ಏರ್ ಶೋ ವೇಳೆ ವಿಮಾನ ಪತನ: ಇಬ್ಬರು ಪೈಲೆಟ್ ಸಾವು
ವೈಮಾನಿಕ ಪ್ರದರ್ಶನದ ವೇಳೆ ಸೇನಾ ವಿಮಾನ ಪತನವಾಗಿದ್ದು, ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿರುವ ಘಟನೆ...

Published On :
ಜಕಾರ್ತ: ವೈಮಾನಿಕ ಪ್ರದರ್ಶನದ ವೇಳೆ ಸೇನಾ ವಿಮಾನ ಪತನವಾಗಿದ್ದು, ಇಬ್ಬರು ಪೈಲೆಟ್ ಗಳು ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಜಾವಾ ದ್ವೀಪದ ಅದಿ ಸುಸಿಪ್ಟೋ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಕೊರಿಯಾ ನಿರ್ಮಿತ ಟಿ-೫೦ ಯುದ್ದ ವಿಮಾನ ಪತನವಾಗಿದೆ.
ಯೋಗ್ಯಾಕರ್ತನಲ್ಲಿರುವ ಏರ್ ಫೋರ್ಸ್ ಸ್ಕೂಲ್ ನ 70ನೇ ದಿನಾಚರಣೆ ಅಂಗವಾಗಿ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ಪ್ರದರ್ಶನ ನೀಡುತ್ತಿದ್ದ ಸೇನಾ ವಿಮಾನವು ಪತನವಾಗಿದೆ.
ವಿಮಾನದಲ್ಲಿದ್ದ ಇಬ್ಬರು ಪೈಲೆಟ್ ಗಳು ಮೃತಪಟ್ಟಿದ್ದಾರೆ. ಆದರೆ, ಏರ್ ಶೋ ನೋಡಲು ಮೈದಾನದಲ್ಲಿ ನೆರೆದಿದ್ದ ಜನರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


