಚ್ಚು ಭಾರತೀಯ ಮೂಲದ ಕೆನಡಾ ಪ್ರಜೆಗಳ ಸ್ಪರ್ಧೆ

338 ಸದಸ್ಯ ಬಲ ಹೊಂದಿರುವ ಕೆನಡಾದ ಸಂಸತ್ ಗೆ ಅ.19 ರಂದು (ಸೋಮವಾರ) ಚುನಾವಣೆ ನಡೆಯಲಿದ್ದು ಭಾರತೀಯ ಮೂಲದ 40 ಕೆನಡಾ ಪ್ರಜೆಗಳು ಕಣದಲ್ಲಿದ್ದಾರೆ.

ಕೆನಡಾ ಸಂಸತ್ ಚುನಾವಣೆ: 40 ಕ್ಕೂ ಹೆಚ್ಚು ಭಾರತೀಯ ಮೂಲದ ಕೆನಡಾ ಪ್ರಜೆಗಳ ಸ್ಪರ್ಧೆ
ಕೆನಡಾ ಸಂಸತ್(ಸಂಗ್ರಹ ಚಿತ್ರ)
Published On :

ಟೊರೊಂಟೊ: 338 ಸದಸ್ಯ ಬಲ ಹೊಂದಿರುವ ಕೆನಡಾದ ಸಂಸತ್ ಗೆ ಅ.19 ರಂದು (ಸೋಮವಾರ) ಚುನಾವಣೆ ನಡೆಯಲಿದ್ದು ಭಾರತೀಯ ಮೂಲದ 40 ಕೆನಡಾ ಪ್ರಜೆಗಳು ಕಣದಲ್ಲಿದ್ದಾರೆ.
308 ಜನರ ಹೌಸ್ ಆಫ್ ಕಾಮನ್ಸ್ ನಲ್ಲಿ ಈ ಹಿಂದೆ ಎಂಟು ಜನ ಭಾರತೀಯ ಮೂಲದ ಕೆನಡಾ ಸಂಸದರಿದ್ದರು. ಆದರೆ ಈ ಬಾರಿ ಕೆನಡಾದ ಪ್ರಮುಖ ಮೂರು ಪಕ್ಷಗಳು ಹಾಲಿ ಸಂಸದರನ್ನು ಸೇರಿ 40 ಭಾರತೀಯ ಮೂಲದವರನ್ನು ಕಣಕ್ಕಿಳಿಸಿರುವುದರಿಂದ ಈ ಬಾರಿ ಕೆನಡಾ ಸಂಸತ್ ನ್ನು ಪ್ರತಿನಿಧಿಸುವ ಭಾರತೀಯ ಮೂಲದ ಸಂಸದರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.    
ವಿದೇಶಾಂಗ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ದೀಪಕ್ ಒಭರೈ ದೀರ್ಘಾವಧಿ ಸೇವೆ ಸಲ್ಲಿಸಿರುವ ಭಾರತೀಯ ಮೂಲದ ಕೆನಡಾ ಸಂಸದರಾಗಿದ್ದಾರೆ. ವಿಶೇಷವೆಂದರೆ 10 ಕ್ಷೇತ್ರಗಳಲ್ಲಿ ಇಂಡೋ-ಕೆನೇಡಿಯನ್ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ನಡೆಯಲಿದೆ.
ಕೆನಡಾದ ಮೂರು ಪ್ರಮುಖ ಪಕ್ಷಗಳು ಭಾರತೀಯ ಮೂಲದವರನ್ನು ಕಣಕ್ಕಿಳಿಸಿರುವುದರೊಂದಿಗೆ ಕೆಲವು ಭಾರತೀಯರು ಸ್ವತಂತ್ರ ಅಭ್ಯರ್ಥಿಗಳಾಗಿಯೂ ಚುನಾವಣೆ ಎದುರಿಸುತ್ತಿದ್ದಾರೆ. ಈ ಬಾರಿ 30 ಕ್ಷೇತ್ರಗಳನ್ನು ಸೇರಿಸಲಾಗಿದ್ದು 308 ಇದ್ದ ಕ್ಷೇತ್ರಗಳು 338 ಕ್ಷೇತ್ರಗಳಿಗೆ ಏರಿಕೆಯಾಗಿದೆ. ಕೆನಡಾದ ಒಟ್ಟು ಜನಸಂಖ್ಯೆಯ ಶೇ.3 ಕ್ಕಿಂತ ಹೆಚ್ಚು ಭಾರತೀಯ ಮೂಲದವರು ವಾಸಿಸುತ್ತಿದ್ದು ಮಹತ್ವದ ರಾಜಕೀಯ ಶಕ್ತಿಯಾಗಿ ರೂಪುಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.