ಭಾರತೀಯ ಮೂಲದ ಕ್ಯಾನ್ಸರ್ ತಜ್ಞನಿಗೆ ನೈಟ್ ಹುಡ್ ಪದವಿ
ಭಾರತೀಯ ಮೂಲದ ಕ್ಯಾನ್ಸರ್ ಸಂಶೋಧನೆ ತಜ್ಞ ಹರ್‌ಪಾಲ್ ಸಿಂಗ್ ಕುಮಾರ್ ಅವರಿಗೆ ಇಂಗ್ಲೆಂಡಿನ...

ಲಂಡನ್: ಭಾರತೀಯ ಮೂಲದ ಕ್ಯಾನ್ಸರ್ ಸಂಶೋಧನೆ ತಜ್ಞ ಹರ್‌ಪಾಲ್ ಸಿಂಗ್ ಕುಮಾರ್ ಅವರಿಗೆ ಇಂಗ್ಲೆಂಡಿನ ಎರಡನೇ ಎಲಿಜಬೆತ್ ರಾಣಿ ಅವರು ಪ್ರತಿಷ್ಠಿತ ನೈಟ್‌ಹುಡ್ ಪದವಿ ನೀಡಿ ಗೌರವಿಸಿದ್ದಾರೆ.
ಕ್ಯಾನ್ಸರ್ ರೋಗವನ್ನು ತಡೆಗಟ್ಟುವಿಕೆ, ಪ್ರಾರಂಭದ ಹಂತದಲ್ಲಿಯೇ ಪತ್ತೆಹಚ್ಚುವಿಕೆ ಮತ್ತು ಅದಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುವಲ್ಲಿ ನಡೆಸಿರುವ ಪರಿಣಾಮಕಾರಿ ಸಂಶೋಧನೆಯನ್ನು ಪರಿಗಣಿಸಿ ಹರ್‌ಪಾಲ್ ಸಿಂಗ್ ಕುಮಾರ್ ಅವರಿಗೆ ಈ ಪದವಿಯನ್ನು ನೀಡಿ ಗೌರವಿಸಲಾಗಿದೆ.
ಇಂಗ್ಲೆಂಡಿನ ಕ್ಯಾನ್ಸರ್ ಸಂಶೋಧನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್‌ಪಾಲ್ ಸಿಂಗ್. ಮಾತ್ರವಲ್ಲದೆ ಸ್ವತಂತ್ರ ಕ್ಯಾನ್ಸರ್ ಕಾರ್ಯಪಡೆಯ ಅಧ್ಯಕ್ಷರೂ ಆಗಿದ್ದು ಎನ್‌ಎಚ್‌ಎಸ್ ಕ್ಯಾನ್ಸರ್ ಸ್ಟ್ರಾಟೆಜಿಯ ರೂಪಕರೂ ಹೌದು. ಅವರು 2015-20ರ ಅವಧಿಗೆ ಇಂಗ್ಲಂಡ್‌ನ ಕ್ಯಾನ್ಸರ್ ನಿಯಂತ್ರಣ ಕಾರ್ಯತಂತ್ರ ಕುರಿತಾಗಿ ಬರೆದಿದ್ದ ಪ್ರಬಂಧ ಈ ವರ್ಷ ಜುಲೈನಲ್ಲಿ ಪ್ರಕಟಗೊಂಡು ವ್ಯಾಪಕ ಪ್ರಶಂಸೆ ಪಡೆದುಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


