ವಿದೇಶ

ಉದ್ಯೋಗಿಗಳು ಊಟದ ವಿರಾಮದಲ್ಲಿ ಪೋರ್ನ್ ವೀಕ್ಷಿಸಿದರೆ ಅಪರಾಧ ಅಲ್ಲ: ಇಟಲಿ ಕೋರ್ಟ್

ಕಚೇರಿಯಲ್ಲೇ ಊಟದ ವಿರಾಮದ ಅವಧಿಯಲ್ಲಿ ಪೋರ್ನ್ ವಿಡಿಯೋ ನೋಡುವ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಇಟಲಿಯ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಉದ್ಯೋಗಿಗಳು ಊಟದ ವಿರಾಮದಲ್ಲಿ ಪೋರ್ನ್ ವೀಕ್ಷಿಸಿದರೆ ಅಪರಾಧ ಅಲ್ಲ: ಇಟಲಿ ಕೋರ್ಟ್
ಇಟಲಿ ಸುಪ್ರೀಂ ಕೋರ್ಟ್
Published On :

ರೋಮ್: ಕಚೇರಿಯಲ್ಲೇ ಊಟದ ವಿರಾಮದ ಅವಧಿಯಲ್ಲಿ ಪೋರ್ನ್ ವಿಡಿಯೋ ನೋಡುವ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಇಟಲಿಯ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಫಿಯೆಟ್ ಕಂಪನಿ ತನ್ನ ನೌಕರನ ವಿರುದ್ಧ ದಾಖಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಇಟಲಿಯ ಸುಪ್ರೀಂ ಕೋರ್ಟ್, ಉದ್ಯೋಗಿ ಕೆಲಸದ ಅವಧಿಯಲ್ಲಿ ಪೋರ್ನ್ ವೀಕ್ಷಿಸುತ್ತಿದ್ದ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಅರ್ಜಿ ವಜಾಗೊಳಿಸಿದೆ.
ತನ್ನ ಉದ್ಯೋಗಿ ಕೆಲಸದ ಅವಧಿಯಲ್ಲಿ ಪೋರ್ನ್ ವೀಕ್ಷಿಸುತ್ತಿದ್ದ, ಇದರಿಂದಾಗಿ ಆತ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾನೆ, ಈ ಹಿನ್ನೆಲೆಯಲ್ಲಿ ಉದ್ಯೋಗಿ ಮರಳಿ ಕಂಪನಿಗೆ ಬರುವುದು ಸಾಧ್ಯವಿಲ್ಲ ಎಂದು ಫಿಯೆಟ್ ಕಂಪನಿ ವಾದಿಸಿತ್ತು.  ಪ್ರತಿಯಾಗಿ ವಾದಿಸಿದ್ದ ಕಂಪನಿ ನೌಕರ, ಊಟದ ವಿರಾಮದ ವೇಳೆ ಪೋರ್ನ್ ಚಿತ್ರದ ತುಣುಕನ್ನು ವೀಕ್ಷಿಸಿದ್ದಾಗಿ ಹೇಳಿದ್ದ.
ಉದ್ಯೋಗಿಯ ಪರವಾಗಿ ತೀರ್ಪು ನೀಡಿರಿಉವ ಇಟಲಿ ನ್ಯಾಯಾಲಯ ಊಟದ ವಿರಾಮದ ಅವಧಿಯಲ್ಲಿ ಪೋರ್ನ್ ವಿಡಿಯೋ ನೋಡುವ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಬಾರದು ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.