ವಿಚ್ಛೇದನದ ಕಾರಣ ಬಿಚ್ಚಿಟ್ಟ ಇಮ್ರಾನ್ ಖಾನ್ ಪತ್ನಿ
ನಾನು ಅಡುಗೆ ಮನೆಯಲ್ಲಿ ಚಪಾತಿ ಮಾಡುವಾಗ ಕಿಟಕಿಯಿಂದ ಆಚೆ ನೋಡುವಂತಿರಲಿಲ್ಲ ಎಂದು ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಪತ್ನಿ ರೆಹಾಂ ಖಾನ್ ...

ಲಂಡನ್ :ನಾನು ಅಡುಗೆ ಮನೆಯಲ್ಲಿ ಚಪಾತಿ ಮಾಡುವಾಗ ಕಿಟಕಿಯಿಂದ ಆಚೆ ನೋಡುವಂತಿರಲಿಲ್ಲ ಎಂದು ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಪತ್ನಿ ರೆಹಾಂ ಖಾನ್ ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಜೊತೆಗಿನ 10 ತಿಂಗಳ ವಿವಾಹದ ನಂತರ ತಮ್ಮ ಡಿವೋರ್ಸ್ ಗೆ ಕಾರಣ ಏನು ಎಂಬುದನ್ನು ರೆಹಾಂಖಾನ್ ತಿಳಿಸಿದ್ದಾರೆ.
ಟಿವಿ ನಿರೂಪಕಿಯಾಗಿದ್ದ ರೆಹಾಂ ಖಾನ್ ಈ ಹಿಂದೆ ಬ್ರಿಟನ್ ಉದ್ಯಮಿಯನ್ನು ವಿವಾಹವಾಗಿದ್ದರು. 9 ವರ್ಷದ ನಂತರ ಆತನಿಗೆ ಡಿವೋರ್ಸ್ ನೀಡಿದರು. 2013 ರಲ್ಲಿ ಟಿವಿ ನಿರೂಪಕಿ ಕೆಲಸಕ್ಕೆ ರಾಜೀನಾಮೆ ನೀಡಿ 2013 ರಲ್ಲಿ ಪಾಕಿಸ್ತಾನಕ್ಕೆ ವಾಪಸಾದರು.
ನಾನು ಅಡುಗೆ ಮನೆಯಲ್ಲಿ ಚಪಾತಿ ಮಾಡುವಾಗ ಹೊರಗೆ ಕಾಣಿಸಿಕೊಳ್ಳಬಾರದೆಂಬ ಇಮ್ರಾನ್ ಖಾನ್ ಷರತ್ತು ಹಾಕಿದ್ದರೆಂದು ರೆಹಂ ಖಾನ್ ಆರೋಪಿಸಿದ್ದಾರೆ.
ಇನ್ನೂ ಮನೆಗೆ ಯಾರಾದರೂ ಅತಿಥಿಗಳು ಬಂದು ಊಟ ಖಾಲಿಯಾದರೇ ಒಂದು ಚಪಾತಿ ತಿನ್ನು ಸಾಕು ಎಂದು ಇಮ್ರಾನ್ ಖಾನ್ ಹೇಳುತ್ತಿದ್ದರು ಎಂದೂ ಸಬ ಆರೋಪಿಸಿದ್ದಾರೆ.
ಬೀದಿ ಮಕ್ತಳ ರಾಯಭಾರಿಯಾಗಿದ್ದೇನೆ, ಆದರೆ ನಾನು ಯಾವುದೇ ಸಭೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದರು ಎಂದು ರೆಹಾಂ ಖಾನ್ ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಮನೆಯಲ್ಲಿದ್ದಾಗ ನನಗೆ ಇನ್ ಸೆಕ್ಯೂರಿಟಿ ಕಾಡುತ್ತಿತ್ತು. ಈಗ ಅಲ್ಲಿಂದ ವಾಪಸ್ ಬಂದಿದ್ದು. ಮುಂದಿನ ಯೋಜನೆಗಳ ಬಗ್ಗೆ ಕಾರ್ಯತಂತ್ರ ರೂಪಿಸುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


