ನೈಜೀರಿಯಾ ಅವಳಿ ಸ್ಫೋಟ; ೧೦೦ ಸಾವು
ನೈಜೀರಿಯಾದ ಗೊಂಬೆ ನಗರದ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಎರಡು ಭಾರಿ ಸ್ಫೋಟಗಳಲ್ಲಿ ಕನಿಷ್ಠ ೧೦೦ ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು

ಅಬುಜ: ನೈಜೀರಿಯಾದ ಗೊಂಬೆ ನಗರದ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಎರಡು ಭಾರಿ ಸ್ಫೋಟಗಳಲ್ಲಿ ಕನಿಷ್ಠ ೧೦೦ ಜನ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಮಾಧ್ಯಮವೊಂದು ವರದಿ ಮಾಡಿದೆ.
ಗುರುವಾರ ಸಂಜೆ ಮಾರುಕಟ್ಟೆ ಪ್ರದೇಶದ ಜನನಿಬಿಡ ಪ್ರದೇಶದಲ್ಲಿ ಈದ್-ಉಲ್-ಫಿತ್ರ್ ಸಮಯದಲ್ಲಿ ಕೊನೆಯ ಕ್ಷಣದ ಮಾರಾಟ ನಡೆಯುವಾಗ ಈ ಸ್ಫೋಟಗಳು ನಡೆದಿವೆ.
ಮೃತಪಟ್ಟವರಲ್ಲಿ ಬಹುತೇಕ ಮಕ್ಕಳು ಎಂದಿದ್ದಾರೆ ಪ್ರತ್ಯಕ್ಷದರ್ಶಿಯೊಬ್ಬರು. ಸ್ಫೋಟಕ್ಕೆ ಕಾರಣಗಳು ಇನ್ನೂ ತಿಳಿದಿಲ್ಲ.
ಈ ಸ್ಫೋಟಕ್ಕೆ ನೈಜೀರಿಯಾ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಬೋಕೋ ಹರಾಮ್ ಕಾರಣ ಎಂದು ಪ್ರಾದೇಶಿಕ ನಿವಾಸಿಗಳು ಆರೋಪಿಸಿದ್ದಾರೆ.
ಇಂತಹ ಹಿಂಸಾತ್ಮಕ ದಾಳಿಗಳಲ್ಲಿ ೨೦೦೯ ರಿಂದ ಆಫ್ರಿಕಾದ ಹೆಚ್ಚು ಜನಸಂಖ್ಯೆಯ ದೇಶವಾದ ನೈಜೀರಿಯದಾದ್ಯಂತ ೧೩ ಸಾವಿರಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


