ಸಿರಿಯಾ ಮೇಲೆ ರಷ್ಯಾ ದಾಳಿ: ಎರಡು ಸಾವಿರ ಮಂದಿ ಬಲಿ
ಸಿರಿಯಾದ ಅಧ್ಯಕ್ಷ ಬಷಾರ್ ಅಲ್ ಅಸಾದ್ ಪರ ಸೇನಾ ಕಾರ್ಯಾಚರಣೆ ಆರಂಭಿಸಿರುವ ರಷ್ಯಾ 3 ತಿಂಗಳಲ್ಲಿ 2300ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದೆ...

ಬೈರೂತ್: ಸಿರಿಯಾದ ಅಧ್ಯಕ್ಷ ಬಷಾರ್ ಅಲ್ ಅಸಾದ್ ಪರ ಸೇನಾ ಕಾರ್ಯಾಚರಣೆ ಆರಂಭಿಸಿರುವ ರಷ್ಯಾ 3 ತಿಂಗಳಲ್ಲಿ 2300ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಇದರಲ್ಲಿ ಮೂರನೇ ಒಂದು ಭಾಗದಷ್ಟು ನಾಗರಿಕರಿದ್ದಾರೆ ಎಂದು ಮಾನವ ಹಕ್ಕು ಸಂಘಟನೆಯೊಂದು ಆರೋಪಿಸಿದೆ.
ಅಸಾದ್ ವಿರುದ್ಧ ಬಂಡೆದ್ದಿರುವ ವಿರೋಧಿ ಗುಂಪುಗಳು ಹಾಗೂ ಐಎಸ್ ಉಗ್ರರ ವಿರುದ್ಧ ಕಳೆದ ಸೆ.30ರಂದು ರಷ್ಯಾ ಸಿರಿಯಾದಲ್ಲಿ ವೈಮಾನಿಕ ದಾಳಿ ಆರಂಭಿಸಿತ್ತು. 3 ತಿಂಗಳ ಅವಧಿಯಲ್ಲಿ ಈವರೆಗೆ ರಷ್ಯಾ ದಾಳಿಗೆ ಒಟ್ಟು 2371 ಮಂದಿ ಜೀವ ತೆತ್ತಿದ್ದಾರೆ. ಆ ಪೈಕಿ, 180 ಮಕ್ಕಳೂ ಸೇರಿದಂತೆ 792 ಮಂದಿ ನಾಗರಿಕರು ಬಲಿಯಾಗಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕು ಉಲ್ಲಂಘನೆ ವೀಕ್ಷಕ ಸಂಘಟನೆ ಹೇಳಿದೆ. ಐಎಸ್ ಉಗ್ರ ಸಂಘಟನೆಯ 655 ಉಗ್ರರು ಈ ದಾಳಿಯಲ್ಲಿ ಹತ್ಯೆಯಾಗಿದ್ದಾರೆ.
ಅಲ್ಲದೆ, ಇತರ ಬಂಡುಕೋರ ಸಂಘಟನೆಗಳ 924 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಬ್ರಿಟನ್ ಮೂಲದ ಮಾನವ ಹಕ್ಕುಗಳ ಸಂಘಟನೆ ಹೇಳಿದೆ. ರಷ್ಯಾ ವೈಮಾನಿಕ ದಾಳಿ ಆರಂಭಿಸಿದ ದಿನದಿಂದಲೂ ದಾಳಿಗೆ ನಾಗರಿಕರು ಬಲಿಯಾಗುತ್ತಿರುವ ಬಗ್ಗೆ ಐರೋಪ್ಯ ಸಮುದಾಯ ಗೂ ಟರ್ಕಿ, ಸೌಧಿ ಅರೇಬಿಯಾಮತ್ತಿತರ ಮಧ್ಯಪ್ರಾಚ್ಯ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಕಳೆದ ವಾರವಷ್ಟೇ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ಕೂಡ ರಷ್ಯಾ ದಾಳಿಯಿಂದಾಗಿ ಅಪಾರ ಪ್ರಮಾಣದ ನಾಗರಿಕರ ಸಾವು ಸಂಭವಿಸುತ್ತಿದ್ದು, ಇದುಯುದ್ಧ ಅಪರಾಧಗಳಿಗೆ ದಾರಿಯಾಗಲಿದೆ ಎಂದು ಎಚ್ಚರಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


