ಭಾರತದ ಹವಾಮಾನ ಕ್ರಿಯಾ ಯೋಜನೆ: ಶೇ.33 -35 ರಷ್ಟು ಇಂಗಾಲ ತೀವ್ರತೆ ಕಡಿಮೆಮಾಡುವ ಗುರಿ
ವಿಶ್ವಸಂಸ್ಥೆಯ ನಿಯಮಾವಳಿಗಳ ಸಭೆಯಲ್ಲಿ ಹವಾಮಾನ ಕ್ರಿಯಾ ಯೋಜನೆಯನ್ನು ಸಲ್ಲಿಸಿರುವ ಭಾರತ ಇಂಗಾಲ ಹೊರಸೂಸುವಿಕೆಯ ತೀವ್ರತೆಯನ್ನು ಶೇ.33 -35 ರಷ್ಟು ಕಡಿಮೆ ಮಾಡುವುದಾಗಿ

ವಾಷಿಂಗ್ಟನ್: ವಿಶ್ವಸಂಸ್ಥೆಯ ನಿಯಮಾವಳಿಗಳ ಸಭೆಯಲ್ಲಿ 'ಹವಾಮಾನ ಕ್ರಿಯಾ ಯೋಜನೆ'ಯನ್ನು ಸಲ್ಲಿಸಿರುವ ಭಾರತ ಇಂಗಾಲ ಹೊರಸೂಸುವಿಕೆಯ ತೀವ್ರತೆಯನ್ನು ಶೇ.33 -35 ರಷ್ಟು ಕಡಿಮೆ ಮಾಡುವುದಾಗಿ ಹೇಳಿದೆ.
ಹವಾಮಾನ ಬದಲಾವಣೆಗಾಗಿ ನಡೆಯುವ ಶೃಂಗಸಭೆಗೂ ಮುನ್ನ (ಯುಎನ್ಎಫ್ ಸಿಸಿಸಿ) ಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, 2030 ರ ವೇಳೆಗೆ ನವೀಕರಿಸಬಹುದಾದ ಶಕ್ತಿಯ ಪಾಲನ್ನು ಹೆಚ್ಚಿಸುವುದಾಗಿ ಭಾರತ ಹೇಳಿದೆ. ಭಾರತ ತನ್ನ ಉದ್ದೇಶಿತ ರಾಷ್ಟ್ರೀಯ ನಿಶ್ಚಿತ ಕೊಡುಗೆ (ಐ.ಎನ್.ಡಿ.ಸಿ) ಯನ್ನು ಮಹತ್ವಾಕಾಂಕ್ಷೆಯದ್ದಾಗಿದೆ ಎಂದು ಹೇಳಿದೆ.
ಉತ್ಪನ್ನಗಳಿಂದ ಹೊರಬರುವ ಇಂಗಾಲ ಹೊರಸೂಸುವಿಕೆಯನ್ನು 2030 ರ ವೇಳೆಗೆ ಶೇ.33 -35 ರಷ್ಟು ಕಡಿಮೆ ಮಾಡುವುದು ಹಾಗೂ ಫಾಸಿಲ್ ರಹಿತ ಇಂಧನ ಆಧಾರಿತ ಶಕ್ತಿ ಸಂಪನ್ಮೂಲಗಳಿಂದ ಶೇ.40 ರಷ್ಟು ವಿದ್ಯುಚ್ಛಕ್ತಿಯ ಗುರಿ ಹೊಂದಿದೆ ಎಂದು ಭಾರತ ತಿಳಿಸಿದೆ.
ಪ್ಯಾರಿಸ್ ನಲ್ಲಿ ವರ್ಷಾಂತ್ಯಕ್ಕೆ ನಡೆಯಲಿರುವ ಶೃಂಗಸಭೆಯಲ್ಲಿ ಸಮಗ್ರ ಸಮಾನತೆ ಮತ್ತು ಹವಾಮಾನ ಬದಲಾವಣೆ ಒಪ್ಪಂದಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ. ಶೃಂಗಸಭೆಯಲ್ಲಿ ಅವಳಡಿಸಿಕೊಳ್ಳುವ ಅಂಶಗಳನ್ನು ಕಾರ್ಯರೂಪಕ್ಕೆ ತರಲು 2015 -2030 ವರೆಗೆ 206 ಬಿಲಿಯನ್ ಡಾಲರ್ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


