ಎಫ್'ಡಿಐ ಎಂದರೆ 'ಫಸ್ಟ್ ಡೆವಲಪ್ ಇಂಡಿಯಾ': ಪ್ರಧಾನಿ ಮೋದಿ
ಎಫ್ ಡಿಐ ಎಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್. ಜಗತ್ತಿಗೆ ಎಫ್ ಡಿಐ ಎಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಎಂದರ್ಥ. ಆದರೆ ನನಗೆ ಎಫ್ ಡಿಐ ಎಂದರೆ ಫಸ್ಟ್ ಡೆವಲಪ್ ಇಂಡಿಯಾ ಎಂದರ್ಥ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ...

ಸಿಂಗಾಪುರ: ಎಫ್ ಡಿಐ ಎಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್. ಜಗತ್ತಿಗೆ ಎಫ್ ಡಿಐ ಎಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಎಂದರ್ಥ. ಆದರೆ ನನಗೆ ಎಫ್ ಡಿಐ ಎಂದರೆ ಫಸ್ಟ್ ಡೆವಲಪ್ ಇಂಡಿಯಾ ಎಂದರ್ಥ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.
ತಮ್ಮ ಎರಡುದಿನಗಳ ಸಿಂಗಾಪುರ ಪ್ರವಾಸದ ಎರಡನೇ ದಿನವಾದ ಇಂದು ಸಿಂಗಾಪುರದಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಎಕ್ಸ್ ಪೋ ಸೆಂಟರ್ ನಲ್ಲಿ ಮಾತನಾಡಿರುವ ಅವರು, 5 ಸಾವಿರ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ. ಭಾರತೀಯ ಸಂಸ್ಕೃತಿಯ ಪ್ರಕಾರ ನೆರೆದಿದ್ದವರಿಗೆಲ್ಲರಿಗೂ ನಮಸ್ಕಾರ, ವಡ್ಡಕಮ್ ಎಂದು ಹೇಳಿದರು. ನಂತರ ತಮ್ಮ ಭಾಷಣ ಆರಂಭಿಸಿದ ಅವರು, ಈ ಹಿಂದೆಯೂ ನಾನು ಸಿಂಗಾಪುರಕ್ಕೆ ಬಂದಿದ್ದೆ. ಆದರೆ ಇಂದು ಇಲ್ಲಿನ ವಾತಾವರಣ ಬದಲಾದಂತಿದೆ. ಸಿಂಗಾಪುರದಲ್ಲಿ ಈ ರೀತಿಯ ವಾತಾವರಣವಿದೆ ಎಂಬುದನ್ನು ಭಾರತದಲ್ಲಿರುವ ಯಾರೊಬ್ಬರು ಊಹಿಸಲೂ ಸಾಧ್ಯವಿಲ್ಲ. ಸಿಂಗಾಪುರದ ಜನತೆಗೆ ಹೃದಯ ಪೂರ್ವಕವಾಗಿ ವಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತವೊಂದು ಅತ್ಯಂತ ದೊಡ್ಡ ರಾಷ್ಟ್ರ ಹಾಗೂ ಶಕ್ತಿಶಾಲಿದೇಶ. ನಮ್ಮ ದೇಶದಲ್ಲಿ 1.2 ಬಿಲಿಯನ್ ರಷ್ಟು ಜನರಿದ್ದಾರೆ. ಆದರೂ, ಭಾರತ ಸಿಂಗಾಪುರದಿಂದ ಕಲಿಯುವಂತಹದ್ದುಸಾಕಷ್ಟಿದೆ. ಹಲವು ವರ್ಷದಿಂದ ಭಾರತೀಯರ ವಿದೇಶದಲ್ಲಿ ನೆಲೆಯೂರಿದ್ದಾರೆ. ವಿದೇಶದಲ್ಲಿರುವ ಭಾರತೀಯರುಶಾಂತಿ ಹಾಗೂ ಪ್ರೀತಿಯಿಂದ ಜೀವನ ನಡೆಸುತ್ತಿದ್ದಾರೆ. ಇದು ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.
ಇಲ್ಲಿನ ದೇಶದೊಂದಿಗೆ ಹಾಲಿನಲ್ಲಿರುವ ಸಕ್ಕರೆಯಂತೆ ಬರೆತಿದ್ದೀರಿ. ಭಾರತ ದೊಡ್ಡ ಹಾಗೂ ಶಕ್ತಿಶಾಲಿಯುತರಾಷ್ಟ್ರವಾಗಿದ್ದರೂ ಇಂದಿಗೂ ಸಿಂಗಾಪುರದಿಂದ ಕಲಿಯುವಂತಹದ್ದು ಸಾಕಷ್ಟಿದೆ. ಪ್ರೀತಿ ಹಾಗೂ ನಮ್ಮತನಎಂಬುದು ಭಾರತೀಯರ ಮೂಲ ಮಂತ್ರವಾಗಿದೆ. ಸಿಂಗಾಪುರ ಅಭಿವೃದ್ಧಿಗೆ ಭಾರತೀಯರ ಶ್ರಮ ಅಪಾರವಾದದ್ದು. ವಿದೇಶದಲ್ಲಿರುವಭಾರತೀಯರಿಂದ ದೇಶದ ಮೇಲಿರುವ ನಂಬಿಕೆ ಹೆಚ್ಚಿದೆ ಎಂದು ಹೇಳಿದ್ದಾರೆ.
ಇಂದು ಇಡೀ ಜಗತ್ತು ಭಾರತವನ್ನು ನೋಡುತ್ತಿರುವ ದೃಷ್ಠಿ ಬದಲಾಗಿದೆ. ಇದಕ್ಕೆ ಪ್ರಮುಖ ಕಾರಣ ವಿದೇಶದಲ್ಲಿ ನೆಲೆಸಿರುವ ಭಾರತೀಯರು. ನೀವು ನಿಮ್ಮ ಕನಸ್ಸನ್ನು ನನಸು ಮಾಡಿಕೊಳ್ಳಬೇಕೆಂದರೆ ಬದ್ಧತೆ ಹಾಗೂ ಸಮರ್ಪಣಾ ಭಾವವನ್ನು ಮೂಡಿಸಿಕೊಳ್ಳಬೇಕು. ಸಮರ್ಪಣಾ ಭಾವವೊಂದಿದ್ದರೆ ಸಾಕು ಯಶಸ್ಸೆಂಬುದು ನಿಮ್ಮ ಪಾದಗಳನ್ನು ಚುಂಬಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


