ಕೊಹಿನೂರು ವಜ್ರ ಭಾರತಕ್ಕೆ ವಾಪಸ್ ನೀಡಿ: ಕೀತ್ ವಾಜ್
ಜಗತ್ಪ್ರಸಿದ್ಧ ಕೊಹಿ ನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಬೇಕೆಂದು ಭಾರತ ಮೂಲದ ಬ್ರಿಟಿಷ್ ಸಂಸದ ಕೀತ್ ವಾಜ್ ಕರೆ ನೀಡಿದ್ದಾರೆ...

ಲಂಡನ್: ಜಗತ್ಪ್ರಸಿದ್ಧ ಕೊಹಿ ನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಬೇಕೆಂದು ಭಾರತ ಮೂಲದ ಬ್ರಿಟಿಷ್ ಸಂಸದ ಕೀತ್ ವಾಜ್ ಕರೆ ನೀಡಿದ್ದಾರೆ. ಭಾರತದ ಪ್ರಧಾನಿ ಬ್ರಿಟನ್ ಗೆ ಭೇಟಿ ನೀಡಲಿದ್ದು ಆ ಸಮಯದಲ್ಲಿ ವಜ್ರ ಹಿಂದಿರುಗಿಸ ಬೇಕೆಂದು ಹೇಳಿದ್ದಾರೆ. ಇತ್ತೀಚೆಗೆ ಸಂಸದ ಶಶಿ ತರೂರ್ ಆಕ್ಸ್ ಫರ್ಡ್ ಯೂನಿಯನ್‍ನಲ್ಲಿ ಮಾಡಿದ ಭಾಷಣದಲ್ಲಿ ``200 ವರ್ಷ ಭಾರತವನ್ನು ಆಳಿದ ಬ್ರಿಟಿಷರು ಅಂದು ಮಾಡಿದ ಹಾನಿಯನ್ನು ತುಂಬಿಕೊಡಬೇಕು'' ಎಂದಿದ್ದರು. ಆ ಮಾತುಗಳಿಗೆ ಸಹಮತ ವ್ಯಕ್ತ ಪಡಿಸಿರುವ ವಾಜ್, ತರೂರ್ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸ ಬೇಕು ಎಂದಿದ್ದಾರೆ.
ಹಣದ ಮೂಲಕ ನಷ್ಟ ಭರ್ತಿ ಮಾಡಿ ಕೊಡಲು ಸಾಧ್ಯವಿಲ್ಲವಾದರೂ, ಕೊಹಿನೂರ್ ವಜ್ರ ವಾಪಸ್ ನೀಡುವ ಮೂಲಕ ನಷ್ಟ ಭರಿಸಿಕೊಡದಿರಲು ಕಾರಣಗಳಿಲ್ಲ. ಈ ಮಾತನ್ನು ಹಲವು ವರ್ಷ ಗಳಿಂದ ಹೇಳುತ್ತಾ ಬಂದಿದ್ದೇನೆ'' ಎಂದಿರುವ ವಾಜ್, ಮೋದಿ ಮತ್ತು ಕ್ಯಾಮರೂನ್ ಭೇಟಿಯಾದಾಗ ಕೊಹಿನೂರ್ ವಜ್ರವನ್ನು ಭಾರತಕ್ಕೆಮರಳಿಸಿಗರೆ ಅದೊಂದು ಐತಿಹಾಸಿಕ ಕ್ಷಣವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


