ವಿದೇಶ

ಮೇಕಪ್ ಮಾಡಿದ್ದಕ್ಕೆ ಬಸ್ಸಿಂದ ದಬ್ಬಿದ್ರು!

ಮೇಕಪ್ ಮಾಡಿಕೊಂಡು ತಾನಿನ್ನೂ ಮಗು ಎಂದು ರಿಯಾಯ್ತಿ ಟಿಕೆಟ್ ಪಡೆದು ವಂಚಿಸುತ್ತಿದ್ದಾಳೆ ಎಂದು ಮಹಿಳಾ ಕಂಡಕ್ಟರ್...

ಮೇಕಪ್ ಮಾಡಿದ್ದಕ್ಕೆ ಬಸ್ಸಿಂದ ದಬ್ಬಿದ್ರು!
ಸಾಂದರ್ಭಿಕ ಚಿತ್ರ
Published On :

ಲಂಡನ್: ಮೇಕಪ್ ಮಾಡಿಕೊಂಡು ತಾನಿನ್ನೂ ಮಗು ಎಂದು ರಿಯಾಯ್ತಿ ಟಿಕೆಟ್ ಪಡೆದು ವಂಚಿಸುತ್ತಿದ್ದಾಳೆ ಎಂದು ಮಹಿಳಾ ಕಂಡಕ್ಟರ್ ಅಮಾಯಕ ಹುಡುಗಿಯೊಬ್ಬಳನ್ನು ಅರ್ಧ ದಾರಿಯಲ್ಲೇ ಬಸ್‍ನಿಂದ ಕೆಳಗಿಳಿಸಿದ ಪ್ರಸಂಗ ಬರ್ಮಿಂಗ್‍ಹ್ಯಾಮ್ ನಲ್ಲಿ ನಡೆದಿದೆ.

ಕಳೆದ ವಾರ ಸ್ನೇಹಿತರೊಂದಿಗೆ ಸಿನಿಮಾ ನೋಡಲು ಹೊರಟಿದ್ದ ಜಹರಾ ಸಾದಿಕ್ ಎಂಬ 15  ವರ್ಷದ ಹುಡುಗಿ ನ್ಯಾಷನಲ್ ಎಕ್ಸ್ ಪ್ರೆಸ್ ಬಸ್ ಏರಿದ್ದಳು. ಟಿಕೆಟ್ ಪರೀಕ್ಷಿಸಲು ಆಕೆಯ ಬಳಿ  ಬಂದ ಲೇಡಿ ಕಂಡಕ್ಟರ್, ಆಕೆಯನ್ನು ಅಡಿಯಿಂದ ಮುಡಿವರೆಗೆ ದುರುಗುಟ್ಟಿ ನೋಡಿ,   ಮೇಕಪ್  ಮೆತ್ತಿಕೊಂಡು ನಮಗೇ ಮೋಸ ಮಾಡಲು ಪ್ರಯತ್ನಿಸಬೇಡ. ನಿನ್ನನ್ನು ನೋಡಿದರೆ 15  ವರ್ಷ  ಎಂದು ಯಾರೂ ಹೇಳಲಾಗದು. ಸುಳ್ಳು ಹೇಳಿ ಮಕ್ಕಳ ಟಿಕೆಟ್ ನಲ್ಲಿ ಪ್ರಯಾಣಿಸಲು  ನಾಟಕ  ಮಾಡುತ್ತಿದ್ದೀಯಾ ಎಂದು ದಬಾಯಿಸಿದ್ದಾಳೆ. ಅಷ್ಟಕ್ಕೇ ಮುಗಿದಿದ್ದರೆ, ಅದು ಸುದ್ದಿಯಾಗುತ್ತಿರಲಿಲ್ಲ. ಆದರೆ, ಹುಡುಗಿ ತಾನಿನ್ನೂ 15ರ ವಯಸ್ಸಿನವಳೆಂದು ಎಷ್ಟು ಗೋಗರೆದರೂ ಕೇಳದೆ ಆಕೆ ಜಹರಾಳನ್ನು ಅಲ್ಲಿಯೇ ಬಸ್‍ನಿಂದ ಕೆಳಗಿಳಿಸಿ ಹೋಗಿದ್ದಾಳೆ.

ಪಾಪ ! ಬಾಲಕಿ ಅಲ್ಲಿಂದ 4 ಕಿ.ಮೀ ನಡೆದುಕೊಂಡೇ ಮುಂದೆ ಹೋಗಿದ್ದಾಳೆ. ಇದೀಗ ಬಾಲಕಿಯ ತಂದೆ ದೂರು ನೀಡಿದ್ದು, ಬಸ್  ಕಂಪೆನಿ ತನಿಖೆ ಆರಂಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.