ಭಯೋತ್ಪಾದನೆ ಕುರಿತು ಲೇಖನ: ಚೀನಾದಿಂದ ಫ್ರಾನ್ಸ್ ಪತ್ರಕರ್ತೆಯ ಗಡಿಪಾರು
ಭಯೋತ್ಪಾದನೆ ಮತ್ತು ಅಲ್ಪ ಸಂಖ್ಯಾತರ ಕುರಿತಂತೆ ಲೇಖನ ಪ್ರಕಟ ಮಾಡಿದ ಹಿನ್ನಲೆಯಲ್ಲಿ ಫ್ರಾನ್ಸ್ ಪತ್ರಕರ್ತೆಯನ್ನು ಚೀನಾ ಸರ್ಕಾರ ಗಡಿಪಾರು ಮಾಡಿದೆ...

ಬೀಜಿಂಗ್: ಭಯೋತ್ಪಾದನೆ ಮತ್ತು ಅಲ್ಪ ಸಂಖ್ಯಾತರ ಕುರಿತಂತೆ ಲೇಖನ ಪ್ರಕಟ ಮಾಡಿದ ಹಿನ್ನಲೆಯಲ್ಲಿ ಫ್ರಾನ್ಸ್ ಪತ್ರಕರ್ತೆಯನ್ನು ಚೀನಾ ಸರ್ಕಾರ ಗಡಿಪಾರು ಮಾಡಿದೆ.
ಚೀನಾದ ಮುಸ್ಲಿಂ ಉಯ್‌ಘೂರ್ ಸಮುದಾಯದವರ ಬಗ್ಗೆ ಸರ್ಕಾರ ಅನುಸರಿಸುತ್ತಿರುವ ನೀತಿಯ ಕುರಿತಂತೆ ಬಹಿರಂಗವಾಗಿಯೇ ಲೇಖನ, ಸುದ್ದಿಗಳನ್ನು ಬರೆದಿದ್ದ ಫ್ರಾನ್ಸ್‌ನ ಎಲ್‌ಓಬ್ಸ್ ಮ್ಯಾಗಜಿನ್ ನ ಉರ್ಸುಲ ಗೌಥಿಯರ್ ಎಂಬ ವರದಿಗಾರ್ತಿಯನ್ನು ಚೀನಾ ಸರ್ಕಾರ ಗಡಿ ಪಾರು ಮಾಡಿದೆ. ಉರ್ಸುಲ ಗೌಥಿಯರ್ ಮೂಲತಃ ಚೀನಾ ಮೂಲದವಳೇ ಆಗಿದ್ದು, ಫ್ರಾನ್ಸ್‌ನ ಎಲ್‌ಓಬ್ಸ್ ಮ್ಯಾಗಜಿನ್ ನ ಚೀನಾದ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು.
ಮ್ಯಾಗಸಿನ್‌ನಲ್ಲಿ ವರದಿಗಾರ್ತಿ ಉರ್ಸುಲಾ ಚೀನಾದಲ್ಲಿರುವ ಉಯ್‌ಘೂರ್ ಅಲ್ಪಸಂಖ್ಯಾತರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯನ್ನು ಟೀಕಿಸಿ ಲೇಖನಗಳನ್ನು ಬರೆದಿದ್ದಳು. ಇದರಿಂದ ಸರ್ಕಾರಕ್ಕೆ ಭಾರೀ ಮುಜುಗರವಾಗಿತ್ತು. ಚೀನಾದ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಭಾರಿ ಚರ್ಚೆಗಳು ನಡೆದಿದ್ದವು. ಚೀನಾದಲ್ಲೂ ಭಯೋತ್ಪಾದಕತೆ ಇದೆ ಎಂಬ ಈ ಲೇಖನ ಚೀನಾ ಸರ್ಕಾರಕ್ಕೆ ತೀವ್ರ ಅಸಹನೆ ಉಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪತ್ರಕರ್ತೆ ಉರ್ಸುಲಾಳನ್ನು ಚೀನಾದಿಂದ ಹೊರಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


