ಐಎಸ್ ಉಗ್ರರ ಚಿನ್ನದ ಕರೆನ್ಸಿ ಅಸ್ತ್ರ
ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಎಂದೇ ಹೇಳಲಾಗುವ ಐಎಸ್‍ಐಎಸ್, ಇದೀಗ ಚಿನ್ನದ ನಾಣ್ಯ ಟಂಕಿಸುವ ಮೂಲಕ ತನ್ನದೇ ಹಣ ಚಲಾವಣೆಗೆ...

ಲಂಡನ್: ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಎಂದೇ ಹೇಳಲಾಗುವ ಐಎಸ್‍ಐಎಸ್, ಇದೀಗ ಚಿನ್ನದ ನಾಣ್ಯ ಟಂಕಿಸುವ ಮೂಲಕ ತನ್ನದೇ ಹಣ ಚಲಾವಣೆಗೆ ತಂದಿದೆ. ಇದು ಜಗತ್ತಿನ ಇತರ ರಾಷ್ಟ್ರಗಳನ್ನು ತನ್ನ ಜೀತಕ್ಕೆ ಇಟ್ಟುಕೊಳ್ಳುವ ಹುನ್ನಾರದ ಅಮೆರಿಕದ ಬಂಡವಾಳಶಾಹಿ ಹಣಕಾಸು ವ್ಯವಸ್ಥೆಗೆ ತಾನು ಕೊಡುತ್ತಿರುವ ಪೆಟ್ಟು ಎಂದು ಇತ್ತೀಚಿನ ತನ್ನ ವೀಡಿಯೊದಲ್ಲಿ ಐಎಸ್ ಹೇಳಿಕೊಂಡಿದೆ.
ಚಿನ್ನದ ನಾಣ್ಯ ಟಂಕಿಸುವ ಐಎಸ್‍ನ ಟಂಕ ಸಾಲೆಯ ಚಿತ್ರಗಳೂ ವಿಡಿಯೋದಲ್ಲಿದ್ದು, ಚಿನ್ನದ ಕರೆನ್ಸಿ ಮೂಲಕ ಅಮೆರಿಕ ಹಣಕಾಸು ವಹಿವಾಟಿಗೆ ಶಧಕ್ಕೆ ತರುವ ಹುನ್ನಾರದಿಂದಲೇ ಈ ತಂತ್ರಕ್ಕೆ ಮೊರೆಹೋಗಿದೆ ಎನ್ನಲಾಗಿದ್ದು, 9/11 ದಾಳಿಯ ಬಳಿಕ ಅಮೆರಿಕಕ್ಕೆ ನೀಡುತ್ತಿರುವ ಎರಡನೇ ಹೊಡೆತ ಇದು ಎಂದೂ ಐಎಸ್ ಹೇಳಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


