ವಿದೇಶ

ಸಿರಿಯಾದಲ್ಲಿ ಐಸಿಸ್ ನಾಶಕ್ಕೆ ರಷ್ಯಾ ಸೇನೆಯಿಂದ ವಾಯುದಾಳಿ

ರಷ್ಯಾದ ಸೇನೆಯು ಸಿರಿಯಾದಲ್ಲಿ ಐಸಿಸ್‌ ಉಗ್ರಗಾಮಿ ಸಂಘಟನೆಯನ್ನು ನಾಶಗೊಳಿಸಲು ತನ್ನ ಕಾರ್ಯವನ್ನು...

ಸಿರಿಯಾದಲ್ಲಿ ಐಸಿಸ್ ನಾಶಕ್ಕೆ ರಷ್ಯಾ ಸೇನೆಯಿಂದ ವಾಯುದಾಳಿ
ಸಿರಿಯಾದ ಲಟಕಿಯಾ ಪ್ರಾಂತ್ಯದಲ್ಲಿ ರಷ್ಯಾದ ಸೇನಾ ಪೈಲಟ್ ನಿಂದ ಕಾರ್ಯಾಚರಣೆ(ಫೋಟೋ ಕೃಪೆ-ಏಜೆನ್ಸ್-ಫ್ರಾನ್ಸ್-ಪ್ರೆಸ್)
Published On :

ವಾಷಿಂಗ್ಟನ್: ರಷ್ಯಾದ ಸೇನೆಯು ಸಿರಿಯಾದಲ್ಲಿ ಐಸಿಸ್‌ ಉಗ್ರಗಾಮಿ ಸಂಘಟನೆಯನ್ನು ನಾಶಗೊಳಿಸಲು  ತನ್ನ ಕಾರ್ಯವನ್ನು ಸಕ್ರಿಯಗೊಳಿಸಿದೆ ಎಂಬ ಮಾಹಿತಿ ಸಿಕ್ಕಿದೆ.

ಗಲಭೆ, ಯುದ್ಧಪೀಡಿತ ದೇಶವಾದ ಸಿರಿಯದಲ್ಲಿ ರಷ್ಯಾದ ಸೇನೆಯು ಐಸಿಸ್‌ ವಿರುದ್ಧ ತನ್ನ ಪೂರ್ಣ ಪ್ರಾಬಲ್ಯವನ್ನು ಮೆರೆಯುತ್ತಿದೆ ಮತ್ತು ಐಸಿಸ್‌ ಉಗ್ರರ ನೆಲೆಗಳನ್ನೆಲ್ಲ ನಿರ್ನಾಮ ಮಾಡುತ್ತಿದೆ ಎಂದು ಡೇಲಿ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಸು-34 ಯುದ್ಧ ವಿಮಾನ ಒಳಗೊಂಡಂತೆ ಅನೇಕ ಯುದ್ಧ ವಿಮಾನಗಳ ಮೂಲಕ ಐಸಿಸ್‌ ವಿರುದ್ಧದ ವಾಯು ದಾಳಿಯನ್ನು ಈ ತಿಂಗಳ ಆರಂಭದಲ್ಲಿ ಆರಂಭಿಸಿರುವ ರಷ್ಯನ್‌ ಸೇನೆಯು ಐಸಿಸ್‌ ಉಗ್ರರಿಗೆ ಶಸ್ತ್ರಾಸ್ತ್ರಗಳು ಪೂರೈಕೆಯಾಗುವ ಎಲ್ಲ ಮಾರ್ಗಗಳನ್ನು ಕಡಿದು ಹಾಕಿದೆ. ಬಳಿಕ ಐಸಿಸ್‌ನ ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನು ಮತ್ತು ಆತ್ಮಾಹುತಿ ದಾಳಿಕೋರರ ವರ್ಕ್‌ ಶಾಪ್ ಗಳನ್ನು ಸಂಪೂರ್ಣವಾಗಿ ನಾಶ ಮಾಡಿದೆ.

ರಷ್ಯದ ವಾಯು ದಾಳಿಯಲ್ಲಿ ಐಸಿಸ್‌ ಉಗ್ರರ ಭದ್ರಕೋಟೆಯಾಗಿರುವ ಅಲೆಪ್ಪೋ, ಹಮಾ, ಇದ್‌ಲಿಬ್‌, ಲಟಾಕಿಯಾ ಮತ್ತು ದೇರ್‌ ಇಜ್‌ ಝೂರ್‌ ಪ್ರದೇಶಗಳು ಸರ್ವನಾಶವಾಗಿವೆ ಎಂದು ಅಧಿಕೃತ ಮೂಲಗಳು ಹೇಳಿವೆ. ಐಸಿಸ್‌ ಉಗ್ರ ಸಂಘಟನೆಯು ಈ ತನಕ ಸಿರಿಯಾ ಮತ್ತು ಇರಾಕ್‌ ನ ಭಾರೀ ವಿಸ್ತಾರದ ಭೂಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.

ರಷ್ಯಾದ ಸುಖೋಯಿ ಎಸ್‌ಯು 24ಎಂ ಬಾಂಬರ್‌ಗಳು ಅಲೆಪ್ಪೋ ನಗರದಲ್ಲಿನ ಐಸಿಸ್‌ ಉಗ್ರರ ನೆಲೆಗಳನ್ನು ಧ್ವಂಸ ಮಾಡಿವೆ. ಉಗ್ರರ ವಾಹನಗಳಿಗೆ ಶಸ್ತ್ರಾಸ್ತ್ರಗಳನ್ನು ತುಂಬಿಸುವ ವರ್ಕ್‌ ಶಾಪ್‌ ಗಳನ್ನು ಈ ದಾಳಿಯಲ್ಲಿ ನಾಶಮಾಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಜನರಲ್‌ ಇಗೋರ್‌ ಕೊನಾಶ್ನೆಕೋವ್‌ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.