ಮದ್ಯ ಮಾರಾಟ ಲೈಸೆನ್ಸ್ ಪಡೆದ ಭಾರತ ಸಂಜಾತ
ಭಾರತೀಯ ಮೂಲದ ವರ್ತಕರೊಬ್ಬರು ಇಲ್ಲಿನ ಗ್ರಾಮವೊಂದರಲ್ಲಿ ಮದ್ಯ ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಜಯ ಗಳಿಸಿ ಚರಿತ್ರೆ ಸೃಷ್ಟಿಸಿದ್ದಾರೆ...

ಲಂಡನ್: ಭಾರತೀಯ ಮೂಲದ ವರ್ತಕರೊಬ್ಬರು ಇಲ್ಲಿನ ಗ್ರಾಮವೊಂದರಲ್ಲಿ ಮದ್ಯ ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಜಯ ಗಳಿಸಿ ಚರಿತ್ರೆ ಸೃಷ್ಟಿಸಿದ್ದಾರೆ.
ಈ ವ್ಯಾಜ್ಯದಲ್ಲಿ ಜಯ ಸಾಧಿಸಿರುವುದು ಭಾರತೀಯ ಮೂಲದ ವರ್ತಕ ಕಮಲ್ ಶರ್ಮ. 38 ವರ್ಷದ ಕಮಲ್ ಶರ್ಮ ವೆಸ್ಟ್ ಮಿಡ್ಲ್ಯಾಂಡ್ ಪ್ರದೇಶದ ಬರ್ಮಿಂಗ್ ಹ್ಯಾಂ ಬಳಿಯ ಬೋರ್ನ್ವಿಲ್ಲೆ ಗ್ರಾಮದಲ್ಲಿ ದಿನಸಿ ಮಳಿಗೆಯೊಂದನ್ನು ನಡೆಸುತ್ತಿದ್ದಾರೆ. ಈ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಲು ಹಲವರು ವಿರೋಧಿಸಿದ್ದರು. ಬೋರ್ನ್ವಿಲ್ಲೆ ಗ್ರಾಮವನ್ನು ಚಾಕೋಲೇಟ್ ಕಂಪನಿ ಕ್ಯಾಡ್ಬರಿ ಕುಟುಂಬ ನಿರ್ಮಾಣ ಮಾಡಿದೆ. ಇದು ಸಾಂಪ್ರದಾಯಿಕ ಗ್ರಾಮವಾಗಿದ್ದು 120 ವರ್ಷಗಳಿಂದಲೂ ಇಲ್ಲಿ ಮದ್ಯ ಮಾರಾಟ ಮಾಡುತ್ತಿಲ್ಲ.
ಮದ್ಯ ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ಮನವಿಗೆ ಪರವಾಗಿ 400 ಮತ್ತು 230 ಮಂದಿ ವಿರುದ್ಧವಾಗಿ ಸಹಿ ಮಾಡಿದ್ದರು. ಇದನ್ನು ಪರಿಗಣಿಸಿದ ಬರ್ಮಿಂಗ್ಹ್ಯಾಮ್ ಸಿಟಿ ಕೌನ್ಸಿಲ್ ಪರವಾನಗಿ ಉಪ ಸಮಿತಿ ಶರ್ಮಗೆ ಮದ್ಯ ಮಾರಾಟಕ್ಕೆ ಷರತ್ತುಬದ್ಧ ಪರವಾನಗಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


