ಎನ್‍ಐಎಗೆ ಸದ್ಯದಲ್ಲೇ ವಿದೇಶದಲ್ಲಿ ತನಿಖೆ ನಡೆಸುವ ವಿಶೇಷ ಅಧಿಕಾರ
ಅಮೆರಿಕದ ಎಫ್ಬಿಐ ಮಾದರಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ)ಗೂ ವಿದೇಶಿ ನೆಲದಲ್ಲಿ ಭಾರತೀಯರ ಮೇಲೆ ನಡೆಯುವ...

Published On :
ನವದೆಹಲಿ: ಅಮೆರಿಕದ ಎಫ್ಬಿಐ ಮಾದರಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ)ಗೂ ವಿದೇಶಿ ನೆಲದಲ್ಲಿ ಭಾರತೀಯರ ಮೇಲೆ ನಡೆಯುವ ಭಯೋತ್ಪಾದನಾ ದಾಳಿಗೆ ಸಂಬಂಧಿಸಿ ತನಿಖೆ ನಡೆಸುವ ಅಧಿಕಾರ ನೀಡುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಸದ್ಯದಲ್ಲೇ ಒಪ್ಪಿಗೆ ನೀಡಲಿದೆ.
ಅಫ್ಘಾನಿಸ್ತಾನದ ಹೀರತ್‍ನಲ್ಲಿರುವ ರಾಯಭಾರಿ ಕಚೇರಿ ಮೇಲೆ ಕಳೆದ ವರ್ಷ ನಡೆದಂಥ ದಾಳಿಯ ಕುರಿತು ತನಿಖೆಗೆ ನಡೆಸಲು ಇದರಿಂದ ಅನುಕೂಲವಾಗಲಿದೆ. ಸದ್ಯ ಎನ್‍ಐಎಗೆ ಭಾರತದೊಳಗೆ ತನಿಖೆ ನಡೆಸುವ ಅಧಿಕಾರವನ್ನಷ್ಟೇ ನೀಡಲಾಗಿದೆ.
ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐಗೆ ಅಲ್ಲಿನ ಕಾನೂನು ವಿದೇಶದಲ್ಲೂ ತನಿಖೆ ನಡೆಸುವ ಅಧಿಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಅದು ಮುಂಬೈ ದಾಳಿ ವೇಳೆ ಮೃತಪಟ್ಟ ಅಮೆರಿಕದ ಪ್ರಜೆಗಳ ವಿಚಾರವಾಗಿ ಪ್ರತ್ಯೇಕ ತನಿಖೆ ನಡೆಸಿತ್ತು. ಇದೇ ರೀತಿಯ ಅಧಿಕಾರವನ್ನು ತಮಗೂ ನೀಡಬೇಕೆಂದು ಭಾರತೀಯ ತನಿಖಾ ಸಂಸ್ಥೆ ಸರ್ಕಾರವನ್ನು ಮನವಿ ಮಾಡಿತ್ತು.
ಆದರೆ, ಭಯೋತ್ಪಾದನಾ ಸಂಘಟನೆಗಳ ವಿರುದ್ಧ ನಡೆಯುವ ಅಂಡರ್ ಕವರ್ ಆಪರೇಷನ್‍ಗಳಿಗೆ ಕಾನೂನು ರಕ್ಷಣೆ ನೀಡಬೇಕೆನ್ನುವ ಮತ್ತೊಂದು ಪ್ರಸ್ತಾಪಕ್ಕೆ ಮಾತ್ರ ಸದ್ಯಕ್ಕೆ ಒಪ್ಪಿಗೆ ಸಿಗುವುದು ಕಷ್ಟ. ಅಮೆರಿಕ ಮತ್ತು ಬ್ರಿಟನ್‍ನ ತನಿಖಾ ಸಂಸ್ಥೆಗಳು ಭಯೋತ್ಪಾದನಾ ಸಂಘಟನೆಗಳ ಹೆಡೆಮುರಿ ಕಟ್ಟಲು ಈ ರೀತಿಯ ಕಾರ್ಯಾಚರಣೆ ನಡೆಸುತ್ತವೆ.
ವ್ಯಾಪ್ತಿ ವಿಸ್ತರಣೆ
- ಸದ್ಯ ಎನ್‍ಐಎ ತನಿಖಾ ವ್ಯಾಪ್ತಿ ಭಾರತಕ್ಕಷ್ಟೇ ಸೀಮಿತ
- ವಿದೇಶದಲ್ಲಿ ಭಾರತೀಯರ ಮೇಲೆ ದಾಳಿ ನಡೆದರೆ ತನಿಖೆ ನಡೆಸುವ ಅಧಿಕಾರ ನೀಡಿ ಎಂದಿದ್ದ ಎನ್‍ಐಎ
- ಉಗ್ರರ ವಿರುದ್ಧದ ಅಂಡರ್ ಕವರ್ ಆಪರೇಷನ್‍ಗೆ ಕಾನೂನು ರಕ್ಷಣೆ ಕೇಳಿದ ತನಿಖಾ ತಂಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


