ಕ್ಯೂಬಾದಲ್ಲಿನ್ನು ತಾಯಿಯಿಂದ ಮಗುವಿಗೆ ಎಚ್‍ಐವಿ ಬರಲ್ಲ
ರಾಷ್ಟ್ರೀಯ ವೈದ್ಯರ ದಿನಾಚರಣೆ ದಿನವನ್ನು ಸ್ಮರಣೀಯವಾಗಿಸಲು ಆರೋಗ್ಯ ಲೋಕದಲ್ಲೊಂದು ಮಹತ್ತರ ಬೆಳವಣಿಗೆ ಕಂಡುಬಂದಿದೆ...

ವಾಷಿಂಗ್ಟನ್: ರಾಷ್ಟ್ರೀಯ ವೈದ್ಯರ ದಿನಾಚರಣೆ ದಿನವನ್ನು ಸ್ಮರಣೀಯವಾಗಿಸಲು ಆರೋಗ್ಯ ಲೋಕದಲ್ಲೊಂದು ಮಹತ್ತರ ಬೆಳವಣಿಗೆ ಕಂಡುಬಂದಿದೆ.
ಇನ್ನುಮುಂದೆ ಎಚ್‍ಐವಿ ಪೀಡಿತ ಹೆಣ್ಣು ತಾನು ಹಡೆಯಲಿರುವ ಮಗುವಿಗೂ ಸೋಂಕು ತಲುಪುವುದೆಂದು ಆತಂಕ ಪಡುವ ಅಗತ್ಯವಿಲ್ಲ. ಆಕೆ ನಿಶ್ಚಿಂತೆಯಿಂದ ಗರ್ಭಧರಿಸಿ ತಾಯಿಯಾಗಬಹುದು. ಕ್ಯೂಬಾದ ವೈದ್ಯರು ತಾಯಿಯಿಂದ ಮಗುವಿಗೆ ಎಚ್‍ಐವಿ ವೈರಸ್ ಹರಡದಂತೆ ತಡೆಯುವ ಸಾಧನೆಯನ್ನು ಮಾಡುವ ಮೂಲಕ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಕ್ಯೂಬಾ ಈ ಯಶಸ್ವಿ ಸಂಶೋಧನೆ ಮಾಡಿದ ಪ್ರಥಮ ದೇಶ ಎಂಬ ಖ್ಯಾತಿಗೆ ಪಾತ್ರವಾಗಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.
ಎಚ್‍ಐವಿ ಪೀಡಿತರನ್ನು ಗುಣಮುಖಗೊಳಿಸುವ ಸಲುವಾಗಿ ಬಳಕೆ ಮಾಡುತ್ತಿರುವ ಆ್ಯಂಟಿರೆಟ್ರೋವೈರಲ್(ಎಆರ್‍ವಿ) ಎಂಬ ಔಷಧವನ್ನು ಉಪಯೋಗಿಸುವ ಮೂಲಕ ಮಹಾನ್ ಸಾಧನೆ ಮಾಡಲಾಗಿದೆ. ``ಆರೋಗ್ಯಜಗತ್ತಿನಲ್ಲಿ ಇದೊಂದು ಮಹತ್ಸಾಧನೆ. ಎಚ್‍ಐವಿ ವಿರುದ್ಧದ ಸಮರಕ್ಕೆ ಹಾಗೂ ಏಡ್ಸ್ ಮುಕ್ತ ಸಮಾಜದ ನಿರ್ಮಾಣಕ್ಕೆ ಇದು ಪ್ರಮುಖ ಹೆಜ್ಜೆ'' ಎಂದು ಡಬ್ಲುಎಚ್‍ಓ ದ ನಿರ್ದೇಶಕ ಮಾರ್ಗರೆಟ್ ಚಾನ್ ಹೇಳಿದ್ದಾರೆ.
2010ರಿಂದ ಸಂಶೋಧನೆಯಲ್ಲಿ ತೊಡಗಿದ್ದ ಕ್ಯೂಬಾ ವಿಜ್ಞಾನಿಗಳು ಕೊನೆಗೂ ಜಯ ಸಾಧಿಸಿದ್ದಾರೆ. ಪ್ರತಿ ಒಂದು ಲಕ್ಷ ಹೆಚ್‍ಐವಿ ಸೋಂಕಿತರಲ್ಲಿ ಕೇವಲ 50ಕ್ಕಿಂತ ಕಡಿಮೆ ತಾಯಂದಿರು ಸೋಂಕನ್ನು ಮಕ್ಕಳಿಗೆ ದಾಟಿಸುವ ಹಂತಕ್ಕೆ ಇದು ಪರಿಸ್ಥಿತಿಯನ್ನು ಸುಧಾರಿಸಲಿದೆ ಎಂಬುದು ವಿಜ್ಞಾನಿಗಳ ವಿಶ್ವಾಸ.
- ವಿಶ್ವದಲ್ಲಿ ಪ್ರತಿವರ್ಷ 14ಲಕ್ಷ ಹೆಚ್ಐವಿ ಪೀಡಿತ ಹೆಂಗಸರ ಗರ್ಭಧಾರಣೆ
- ಗರ್ಭಾವಸ್ಥೆಯಲ್ಲಿ ಅಥವಾ ಪ್ರಸವದ ನಂತರ ಮಗುವಿಗೆ ಸೋಂಕು ದಾಟುವಸಾಧ್ಯತೆ- ಶೇ 15. ರಿಂದ ಶೇ. 45
- ಈಗ ಕಂಡುಹಿಡಿದಿರುವ ಔಷಧದ ಬಳಕೆಯಿಂದ ಈ ಸಾಧ್ಯತೆ ಶೇ.1
- 2009ರಲ್ಲಿ ಹೆಚ್‍ಐವಿ ಪೀಡಿತ ಮಕ್ಕಳ ವಾರ್ಷಿಕ ಸರಾಸರಿ 4 ಲಕ್ಷ
- 2013ರಲ್ಲಿ 2.40 ಲಕ್ಷಕ್ಕೆ ಇಳಿಕೆ
- 2015ರಲ್ಲಿ 40 ಸಾವಿರಕ್ಕೆ ಇಳಿಕೆಯಾಗುವ ಸೂಚನೆ
ವಿಭಾಗದ ಕಾರ್ಯಕಾರಿ ನಿರ್ದೇಶಕ
ಎಆರ್ ವಿ ಎಂದರೇನು?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


