ಮೂರು ಗುಂಡಿನಲ್ಲಿ ಐವರು ಇಸಿಸ್ ಉಗ್ರರರನ್ನು ಕೊಂದ ಯೋಧ
ಬ್ರಿಟಿಷ್ ಸ್ನೈಪರ್‍ವೊಬ್ಬ ಐವರು ಇಸ್ಲಾಮಿಕ್ ಸ್ಟೇಟ್‍ನ ಉಗ್ರರನ್ನು ಕೊಲ್ಲುವ ಮೂಲಕ ನೂರಾರು ಪ್ರಾಣಗಳನ್ನು ಉಳಿಸಿದ್ದಾನೆ...

Published On :
ಲಂಡನ್: ಬ್ರಿಟಿಷ್ ಸ್ನೈಪರ್‍ವೊಬ್ಬ ಐವರು ಇಸ್ಲಾಮಿಕ್ ಸ್ಟೇಟ್‍ನ ಉಗ್ರರನ್ನು ಕೊಲ್ಲುವ ಮೂಲಕ ನೂರಾರು ಪ್ರಾಣಗಳನ್ನು ಉಳಿಸಿದ್ದಾನೆ. ಈ ಐವರು ಉಗ್ರರು ಆತ್ಮಹತ್ಯಾ ಬಾಂಬ್ ಇಟ್ಟುಕೊಂಡು ಭಾರಿ ಸಂಖ್ಯೆಯ ಸಾವುನೋವು ಮಾಡುವ ಲೆಕ್ಕಾಚಾರದೊಂದಿಗೆ ಬರುತ್ತಿದ್ದರೆಂದು ತಿಳಿದುಬಂದಿದೆ.
ಇದನ್ನು ಗಮನಿಸಿದ ಯೋಧ ರೈಫಲ್ ನಿಂದ ಕೇವಲ ಮೂರು ಗುಂಡು ಸಿಡಿಸಿ ಉಗ್ರರನ್ನು ಕೊಂದಿದ್ದಾನೆಂದು ಡೈಲಿ ಎಕ್ಸ್ ಪ್ರೆಸ್ ಮೂಲಗಳು ತಿಳಿಸಿವೆ. ಈ ಕಾರ್ಯಾಚರಣೆ ನಡೆದದ್ದು ಎರಡು ವಾರಗಳ ಹಿಂದೆ. ಇಸಿಸ್ ನ ಭದ್ರಕೋಟೆ ಯಾಗಿರುವ ಮೋಸಲ್ ನಲ್ಲಿರುವ ಬಾಂಬ್ ಫ್ಯಾಕ್ಟರಿಯಿಂದ ಹತ್ತು ಕಿಲೋಮೀಟರ್ ರದಲ್ಲಿ ಬ್ರಿಟಿಷ್ ಸೇನೆ ಉಗ್ರರ ಜಾಡು ಗಮನಿಸುತ್ತಿತ್ತು.
ಬಾಂಬ್ ಫ್ಯಾಕ್ಟರಿಯ ಸುಳಿವೂ ಸಿಕ್ಕಿತ್ತು. ಶೀಘ್ರದಲ್ಲೇಭಾರಿ ದಾಳಿಗೆ ಸಿದ್ಧವಾಗುತ್ತಿದ್ದ ಇಸಿಸ್ ಗ್ರರಿಂದ ಸುತ್ತ ಗ್ರಾಮಸ್ಥರು ಮತ್ತು ಮಕ್ಕಳ ಪ್ರಾಣ ಅಪಾಯದಲ್ಲಿತ್ತು. ಉರಿಬಿಸಿಲಲ್ಲೂ ಭಾರದ ಕೋಟ್ ಧರಿಸಿ ಬರುತ್ತಿದ್ದ ಉಗ್ರರನ್ನು ಗಮನಿಸಿದ ಸೇನೆ ಅದು ಆತ್ಮಾಹುತಿ ಬಾಂಬರ್‍ಗಳೆಂದು ಗೊತ್ತಾಗಿ ಮೊದಲೇ ಪ್ರತಿದಾಳಿ ನಡೆಸಿತು.
ಇಡೀ ಸೇನೆ ಬಳಕೆಯ ಬದಲು ಈ ಜವಾಬ್ದಾರಿಯನ್ನು ಸ್ನೈಪರ್‍ಗೆ ನೀಡ ಲಾಯ್ತು. ಮೂರು ಗುಂಡಿನಲ್ಲಿ ಕೆಲಸ ಮುಗಿದೇ ಹೋಯ್ತು ಎಂದು ಸೇನಾ ಮೂಲಗಳು ತಿಳಿಸಿವೆ. ಆದರೆ ಸ್ನಿಪರ್ ಯೋಧನ ಹೆಸರು ಮಾತ್ರ ಬೇಕೆಂದೇ ಬಹಿರಂಗಪಡಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


