ಹವಾಮಾನ ಬದಲಾವಣೆಗೆ ಭಾರತ ಜವಾಬ್ದಾರಿಯಲ್ಲ: ಮೋದಿ
ಹವಾಮಾನ ಬದಲಾವಣೆ ಜಾಗತಿಕ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಭಾರತ ಜವಾಬ್ದಾರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ...

ಪ್ಯಾರಿಸ್: ಹವಾಮಾನ ಬದಲಾವಣೆ ಜಾಗತಿಕ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಭಾರತ ಜವಾಬ್ದಾರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.
ಇಂದಿನಿಂದ ಆರಂಭವಾಗಿರುವ ಹವಾಮಾನ ಬದಲಾವಣೆ ಶೃಂಗ ಸಭೆಯಲ್ಲಿ ಭಾರತೀಯ ಪೆವಿಲಿಯನ್ ಉದ್ಘಾಟಿಸಿ ಮಾತನಾಡಿದ ಮೋದಿ, ಹವಾಮಾನ ಬದಲಾವಣೆಗೆ ಭಾರತ ಕಾರಣವಲ್ಲ. ಇದು ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಎಂದರು.
ಜಾಗತಿಕ ಪರಿಣಾಮದ ಸಮಸ್ಯೆಯನ್ನು ನಾವು ಎದುರಿಸುತ್ತಿದ್ದೇವೆ. ಹವಾಮಾನ ಬದಲಾವಣೆಯಿಂದ ನಮ್ಮ ದೇಶದಲ್ಲಿ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ ತುರ್ತು ಪರಿಹಾರ ಕ್ರಮದ ಅಗತ್ಯ ಇದೆ ಎಂದರು.
ಭಾರತವೀಗ ಹವಾಮಾನ ಬದಲವಾಣೆ ವಿರುದ್ಧದ ಹೋರಾಟದ ನಾಯಕತ್ವ ವಹಿಸಿಕೊಳ್ಳಬೇಕಿದೆ ಎಂದ ಪ್ರಧಾನಿ, ಪ್ರಕೃತಿ ಜೊತೆಗಿನ ಸಂಬಂಧ ಮರು ಸ್ಥಾಪನೆಯಾಗಬೇಕು ಮತ್ತು ಪ್ರಕೃತಿ ಜೊತೆಗಿನ ಮಾನವ ಸಂಬಂಧ ಉತ್ತಮಗೊಳ್ಳಬೇಕು ಎಂದು ಹೇಳಿದರು.
ಹವಾಮಾನ ಬದಲಾವಣೆ ಅಥವಾ ಜಾಗತಿಕ ತಾಪಮಾನ ಏರಿಕೆ ಕುರಿತ ವಿಶ್ವಸಂಸ್ಥೆಯ 21ನೇ ಶೃಂಗಸಭೆ ಇಂದಿನಿಂದ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಆರಂಭವಾಗಿದ್ದು, 12 ದಿನಗಳ ಕಾಲ ನಡೆಯುವ ಈ ಶೃಂಗದಲ್ಲಿ 150 ರಾಷ್ಟ್ರಗಳ ನಾಯಕರು ಭಾಗವಹಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


