bus

ಕಾರ್ಕಳ: ಮಾಜಿ ಸಚಿವ ರಮಾನಾಥ ರೈ ಕಾರು ಅಪಘಾತ; ಸ್ವಲ್ಪದರಲ್ಲಿ ಪಾರು
ಕಾರ್ಕಳದ ಸಾಣೂರಿನಲ್ಲಿ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತವಾಗಿದೆ. ಖಾಸಗಿ ಬಸ್ ಮೂಡುಬಿದಿರೆಗೆ ತೆರಳುತ್ತಿತ್ತು. ರಮಾನಾಥ್ ರೈ ಪ್ರಯಾಣಿಸುತ್ತಿದ್ದ ಕಾರು ಕಾರ್ಕಳದ ಕಡೆಗೆ ಹೋಗುತ್ತಿತ್ತು. ಈ ವೇಳೆ ಭೀಕರ ಅಪಘಾತವಾಗಿದೆ.

ಕಲಬುರಗಿ: ಮೊಬೈಲ್ ಟಾರ್ಚ್ ಬೆಳಕಲ್ಲಿ ಬಸ್ ಚಲಾಯಿಸಿದ ಚಾಲಕ, ಪ್ರಯಾಣಿಕರಿಂದ ತೀವ್ರ ಟೀಕೆ, ಆಕ್ರೋಶ-Viral Video
ವೈರಲ್ ಆದ ವಿಡಿಯೊಗಳ ಬಳಿಕ ಪ್ರತಿಕ್ರಿಯಿಸಿರುವ ಸ್ಥಳೀಯ ಕೆಕೆಆರ್‌ಟಿಸಿ ಅಧಿಕಾರಿಗಳು, ಬಸ್‌ನ ಹೆಡ್‌ಲೈಟ್ ವೈರಿಂಗ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಈ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದ್ಗಾರೆ.

'SSLC ಮಕ್ಕಳಿಗೆ ಬೋರ್ಡ್ ಎಕ್ಸಾಂ ಇದೆ, ಎಲ್ಲೇ ಸಿಕ್ಕಿದ್ರೂ ಅವರನ್ನ ಹತ್ತಿಸ್ಕೊಳ್ಳಿ': ಬಸ್ ಕಂಡಕ್ಟರ್ ಮಾನವೀಯತೆ; Video
ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಪ್ರಯಾಣ ಸುಗಮವಾಗಲು ಕೆಎಸ್ಆರ್ಟಿಸಿ ಉಚಿತ ಪ್ರಯಾಣ ಘೋಷಿಸಿದ್ದು, ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಬಹುದು.

ಡೆಹ್ರಾಡೂನ್: ಆಳವಾದ ಕಂದಕಕ್ಕೆ ಬಸ್ ಉರುಳಿಬಿದ್ದು ನಾಲ್ವರು ಸಾವು, Video
ಅಪಘಾತದ ಸಮಯದಲ್ಲಿ 30 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವಾರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕ V/S ಖಾಸಗಿ ಸಾರಿಗೆ: 'ನಿಮ್ಮ ಜೊತೆ ಚರ್ಚೆಗೆ ಬಿಎಂಟಿಸಿ MD ಬರ್ತಾರೆ, ನೀವು ರೆಡಿಯಾ': ಪೈಗೆ ರಾಮಲಿಂಗಾ ರೆಡ್ಡಿ ಸವಾಲು
ಕಳೆದ ಮೂರು ವರ್ಷಗಳಿಂದ ಬಸ್‌ಗಳ ಕೊರತೆಯಿದೆ ಎಂದು ಆರೋಪಿಸಿ, ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಖಚಿತಪಡಿಸಲು ಸರ್ಕಾರ ವಿಫಲವಾಗಿದೆ ಎಂದು ಮೋಹನ್ ದಾಸ್ ಪೈ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದರು.

ವೈರಲ್ ಆಗಬೇಕೆಂಬ ಗೀಳು: ಹತ್ತಿರ ಹೋಗಿ ವಿಡಿಯೋ ರೆಕಾರ್ಡ್; ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳೆ; ನೊಂದು ವ್ಯಕ್ತಿ ಆತ್ಮಹತ್ಯೆ!
ಸ್ಥಳೀಯ ಬಸ್ಸಿನಲ್ಲಿ ಆತನ ಪ್ರಯಾಣಿಸುತ್ತಿದ್ದಾಗ ವ್ಯಕ್ತಿ ಲೈಂಗಿಕ ಕಿರುಕುಳ ಕೊಡುವುದನ್ನು ಮಹಿಳೆ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಳು.

ಉತ್ತಮ ರಸ್ತೆಗಳಿಲ್ಲದೆ ಬಸ್ಸುಗಳನ್ನು ಓಡಿಸುವುದಾದರು ಹೇಗೆ? ಶಕ್ತಿ ಯೋಜನೆ ಯಶಸ್ಸಿನ ನಡುವೆಯೂ ರಾಜ್ಯದ 1,800 ಹಳ್ಳಿಗಳಿಗೆ ಬಸ್ ಸಂಪರ್ಕವೇ ಇಲ್ಲ!
ರಾಜ್ಯ ಸರ್ಕಾರವು ಇನ್ನೂ ಕೊನೆಯ ಹಂತದ ಸಂಪರ್ಕವನ್ನು ಒದಗಿಸಿಲ್ಲ, ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಪ್ರತಿದಿನ ಮೈಲುಗಳಷ್ಟು ನಡೆದುಕೊಂಡು ಹೋಗಬೇಕಾಗಿರುವ ಅನಿವಾರ್ಯತೆಯಿದೆ. ಶಕ್ತಿ ಯೋಜನೆಯ ನಂತರ ಹಳ್ಳಿಗಳಲ್ಲಿ ಬಸ್‌ಗಳ ಬೇಡಿಕೆ ಹೆಚ್ಚಾಗಿದೆ.

ಬೆಳಗಾವಿ: ಹುಬ್ಬಳ್ಳಿಯಿಂದ ಪುಣೆಗೆ ಹೊರಟ್ಟಿದ್ದ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು
ಹುಬ್ಬಳ್ಳಿಯಿಂದ ಪುಣೆಯತ್ತ ಹೊರಟಿದ್ದ ಗೋಗಟೆ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್‌ನಲ್ಲಿ ಒಟ್ಟು 12 ಜನರು ಪ್ರಯಾಣಿಸುತ್ತಿದ್ದು, ಇದರಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: ಹೊತ್ತಿ ಉರಿದ ಬಸ್; 50 ಮಂದಿ ಸಜೀವ ದಹನ
ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪ್ರಯಾಣಿಕರ ಬಸ್ಸೊಂದು ಟ್ರಕ್ ಮತ್ತು ಬೈಕ್ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿತ್ತು.

