ವಿದೇಶ

ಅಪಹರಣಕ್ಕೊಳಗಾದವರು ಶಿಕ್ಷಕರೆಂದು ತಿಳಿದು ಗೌರವಿಸಿ ಬಿಡುಗಡೆ ಮಾಡಿದ ಇಸೀಸ್ ಭಯೋತ್ಪಾದಕರು

ಶಿಕ್ಷಕರು ಪ್ರಪಂಚದಾದ್ಯಂತ ಗೌರವಾದರಕ್ಕೆ ಪಾತ್ರರಾಗುತ್ತಾರೆ ಎಂಬುದು ತಿಳಿದೇ ಇದೆ. ಆದರೆ ಕ್ರೂರಿಗಳಾದ ಭಯೋತ್ಪಾದಕರೂ ಶಿಕ್ಷಕರಿಗೆ ಗೌರವ ನೀಡುತ್ತಾರೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ.

ಅಪಹರಣಕ್ಕೊಳಗಾದವರು ಶಿಕ್ಷಕರೆಂದು ತಿಳಿದು ಗೌರವಿಸಿ ಬಿಡುಗಡೆ ಮಾಡಿದ ಇಸೀಸ್ ಭಯೋತ್ಪಾದಕರು
ಇಸೀಸ್ಉಗ್ರರು(ಸಾಂದರ್ಭಿಕ ಚಿತ್ರ)
Published On :

ನವದೆಹಲಿ: ಶಿಕ್ಷಕರು ಪ್ರಪಂಚದಾದ್ಯಂತ ಗೌರವಾದರಕ್ಕೆ ಪಾತ್ರರಾಗುತ್ತಾರೆ ಎಂಬುದು ತಿಳಿದೇ ಇದೆ. ಆದರೆ ಕ್ರೂರಿಗಳಾದ ಭಯೋತ್ಪಾದಕರೂ ಶಿಕ್ಷಕರಿಗೆ ಗೌರವ ನೀಡುತ್ತಾರೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ.

ಕೆಲವು ದಿನಗಳ ಹಿಂದೆ ಐಎಸ್ಐಎಸ್ ಉಗ್ರರು 4 ಜನ ಭಾರತೀಯರನ್ನು ಅಪಹರಿಸಿದ್ದರು ಈ ಪೈಕಿ ಇಬ್ಬರು ಶಿಕ್ಷಕರು ಬಿಡುಗಡೆಯಾಗಿದ್ದು, ಭಯೋತ್ಪಾದಕರಾದರೂ ಶಿಕ್ಷಕರಿಗೆ ಗೌರವ ನೀಡಿದರು ಎಂದು ಬಿಡುಗಡೆಯಾದ ಭಾರತೀಯರು ಹೇಳಿದ್ದಾರೆ.  

ಬಿಡುಗಡೆಯಾಗಿರುವ ಇಬ್ಬರು ಭಾರತೀಯರ ಪೈಕಿ ಒಬ್ಬರು ತಮ್ಮ ಅಪಹರಣದ ಸಂಪೂರ್ಣ ವೃತ್ತಾಂತವನ್ನು ಹಂಚಿಕೊಂಡಿದ್ದು ತಾವು ಶಿಕ್ಷಕರೆಂದು ತಿಳಿದ ಕೂಡಲೇ ಉಗ್ರರು ತಮ್ಮನ್ನು ಬಿಡುಗಡೆ ಮಾಡಿದರು ಎಂದು ತಿಳಿಸಿದ್ದಾರೆ. ನಮ್ಮ ವೃತ್ತಿ ನಮ್ಮನ್ನು ಬದುಕಿಸಿದೆ.ಅಪಹರಣ ಮಾಡಿದ್ದ ಭಯೋತ್ಪಾದಕರು ತಮಗೆ ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿರುವುದಾಗಿ ತಿಳಿಸಿ ಬಿಡುಗಡೆ ಮಾಡಿದ್ದಾರೆ ಎಂದು ಸೈರ್ಟ್ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಪಹರಣಕ್ಕೊಳಗಾಗಿದ್ದ ಪ್ರಾಧ್ಯಾಪಕ ವಿಜಯ್ ಕುಮಾರ್ ಮಾಹಿತಿ ನೀಡ್ದಿದ್ದಾರೆ.

ಕರ್ನಾಟದವರಾದ ಕುಮಾರ್ ಹಾಗೂ ಲಕ್ಷ್ಮಿಕಾಂತ್ ರಾಮಕೃಷ್ಣ ಸೇರಿದಂತೆ ಇನ್ನು ಇಬ್ಬರು ಭಾರತೀಯರನ್ನು  ಅವರನ್ನು ಇಸೀಸ್ ಭಯೋತ್ಪಾದಕರು ಅಪಹರಣ ಮಾಡಿ ಕತ್ತಲೆ ಕೋಣೆಯೊಂದರಲ್ಲಿ ಕುಡಿ ಹಾಕಿದ್ದರು. ದೂರದಲ್ಲಿ ಸಂಚರಿಸುತ್ತಿದ್ದ ವಾಹನಗಳ ಶಬ್ದವಲ್ಲದೇ ಮತ್ತೇನೂ ಕೇಳಿಸುತ್ತಿರಲಿಲ್ಲ ಎಂದು ಲಕ್ಷ್ಮಿಕಾಂತ್ ರಾಮಕೃಷ್ಣ ಹೇಳಿದ್ದಾರೆ.

"ನಾವಿದ್ದ  ಕೋಣೆಗೆ ಬಂದ ಶೇಖ್ ಎಂಬ ವ್ಯಕ್ತಿ ನಮ್ಮ ಧರ್ಮದ ಬಗ್ಗೆ ವಿಚಾರಿಸತೊಡಗಿದ. ನಂತರ ಯಾರೊಂದಿಗೋ ಫೋನ್ ನಲ್ಲಿ ಮಾತನಾಡಿದ ಅವನು, ನಮಗೆ ಯಾವುದೇ ತೊಂದರೆ ಮಾಡದೇ ಬಿಡುಗಡೆ ಮಾಡುವುದಾಗಿ ತಿಳಿಸಿದ ಎಂದು ಅಪಹರಣಕ್ಕೊಳಗಾಗಿದ್ದ ಭಾರತೀಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.