ವಿದೇಶ

ಸರ್ಬಿಯಾ ಪ್ರಧಾನಿಗೆ ಕಲ್ಲೇಟು

ಇಪ್ಪತ್ತು ವರ್ಷಗಳ ಹಿಂದಿನ ಬೋಸ್ನಿಯಾ ಮುಸ್ಲಿಮರ ಮಾರಣಹೋಮದ ಆಕ್ರೋಶಕ್ಕೆ ಸರ್ಬಿಯಾದ ಪ್ರಧಾನಿ ಅಲೆಕ್ಸಾಂಡರ್ ವ್ಯುಸಿಸ್ ಕಲ್ಲೇಟು...

ಸರ್ಬಿಯಾ ಪ್ರಧಾನಿಗೆ ಕಲ್ಲೇಟು
ಸರ್ಬಿಯಾದ ಪ್ರಧಾನಿ ಅಲೆಕ್ಸಾಂಡರ್ ವ್ಯುಸಿಸ್ ಕಲ್ಲೇಟು ತಿಂದ ಘಟನೆ (ಸಂಗ್ರಹ ಚಿತ್ರ)
Published On :

-20 ವರ್ಷಗಳ ಹಿಂದಿನ ಮಾರಣಹೋಮದ ಸ್ಮರಣೆ ಕಾರ್ಯಕ್ರಮದಲ್ಲಿ ಆಕ್ರೋಶ

ಸ್ರೆಬ್ರೆನಿಕಾ: ಇಪ್ಪತ್ತು ವರ್ಷಗಳ ಹಿಂದಿನ ಬೋಸ್ನಿಯಾ ಮುಸ್ಲಿಮರ ಮಾರಣಹೋಮದ ಆಕ್ರೋಶಕ್ಕೆ ಸರ್ಬಿಯಾದ ಪ್ರಧಾನಿ ಅಲೆಕ್ಸಾಂಡರ್ ವ್ಯುಸಿಸ್ ಕಲ್ಲೇಟು ತಿಂದ ಘಟನೆ ಶನಿವಾರ ನಡೆದಿದೆ. ಯುಗೊಸ್ಲಾವಿಯಾದ ವಿಭಜನೆ ವೇಳೆ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಮಹಿಳೆಯರು, ಮಕ್ಕಳು ಎನ್ನದೆ ಎಂಟು ಸಾವಿರಕ್ಕೂ ಹೆಚ್ಚು ಸ್ರೆಬ್ರೇನಿಕಾ ಮುಸ್ಲಿಮರನ್ನು ಬೋಸ್ನಿಯನ್ ಸರ್ಬ್ ಸೈನಿಕರು ಹತ್ಯೆ ಮಾಡಿದ್ದರು. ಆ ವೇಳೆ ಸರ್ಬಿಯಾ ಬೋಸ್ನಿಯನ್ ಸರ್ಬ್‍ಗೆ ಬೆಂಬಲ ವ್ಯಕ್ತಪಡಿಸಿತ್ತು. ಈ ವೇಳೆ ಬೋಸ್ನಿಯನ್ ಸರ್ಬ್ ಸೈನಿಕರು ನಡೆಸಿದ ಮಾರಣಹೋಮದ 20ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಶನಿವಾರ ಸ್ರೆಬ್ರೇನಿಕಾದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅವರು ಸ್ಮಾರಕದ ಮುಂದೆ ಹೂಗುಚ್ಛ ಇಡುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಏಕಾಏಕಿ ಪ್ರಧಾನಿ ಮೇಲೆ ಕಲ್ಲು, ಬಾಟಲಿಗಳನ್ನು ಎಸೆಯಲು ಆರಂಭಿಸಿದರು. ಆಗ ಅನಿವಾರ್ಯವಾಗಿ ಪ್ರಧಾನಿ ಅವರು ತಮ್ಮ ಅಂಗರಕ್ಷಕರ ಹಿಂದೆ ಮರೆಯಾಗಿ ನಿಲ್ಲಬೇಕಾಯಿತು. ಈ ವೇಳೆ ಸಾರ್ವಜನಿಕರು ಎಸೆದ ಕಲ್ಲೊಂದು ಪ್ರಧಾನಿ ಅವರ ತಲೆಗೂ ತಾಗಿದೆ. ಅವರ ಕನ್ನಡ ಕೂಡ ಒಡೆದು ಹೋಗಿದೆ ಎನ್ನಲಾಗಿದೆ. ಸರ್ಬಿಯಾ ಹಾಗೂ ಬೋಸ್ನಿಯನ್ ಸರ್ಬ್ ರಾಜಕಾರಣಿಗಳು ಈ ಜನಾಂಗೀಯ ಹತ್ಯೆ ಯನ್ನು ತಳ್ಳಿಹಾಕುತ್ತಲೇ ಬಂದಿದ್ದರು. ಆದರೆ, ಈ ಘಟನೆಗೆ ಸಂಬಂಧಿಸಿ ಎರಡು ಅಂತಾರಾಷ್ಟ್ರೀಯ ನ್ಯಾಯಮಂಡಳಿಗಳು 1990 ದಶಕದಲ್ಲಿ ನಡೆದ ಹತ್ಯೆಯನ್ನು ಮಾರಣಹೋಮ ಎಂದು ಕರೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.