ಸಿಂಗಪುರ ಪ್ರಧಾನಿಗೆ 1849 ರ ಸಿಂಗಪುರ ನಕ್ಷೆಯ ನಕಲು ಉಡುಗೊರೆ ನೀಡಿದ ಮೋದಿ
ಸಿಂಗಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸಿಂಗಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರಿಗೆ 1849 ರಲ್ಲಿ ಸಿದ್ಧಪಡಿಸಲಾಗಿದ್ದ ಸಿಂಗಪುರದ ನಕ್ಷೆಯ ನಕಲನ್ನು ಉಡುಗೊರೆ ನೀಡಿದ್ದಾರೆ.

ಸಿಂಗಾಪುರ್: ಸಿಂಗಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸಿಂಗಪುರ ಪ್ರಧಾನಿ ಲೀ ಸೀನ್ ಲೂಂಗ್ ಅವರಿಗೆ 1849 ರಲ್ಲಿ ಸಿದ್ಧಪಡಿಸಲಾಗಿದ್ದ ಸಿಂಗಪುರದ ನಕ್ಷೆಯ ನಕಲನ್ನು ಉಡುಗೊರೆ ನೀಡಿದ್ದಾರೆ.
"ಸಿಂಗಪುರ ಪ್ರಧಾನಿಗೆ 1849 ರಲ್ಲಿ ಸಿದ್ಧಪಡಿಸಲಾಗಿದ್ದ ನಕ್ಷೆಯ ನಕಲನ್ನು ಉಡುಗೊರೆ ನೀಡಲಾಯಿತು" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಸಿಂಗಪುರ ಪ್ರವಾಸದ 2 ನೇ ದಿನದಂದು ಪ್ರಧಾನಿ ಮೋದಿ, ಲೀ ಸೀನ್ ಲೂಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಮೋದಿ ಅವರಿಗೆ ಪ್ರಧಾನಿ ಲೀ ಊಟದ ಔತಣಕೂಟ ಆಯೋಜಿಸಿದ್ದರು.
1842 -45 ಅವಧಿಯಲ್ಲಿ 52 X 52 ಇಂಚು, ಅಳತೆಯ ಸಿಂಗಪುರದ ಸ್ಥಳಾಕೃತಿಯ ವಿವರಗಳನ್ನು ಹೊಂದಿದ ನಕ್ಷೆಯ ನಕಲನ್ನು ನೀಡಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ದಹಲಿ ನ್ಯಾಷನಲ್ ಆರ್ಕೈವ್ಸ್ ನಕ್ಷಾಶಾಸ್ತ್ರ ಸಂಗ್ರಹದಿಂದ ನಕ್ಷೆಯ ನಕಲನ್ನು ತಯಾರಿಸಲಾಗಿದೆ ಎಂದು ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


