25 ರ ನಂತರದ ತಾಯ್ತನ ನಿಮ್ಮನ್ನು 40ನೇ ವಯಸ್ಸಿನವರೆಗೂ ಆರೋಗ್ಯವಾಗಿಡುತ್ತದೆ
ಹೆಣ್ಣಿಗೆ ತಾಯ್ತನ ಒಂದು ವಿಶೇಷ ಅನುಭವ, ತಾಯಿಯಾಗದ ಹೊರತು ಹೆಣ್ಣಿನ ಜೀವನ ಅಪೂರ್ಣ ಎಂಬೆಲ್ಲಾ ಮಾತುಗಳಿವೆ. ಇದೆಲ್ಲದರ ನಡುವೆ ಯಾವ ವಯಸ್ಸಿನಲ್ಲಿ ...

ಹೆಣ್ಣಿಗೆ ತಾಯ್ತನ ಒಂದು ವಿಶೇಷ ಅನುಭವ, ತಾಯಿಯಾಗದ ಹೊರತು ಹೆಣ್ಣಿನ ಜೀವನ ಅಪೂರ್ಣ ಎಂಬೆಲ್ಲಾ ಮಾತುಗಳಿವೆ. ಇದೆಲ್ಲದರ ನಡುವೆ ಯಾವ ವಯಸ್ಸಿನಲ್ಲಿ ತಾಯಿಯಾದರೇ ಸೂಕ್ತ ಎಂಬುದು ಹಲವರನ್ನು ಕಾಡುವ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಎಂಬಂತೆ ವಾಷಿಂಗ್ಟನ್ ಡಿ.ಸಿಯಲ್ಲಿ ನಡೆಸಿದ ಸಂಶೋಧನೆಯೊಂದು ಯಾವ ವಯಸ್ಸಿನಲ್ಲಿ ತಾಯಿಯಾದರೇ ಸೂಕ್ತ ಎಂಬುದನ್ನು ಬಹಿರಂಗ ಪಡಿಸಿದೆ.
25 ರಿಂದ 35 ರ ವಯಸ್ಸಿನ ಒಳಗೆ ತಾಯಿಯಾದರೇ 40 ವರ್ಷದವರೆಗೂ ಆರೋಗ್ಯವಂತರಾಗಿರಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ವಾಷಿಂಗ್ಟನ್ ಡಿ.ಸಿಯ ಓಹಿಯೋ ವಿಶ್ವ ವಿದ್ಯಾನಿಲಯ ನಡೆಸಿದ ಸಂಶೋಧನೆ ಪ್ರಕಾರ, ಮಹಿಳೆ 25-35 ವಯಸ್ಸಿನ ಒಳಗೆ ಮೊದಲ ಬಾರಿಗೆ ತಾಯಿಯಾದರೆ ಆಕೆ 40 ನೇ ವಯಸ್ಸಿನವರೆಗೂ ಯಾವುದೇ ರೀತಿಯ ಸಮಸ್ಯೆಯಿಲ್ಲದೇ ಆರೋಗ್ಯ ವಂತಳಾಗಿರುತ್ತಾಳೆ ಎಂದು ತಿಳಿಸಿದೆ.
20 ನೇ ವಯಸ್ಸು ಅಥವಾ ಅದಕ್ಕಿಂತ ಚಿಕ್ಕ ವಯಸ್ಸಿನಲ್ಲೇ ತಾಯಿಯಾದವರಿಗೆ ಆರೋಗ್ಯ ಸಮಸ್ಯೆ ಹೆಚ್ಚು ಉಲ್ಬಣಿಸುತ್ತದೆ ಎಂಬುದನ್ನು ಸಂಶೋಧನೆಯ ವರದಿ ತಿಳಿಸಿದೆ. ಇನ್ನೂ ಸಿಂಗಲ್ ಮದರ್ ಆದವರೂ ಕೂಡ , ಹಲವಾರು ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ, ಇದರಿಂದ ಮಹಿಳೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ.
ಒಟ್ಟಿನಲ್ಲಿ ಅತಿ ಬೇಗ, ಅಥವಾ ಅತಿ ನಿಧಾನವಾಗಿ ತಾಯಿಯಾಗುವುದು ಎರಡೂ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತದೆ. ಹೀಗಾಗಿ ಸೂಕ್ತ ವಯಸ್ಸಿನಲ್ಲಿ ಅಂದರೆ 25ರಿಂದ 35 ನೇ ವಯಸ್ಸಿನ ಒಳಗೆ ತಾಯಿಯಾಗುವುದು ಸೂಕ್ತ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


